Monday, January 20, 2025
Monday, January 20, 2025

ಶ್ರೀ ವಿನಾಯಕ ಯುವಕ ಮಂಡಲ (ರಿ) ಸಾಯ್ಬ್ರಕಟ್ಟೆ- ಯಡ್ತಾಡಿ: 12 ನೇ ವರ್ಷದ ಶ್ರೀ ಶಾರದ ಮಹೋತ್ಸವ

ಶ್ರೀ ವಿನಾಯಕ ಯುವಕ ಮಂಡಲ (ರಿ) ಸಾಯ್ಬ್ರಕಟ್ಟೆ- ಯಡ್ತಾಡಿ: 12 ನೇ ವರ್ಷದ ಶ್ರೀ ಶಾರದ ಮಹೋತ್ಸವ

Date:

ಬ್ರಹ್ಮಾವರ, ಅ.18: ಶ್ರೀ ವಿನಾಯಕ ಯುವಕ ಮಂಡಲ (ರಿ) ಸಾಯ್ಬ್ರಕಟ್ಟೆ- ಯಡ್ತಾಡಿ ಇವರ ಆಶ್ರಯದಲ್ಲಿ 12 ನೇ ವರ್ಷದ ಸಾರ್ವಜನಿಕ ಶ್ರೀ ಶಾರದ ಮಹೋತ್ಸವ ಕಾರ್ಯಕ್ರಮವು ಸಾಯ್ಬ್ರಕಟ್ಟೆ ಮಹಾತ್ಮ ಗಾಂಧಿ ಪ್ರೌಢಶಾಲೆಯ ಸಭಾಭವನದಲ್ಲಿ ವೇದಮೂರ್ತಿ ರಾಜೇಶ್ ಐತಾಳ್ ಅವರ ಪೂಜಾ ಮಾರ್ಗದರ್ಶನದಲ್ಲಿ ಅ.20 ರಿಂದ ಅ.23 ರವರೆಗೆ ನಡೆಯಲಿದೆ. ಅ.20 ರಂದು ಬೆಳಿಗ್ಗೆ 8 ಗಂಟೆಯಿಂದ ಸಂಭ್ರಮದ ಮೆರವಣಿಗೆಯ ಮೂಲಕ ಪೂರ್ಣಕುಂಭ ಕಲಶದೊಂದಿಗೆ ವೈಭವದ ಪುರಪ್ರವೇಶ ಹಾಗೂ ಶ್ರೀ ಶಾರದಾಂಬೆಯ ವಿಗ್ರಹ ಪ್ರತಿಷ್ಠಾಪನೆ, 6 ಕಾಯಿ ಗಣಹೋಮ, ಸಂಜೆ 6 ರಿಂದ ಶಾಲಾ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ, ಸಂಜೆ 7.30ಕ್ಕೆ ಸಾಧಕನ ಸಾಧನೆಯ ಹೆಜ್ಜೆ ಗುರುತು ಅನಾವರಣ, ‘ಶ್ರೀ ವಿನಾಯಕ ಸಾಧನ ಶ್ರೀ ಪುರಸ್ಕಾರ’ ಈಶ್ವರ್ ಮಲ್ಪೆ ಅವರಿಗೆ ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದ್ದು, ತುಳುನಾಡ ಗಾನ ಗಂಧರ್ವ ಬಿರುದಾಂಕಿತ ಪುತ್ತೂರು ಜಗದೀಶ್ ಆಚಾರ್ಯ ಮತ್ತು ಬಳಗದವರಿಂದ ‘ಸಂಗೀತ ಗಾನ ಸಂಭ್ರಮ’ ನಡೆಯಲಿದೆ.

