ಕಾಪು, ಸೆ. 15: ಸ್ವಸ್ಥ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಮಹತ್ವದಾಗಿದೆ. ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳಲ್ಲಿ ಸದ್ಗುಣಗಳು ಬೆಳೆಯುವಂತೆ ಶಿಕ್ಷಕರು ಮಾರ್ಗದರ್ಶನ ನೀಡಬೇಕು ಎಂದು ಮನಶಾಸ್ತ್ರಜ್ಞರಾದ ಡಾ. ನಿರಂಜನ ಶೆಟ್ಟಿ ಹೇಳಿದರು. ಅವರು ಕಾಪು ರೋಟರಿ ವತಿಯಿಂದ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಮಾತನಾಡಿದರು. ಕಾಪು ಪರಿಸರದ ಶಾಲೆಗಳಾದ ದಂಡತೀರ್ಥ ಆಂಗ್ಲ ಮಾಧ್ಯಮ ಶಾಲೆಯ ಜಾನೆಟ್ ಮಿರಾಂಡ ಹಾಗೂ ರಜನಿ, ಪೊಲಿಪು ಸರಕಾರಿ ಶಾಲೆಯ ನಂದಿತಾ ಹಾಗೂ ಆಶಾ ವಾಸುದೇವ್, ಮಹಾದೇವಿ ಪ್ರೌಢಶಾಲೆಯ ಗೋಪಾಲ್ ನಾಯ್ಕ್, ಕಾಪು ಮಾದರಿ ಶಾಲೆಯ ವಿದ್ಯಾವತಿ ಇವರನ್ನು ಸನ್ಮಾನಿಸಿ ‘ನೇಶನ್ ಬಿಲ್ಡರ್’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಾಪು ರೋಟರಿ ಅಧ್ಯಕ್ಷ ರಾಜೇಂದ್ರನಾಥ್ ಸ್ವಾಗತಿಸಿದರು. ಬಾಲಕೃಷ್ಣ ಆಚಾರ್ಯ, ಕೆ.ಸದಾಶಿವ ಭಟ್, ಮಾಧವ ಸಾಲಿಯಾನ್ ಸನ್ಮಾನಿತ ಶಿಕ್ಷಕರನ್ನು ಪರಿಚಯಿಸಿದರು. ಶ್ರೀನಿವಾಸ್ ರಾವ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ವೇಣುಕೃಷ್ಣ ವಂದಿಸಿ ವಿದ್ಯಾಧರ ಪುರಾಣಿಕ್ ಕಾರ್ಯಕ್ರಮ ನಿರೂಪಿಸಿದರು.