ಉಡುಪಿ, ಅ.5: ಪ್ರವಾಸೋದ್ಯಮ ಚಟುವಟಿಕೆ ನಡೆಸುತ್ತಿರುವವರು ಕರ್ನಾಟಕ ಟೂರಿಸಂ ಟ್ರೇಡ್ ಆಕ್ಟ್ 2015 ರ ಅನ್ವಯ ಎಲ್ಲಾ ಪ್ರವಾಸೋದ್ಯಮ ಚಟುವಟಿಕೆಯನ್ನು ಕಡ್ಡಾಯವಾಗಿ ಪ್ರವಾಸೋದ್ಯಮ ಇಲಾಖೆಯಿಂದ ನೊಂದಣಿ ಮಾಡಬೇಕು. ಜಿಲ್ಲೆಯಲ್ಲಿರುವ ಹೋಮ್ ಸ್ಟೇ, ಹೋಟೆಲ್ ಅಥವಾ ರೆಸಾರ್ಟ್, ರೆಸ್ಟೋರೆಂಟ್, ಟ್ರಾವೆಲ್ ಏಜೆಂಟ್ಸ್, ಟೂರ್ ಆಪರೇಟರ್, ಟೂರಿಸ್ಟ್ ಟ್ರಾನ್ಸಪೋರ್ಟ್ ಆಪರೇಟರ್, ಅಮ್ಯೂಸಮೆಂಟ್ ಪಾರ್ಕ್, ಕ್ಯಾರವನ್ ಟೂರಿಸಂ ಚಟುವಟಿಕೆಗಳನ್ನು ನಡೆಸುವವರು ಹಾಗೂ ಈಗಾಗಲೇ ನಡೆಸುತ್ತಿರುವವರು ಕಡ್ಡಾಯವಾಗಿ http://kttf.karnatakatourism.org ನಲ್ಲಿ ನೊಂದಣಿ ಮಾಡಿಸಿಕೊಳ್ಳಬೇಕು.
ಟೂರಿಸ್ಟ್ ಬೋಟಿಂಗ್, ಎಲ್ಲಾ ತರಹದ ಜಲಸಾಹಸ ಕ್ರೀಡೆಗಳು, ಭೂ ಸಾಹಸ ಕ್ರೀಡೆಗಳು ಮತ್ತು ವಾಯು ಸಾಹಸ ಕ್ರೀಡೆಗಳನ್ನು ಹಾಗೂ ಇತರೆ ಯಾವುದೇ ಪ್ರವಾಸೋದ್ಯಮ ಚಟುವಟಿಕೆಗಳನ್ನು ನಡೆಸಲು ಪ್ರವಾಸೋದ್ಯಮ ಇಲಾಖೆಯಿಂದ ಅನುಮೋದನೆ ನೀಡಲಾಗುತ್ತಿದ್ದು, ಪ್ರಸ್ತುತ ಅನುಮೋದನೆ ಪಡೆಯದೇ ಅಥವಾ ನೊಂದಣಿ ಮಾಡಿಸದೇ ಚಟುವಟಿಕೆ ನಡೆಸುತ್ತಿರುವ ಬಗ್ಗೆ ಪ್ರವಾಸೋದ್ಯಮ ಇಲಾಖೆಯ ಗಮನಕ್ಕೆ ಬಂದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಜಿಲ್ಲಾಧಿಕಾರಿಗಳ ಕಛೇರಿ ಸಂಕೀರ್ಣ, ಎ ಬ್ಲಾಕ್, ಎರಡನೇ ಮಹಡಿ, ಕೊಠಡಿ ಸಂಖ್ಯೆ:303, ರಜತಾದ್ರಿ, ಮಣಿಪಾಲ, ಉಡುಪಿ ದೂರವಾಣಿ ಸಂಖ್ಯೆ: 0820-2574868 ಅನ್ನು ಕಛೇರಿ ಅವಧಿಯಲ್ಲಿ ಸಂಪರ್ಕಿಸಬಹುದಾಗಿದೆ ಎಂದು ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.