ಅ.21 ಬೆಳಿಗ್ಗೆ 9.30 ರಿಂದ ಸತ್ಯನಾರಾಯಣ ಪೂಜೆ , ದುರ್ಗಾಹೋಮ, ಸಂಜೆ 8.30ಕ್ಕೆ ಓಂಕಾರ ಕಲಾವಿದರು ಕನ್ನುಕೆರೆ ತೆಕ್ಕಟ್ಟೆ ಅವರಿಂದ ಸಾಮಾಜಿಕ ಹಾಸ್ಯಮಯ ಸಾಮಾಜಿಕ ನಗೆನಾಟಕ ‘ಅಗೋಚರ’ನಡೆಯಲಿದ್ದು, ಅ.22 ಆದಿತ್ಯವಾರ 9.30ಕ್ಕೆ ಚಂಡಿಕಾಹೋಮ, ಮಧ್ಯಾಹ್ನ 2.30 ಕ್ಕೆ ‘ಮುದ್ದುಕೃಷ್ಣ ಸ್ಪರ್ಧೆ’, 6.30 ಕ್ಕೆ ಭಕ್ತಿಸುಧೆ ಭಜನಾ ಕಾರ್ಯಕ್ರಮ, 7.30 ಕ್ಕೆ ದುರ್ಗಾದೀಪ ನಮಸ್ಕಾರ ಪೂಜೆ ನಡೆಯಲಿದೆ. ಅ.23 ರಂದು ಬೆಳಿಗ್ಗೆ ಚಂಡಿಕಾಹೋಮ, ಅಕ್ಷರಾಭ್ಯಾಸ, ಮಧ್ಯಾಹ್ನ 12.30 ಕ್ಕೆ ಮಹಾ ಅನ್ನಸಂತರ್ಪಣೆ, 1.30ಕ್ಕೆ ಸ್ಥಳೀಯ ಪ್ರತಿಭೆಗಳ ಸಾಂಸ್ಕೃತಿಕ ಕಾರ್ಯಕ್ರಮ, 3.00 ರಿಂದ ಮಹಿಳೆಯರಿಗಾಗಿ ಮನೋರಂಜನಾ ಆಟೋಟ ಸ್ಪರ್ಧೆ, ಮೊಸರು ಕುಡಿಕೆ ನಡೆಯಲಿದ್ದು ಸಂಜೆ 6.00 ಗಂಟೆಗೆ ಶ್ರೀ ದೇವಿಯ ವೈಭವದ ಶೋಭಾಯಾತ್ರೆಯ ಮೂಲಕ ಜಲಸ್ಥಂಬನ ವಿಶೇಷ ಆಕರ್ಷಣೆಯಾಗಿ ಕೀಲುಕುದುರೆ, ಗೊಂಬೆ ಕುಣಿತ, ಹಾಗೂ ಸ್ಥಬ್ದ ಚಿತ್ರಗಳು, ಶ್ರೀ ಗುರು ಕುಣಿತ ಭಜನಾ ತಂಡ ಅಂಬಲಪಾಡಿ ಉಡುಪಿ ಇವರಿಂದ ಮೆರೆವಣಿಗೆಯಲ್ಲಿ ಕುಣಿತ ಭಜನೆ ಇರಲಿದೆ ಎಂದು ಸಂಘಟಕರ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಪರ್ಕಳ ಮಹಾಲಿಂಗೇಶ್ವರ ದೇವಸ್ಥಾನ ಕೆರೆ ಮರು ನಿರ್ಮಾಣಕ್ಕೆ ಶಾಸಕ ಯಶ್ಪಾಲ್ ಸುವರ್ಣ ಸೂಚನೆ

ಮಣಿಪಾಲ, ಜ.20: ಪರ್ಕಳ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕೆರೆ ಕಾಮಗಾರಿ ಸ್ಥಳಕ್ಕೆ...

ಕೋಡಿ ಮಹಾಸತೀಶ್ವರಿ ಗೆಂಡೋತ್ಸವ ಸಂಪನ್ನ

ಕೋಟ, ಜ.20: ಇಲ್ಲಿನ ಕರಾವಳಿ ಕಡಲತಟದಲ್ಲಿ ಆರಾಧಿಸುವ ದೇವಿ ಶ್ರೀ ಮಹಾಸತೀಶ್ವರಿ...

ಪಂಚವರ್ಣದ ನೇತೃತ್ವದಲ್ಲಿ 238 ನೇ ವಾರದ ಪರಿಸರ ಸ್ನೇಹಿ ಅಭಿಯಾನ

ಕೋಟ, ಜ.20: ಪಂಚವರ್ಣ ಯುವಕ ಮಂಡಲ ಕೋಟ ಇದರ ಪ್ರವರ್ತಿತ ಪಂಚವರ್ಣ...

ಹನೆಹಳ್ಳಿ: ವಿದ್ಯಾರ್ಥಿಗಳಿಗೆ ಉಚಿತ ಶೂ ವಿತರಣೆ

ಬಾರಕೂರು, ಜ.20: ಲಯನ್ಸ್ ಕ್ಲಬ್ ಬಾರ್ಕೂರು (Dist 317 zone 1Region...
error: Content is protected !!