ಕೋಟ, ಅ. 7: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಶಿವರಾಮ ಕಾರಂತರ ಹೆಸರಿನಲ್ಲಿ ಥೀಮ್ ಪಾರ್ಕ್ ನಿರ್ಮಾಣ ಮಾಡಿ ದಿನ ನಿತ್ಯ ಎನ್ನುವಂತೆ ಒಂದಲ್ಲ ಒಂದು ಸಾಹಿತ್ಯಿಕ-ಸಾಂಸ್ಕೃತಿಕ ಚಟುವಟಿಕೆ ಆಯೋಜಿಸುವ ಮೂಲಕ ಕಡಲತಡಿಯ ಭಾರ್ಗವನಿಗೆ ವಿಶೇಷ ಗೌರವ ನೀಡಲಾಗುತ್ತಿದೆ. ಇಲ್ಲಿನ ವಿಭಿನ್ನ ಚಟುವಟಿಕೆ ಮೂಲಕ ಸಾಹಿತ್ಯಿಕ-ಸಾಂಸ್ಕೃತಿಕ ರಾಯಭಾರಿಯಾಗಿ ಕಾರಂತ ಥೀಮ್ ಪಾರ್ಕ್ ರೂಪುಗೊಳ್ಳುತ್ತಿದೆ ಎಂದು ರಾಷ್ಟ್ರಪ್ರಶಸ್ತಿ ವಿಜೇತ ಶಿಕ್ಷಕ ಸೋಮಶೇಖರ್ ಶೆಟ್ಟಿ ಹೇಳಿದರು. ಅವರು ಕೋಟದ ಡಾ. ಶಿವರಾಮ ಕಾರಂತ ಥೀಮ್ ಪಾರ್ಕ್ ನಲ್ಲಿ ಕೋಟತಟ್ಟು ಗ್ರಾಮ ಪಂಚಾಯತ್, ಡಾ.ಶಿವರಾಮ ಕಾರಂತ ಟ್ರಸ್ಟ್ (ರಿ.) ಉಡುಪಿ, ಡಾ. ಶಿವರಾಮ ಕಾರಂತ ಹುಟ್ಟೂರ ಪ್ರತಿಷ್ಠಾನ(ರಿ.) ಕೋಟ ಆಶ್ರಯದಲ್ಲಿ ಡಾ. ಶಿವರಾಮ ಕಾರಂತ ಜನ್ಮದಿನೋತ್ಸವ ಮತ್ತು ಹುಟ್ಟೂರ ಪ್ರಶಸ್ತಿಗೆ 19 ನೇ ವರ್ಷದ ಸಂಭ್ರಮ ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಇಂಪನ- 2023(ಸಂಗೀತ ಸಂಪುಟದ ಸಂಚಲನ) ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ ಚಲನಚಿತ್ರ ಉತ್ಸವ,ಸಂವಾದ ಮಾತುಕತೆ ಹಾಗೂ ಕಾರಂತ ದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು..
ಸಿನಿಮಾ, ರಂಗಭೂಮಿ ಕಲಾವಿದ ಪ್ರಭಾಕರ್ ಕುಂದರ್, ಕಾರಂತ ಪ್ರತಿಷ್ಠಾನದ ಟ್ರಸ್ಟಿ ಇಬ್ರಾಹಿಂ ಸಾಹೇಬ್, ಕೋಟತಟ್ಟು ಗ್ರಾಮ ಪಂಚಾಯತ್ ಸದಸ್ಯರಾದ ರವೀಂದ್ರ ತಿಂಗಳಾಯ, ವಿದ್ಯಾ ಸಾಲಿಯಾನ್, ಜ್ಯೋತಿ, ಬಾಲನಟಿಯಾದ ಶ್ಲಾಘ ಸಾಲಿಗ್ರಾಮ, ಸಮೃದ್ಧಿ ಉಪಸ್ಥಿತರಿದ್ದರು. ಸುಮನಾ ಹೇರ್ಳೆ ಕಾರ್ಯಕ್ರಮ ನಿರೂಪಿಸಿದರು. ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಭಾ ಕಾರ್ಯಕ್ರಮದ ನಂತರ ಕೋಟ ವಿವೇಕ ಸಂಸ್ಥೆಯ ವಿದ್ಯಾರ್ಥಿಗಳಿಂದ ಕಾರಂತ ದರ್ಶನ ಹಾಗೂ ಮೂಕಜ್ಜಿಯ ಕನಸುಗಳು ಸಿನಿಮಾ ಪ್ರದರ್ಶನ ನಡೆಯಿತು.