ಕಾರ್ಕಳ, ಅ.1: ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ಜ್ಞಾನಸುಧಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆಯ ಮೂಲಕ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಫುಟ್ ಬಾಲ್: ಪದವಿಪೂರ್ವ ಶಿಕ್ಷಣ ಇಲಾಖೆ ಹಾಗೂ ಗ್ರೀನ್ ವ್ಯಾಲಿ ಪದವಿಪೂರ್ವ ಕಾಲೇಜು ಶಿರೂರ್ ಇಲ್ಲಿನ ಆಶ್ರಯದಲ್ಲಿ ನಡೆದ ಜಿಲ್ಲಾಮಟ್ಟದ ಫುಟ್ ಬಾಲ್ ಪಂದ್ಯಾಟದಲ್ಲಿ ಕಾರ್ಕಳ ತಾಲೂಕು ತಂಡವನ್ನು ಪ್ರತಿನಿಧಿಸಿದ ಅಮೋಘ ಮನೋಜ್ ಶೆಟ್ಟಿ ಹಾಗೂ ಪ್ರಣಯ್, ಇವರಲ್ಲಿ ಅಮೋಘ ಮನೋಜ್ ಶೆಟ್ಟಿ ರಾಜ್ಯಮಟ್ಟಕ್ಕೆ ಆಯ್ಕೆಗೊಂಡಿರುತ್ತಾರೆ.
ತ್ರೋಬಾಲ್: ಪದವಿಪೂರ್ವ ಶಿಕ್ಷಣ ಇಲಾಖೆ ಹಾಗೂ ಎಸ್.ಎಂ.ಎಸ್ ಪದವಿಪೂರ್ವ ಕಾಲೇಜು ಬ್ರಹ್ಮಾವರ ಇಲ್ಲಿನ ಆಶ್ರಯದಲ್ಲಿ ನಡೆದ ಜಿಲ್ಲಾಮಟ್ಟದ ತ್ರೋಬಾಲ್ ಪಂದ್ಯಾಟದಲ್ಲಿ ಬಾಲಕಿಯರ ತಂಡವು ಕಾರ್ಕಳ ತಾಲೂಕನ್ನು ಪ್ರತಿನಿಧಿಸಿ, ವಿದ್ಯಾರ್ಥಿನಿಯರಾದ ಪಿ.ಉಷಾ ನಾಯಕ್ ಹಾಗೂ ಶ್ರಾವ್ಯ ರಾಜ್ಯಮಟ್ಟಕ್ಕೆ ಆಯ್ಕೆಗೊಂಡಿರುತ್ತಾರೆ.
ಜಂಪ್ ರೋಪ್: ಉಡುಪಿ ಪದವಿಪೂರ್ವ ಶಿಕ್ಷಣ ಇಲಾಖೆ ಹಾಗೂ ನ್ಯಾಶನಲ್ ಪಿ.ಯು ಕಾಲೇಜು ಬಾರ್ಕೂರು ಇಲ್ಲಿನ ಆಶ್ರಯದಲ್ಲಿ ನಡೆದ ಜಿಲ್ಲಾಮಟ್ಟದ ಜಂಪ್ ರೋಪ್ ಪಂದ್ಯಾಟದಲ್ಲಿ ಕಾಲೇಜಿನ ಐವರು ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಗೊಂಡಿರುತ್ತಾರೆ. 30 ಸೆಕೆಂಡ್ ಡಬಲ್ ಅಂಡರ್ ವಿಭಾಗದಲ್ಲಿ ಚಿನ್ಮಯ್ ದೇಶಪಾಂಡೆ ಹಾಗೂ ಸುಹಾಸ್ ಗಣೇಶ್ ರಾವ್, 30 ಸೆಕೆಂಡ್ ಸ್ಪೀಡ್ ವಿಭಾಗದಲ್ಲಿ ಅರ್ಜುನ್ ಪೈ, ಹಾಗೂ 3 ಮಿನುಟ್ಸ್ ಎಂಡರೆನ್ಸ್ ವಿಭಾಗದಲ್ಲಿ ಶ್ರೇಯಸ್ ಭಟ್ ಹಾಗೂ ಮಾನ್ಯ ಎಂ.ಎ. ಪ್ರಥಮ ಸ್ಥಾನ ಪಡೆದ ಸಾಧಕ ವಿದ್ಯಾರ್ಥಿಗಳಾಗಿದ್ದಾರೆ.
ಸಾಧಕ ವಿದ್ಯಾರ್ಥಿಗಳನ್ನು ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ಅದ್ಯಕ್ಷರಾದ ಡಾ. ಸುಧಾಕರ್ ಶೆಟ್ಟಿ ಅಭಿನಂದಿಸಿ ಶುಭ ಹಾರೈಸಿದ್ದಾರೆ.