ಉಡುಪಿ, ಆ. 25: ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಶ್ರೀ ಪಾದಂಗಳವರ ಚತುರ್ಥ ಪರ್ಯಾಯ ಮಹೋತ್ಸವದ ಸ್ವಾಗತ ಸಮಿತಿಯ ಭಾಗವಾದ ಹೊರೆ ಕಾಣಿಕೆ ಸಮಿತಿಯ ಪ್ರಾಥಮಿಕ ಸಭೆಯು ಶುಕ್ರವಾರ ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷರಾದ ಮಾಜಿ ಶಾಸಕ ಕೆ. ರಘುಪತಿ ಭಟ್ ನೇತೃತ್ವದಲ್ಲಿ ನಡೆಯಿತು. ಶ್ರೀಗಳವರ ಆದೇಶದಂತೆ ಹೊರೆ ಕಾಣಿಕೆಯ ಸಮಿತಿಯ ಪ್ರಧಾನ ಸಂಚಾಲಕರನ್ನಾಗಿ ಬೈಕಾಡಿ ಸುಪ್ರಸಾದ್ ಶೆಟ್ಟಿ ರವರನ್ನು ನೇಮಕ ಮಾಡಲಾಯಿತು. ಬಳಿಕ ಮಾತನಾಡಿದ ಬೈಕಾಡಿ ಸುಪ್ರಸಾದ್ ಶೆಟ್ಟಿ, ಶ್ರೀ ಕೃಷ್ಣ ಮುಖ್ಯಪ್ರಾಣರಿಗೆ ನೀಡುವ ಹಸಿರು ಹೊರೆಕಾಣಿಕೆಯನ್ನು ಭಕ್ತರ ಸಹಕಾರದಿಂದ ಅಭೂತಪೂರ್ವವಾಗಿ ನಡೆಸೋಣ ಎಂದು ಹೇಳಿದರು.
ರಂಜನ್ ಕಲ್ಕೂರ, ಪ್ರವೀಣ್ ಶೆಟ್ಟಿ, ಸಂತೋಷ್ ಶೆಟ್ಟಿ, ಭಾಸ್ಕರ್ ರಾವ್ ಕಿದಿಯೂರ್, ರಘುಪತಿ ರಾವ್, ಹಯವದನ ಭಟ್, ನಾಗರಾಜ ತಂತ್ರಿ,. ಸುರೇಶ್ ಉಪಾಧ್ಯ, ವಿಜಯ ರಾಘವ ರಾವ್, ಸಿ.ಸಿ ಕರ್ಕೇರಾ, ನಾರಾಯಣ್ ರಾವ್, ಚಂದ್ರಶೇಕರ್ ಅಡಿಗ, ಉಷಾ ಪಲ್ಲವಿ, ನಳಿನೀ ಪ್ರದೀಪ್ ರಾವ್, ಸುಮಿತ್ರಾ ಕೆ., ಪದ್ಮಲತಾ, ಸತೀಶ್, ಹರೀಶ್, ರಾಮಚಂದ್ರ ಉಪಾಧ್ಯ, ಮುಂತಾದವರು ಉಪಸ್ಥಿತರಿದ್ದರು. ರವೀಂದ್ರ ಆಚಾರ್ಯ ಸ್ವಾಗತಿಸಿ, ರಮೇಶ್ ಭಟ್ ಕೆ ವಂದಿಸಿದರು.