ಉಡುಪಿ, ಆ. 27: ಉಡುಪಿ ಜಿಲ್ಲಾ ಪದವಿಪೂರ್ವ ವಾಣಿಜ್ಯಶಾಸ್ತ್ರ ಉಪನ್ಯಾಸಕರ ಸಂಘದ 2023-24ನೇ ಸಾಲಿನ ಅಧ್ಯಕ್ಷರಾಗಿ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಎಂ. ರಾಘವೇಂದ್ರ ಭಟ್ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ಬ್ರಹ್ಮಾವರ ಎಸ್.ಎಮ್.ಎಸ್.ಪ.ಪೂ.ಕಾಲೇಜಿನ ಹರೀಶ್ ಕುಮಾರ್, ಜೊತೆ ಕಾರ್ಯದರ್ಶಿಗಳಾಗಿ ಹೆಬ್ರಿ ಸರ್ಕಾರಿ ಪ.ಪೂ.ಕಾಲೇಜಿನ ಬಲರಾಮ ವೈದ್ಯ, ಮಲ್ಪೆ ಸರ್ಕಾರಿ ಪ.ಪೂ.ಕಾಲೇಜಿನ ಹೇಮಲತಾ ಹಾಗೂ ಕೋಶಾಧಿಕಾರಿಯಾಗಿ ತೆಂಕನಿಡಿಯೂರು ಸ. ಪ. ಪೂ. ಕಾಲೇಜಿನ ಪ್ರಮೀಳಾ ಡಿ. ಅಂಚನ್ ಆಯ್ಕೆಯಾದರು.
ಉಡುಪಿ ಜಿಲ್ಲಾ ಪದವಿಪೂರ್ವ ವಾಣಿಜ್ಯಶಾಸ್ತ್ರ ಉಪನ್ಯಾಸಕರ ಸಂಘದ ಅಧ್ಯಕ್ಷರಾಗಿ ಎಂ. ರಾಘವೇಂದ್ರ ಭಟ್ ಆಯ್ಕೆ

ಉಡುಪಿ ಜಿಲ್ಲಾ ಪದವಿಪೂರ್ವ ವಾಣಿಜ್ಯಶಾಸ್ತ್ರ ಉಪನ್ಯಾಸಕರ ಸಂಘದ ಅಧ್ಯಕ್ಷರಾಗಿ ಎಂ. ರಾಘವೇಂದ್ರ ಭಟ್ ಆಯ್ಕೆ
Date: