ಉಡುಪಿ, ಸೆ. 18: ಮಲಬಾರ್ ಗೋಲ್ಡ್ & ಡೈಮಂಡ್ಸ್ ಹೆಸರಾಂತ ಶೋರೂಂನಲ್ಲಿ ಹೊಚ್ಚ ಹೊಸದಾದ ಬೆಳ್ಳಿಯ ಆಭರಣದ ಪ್ರದರ್ಶನವನ್ನು ಉದ್ಘಾಟಿಸಲಾಯಿತು. ಸೆ.17 ರಿಂದ 25 ರವರೆಗೆ ನಡೆಯಲಿರುವ ಈ ಪ್ರದರ್ಶನದಲ್ಲಿ ಬೆಳ್ಳಿಯ ಆಭರಣಗಳು ಮತ್ತು ಇತರೆ ಉತ್ಪನ್ನಗಳನ್ನು ಪ್ರದರ್ಶಿಸಲಾಗುತ್ತಿದೆ. ಗ್ರಾಹಕರಿಗೆ ಸಾಂಪ್ರದಾಯಿಕ ವಸ್ತುಗಳು ಮತ್ತು ಆಭರಣಗಳಿಂದ ತೊಡಗಿ ಆಧುನಿಕ ಹಾಗೂ ಕನಿಷ್ಟ ತುಣುಕುಗಳ ಖಚಿತ ಗುಣಮಟ್ಟದ ಸಿಲ್ವರ್
ಇದರ ಅನಾವರಣ ಕಾರ್ಯಕ್ರಮವನ್ನು ಮುಖ್ಯ ಅತಿಥಿಗಳಾದ ಅನ್ವಿತಾ ಶೆಟ್ಟಿ,ತ್ರಾಷಾ ಶೆಟ್ಟಿ ನೆರವೇರಿಸಿದರು. ಶಾಖಾ ವ್ಯವಸ್ಥಾಪಕರಾದ ಪುರಂದರ ತಿಂಗಳಾಯ, ರಾಘವೇಂದ್ರ ನಾಯಕ್, ಮುಸ್ತಫಾ ಎ.ಕೆ., ತಂಝೀಮ್ ಶಿರ್ವ ಸಿಬ್ಬಂದಿ ವರ್ಗದವರು ಗ್ರಾಹಕರು ಉಪಸ್ಥಿತರಿದ್ದರು.
ಮಲಬಾರ್ ಗೋಲ್ಡ್ & ಡೈಮಂಡ್ಸ್ ತನ್ನ ಎಲ್ಲಾ ಆಭರಣಗಳಿಗೆ ಜೀವನಪರ್ಯಂತ ಉಚಿತ ನಿರ್ವಹಣೆ, ಒಂದು ವರ್ಷ ಉಚಿತ ವಿಮೆ ಸಂರಕ್ಷಣೆ, ಪಾರದರ್ಶಕ ಮತ್ತು ವಿವರವಾದ ದರದ ಪಟ್ಟಿ ಹಾಗು ಬೈಬ್ಯಾಕ್ ಗ್ಯಾರೆಂಟಿಯನ್ನು ಸಾದರಪಡಿಸುತ್ತಿದೆ. ವಿಘ್ನೇಶ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.