ಕೋಟ: ರೋಟರಿ ಕ್ಲಬ್ ಹಂಗಾರಕಟ್ಟೆ ಸಾಸ್ತಾನ ಹಾಗೂ ಫಾರ್ಮೆಡ್ ಲಿ.ಕಂಪನಿ ಇವರ ಸಂಯುಕ್ತ ಆಶ್ರಯದಲ್ಲಿ ಮೂಳೆ ಖನಿಜ ಸಾಂದ್ರತೆ ಚಿಕಿತ್ಸಾ ಶಿಬಿರವನ್ನು ಸಾಲಿಗ್ರಾಮದ ಆಂಜನೇಯ ದೇವಸ್ಥಾನದ ಬಳಿ ಇರುವ ಸಿರಿ ಆಯುರ್ವೇದ ಚಿಕಿತ್ಸಾಲಯದಲ್ಲಿ ಏರ್ಪಡಿಸಲಾಯಿತು.
ಸಾಲಿಗ್ರಾಮ ಪಟ್ಟಣ ಪಂಚಾಯತ್ ಅಧ್ಯಕ್ಷೆ ಸುಲತಾ ಹೆಗ್ಡೆ ದೀಪ ಪ್ರಜ್ವಲಿಸಿ ಕಾರ್ಯಕ್ರಮ ಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು. ರೋಟರಿ ಕ್ಲಬ್ ಹಂಗಾರಕಟ್ಟೆ ಸಾಸ್ತಾನ ಅಧ್ಯಕ್ಷೆ ಯಶೋದಾ ಹೊಳ್ಳ ಅಧ್ಯಕ್ಷತೆ ವಹಿಸಿದ್ದರು.
ಫಾರ್ಮೆಡ್ ಲಿ.ಕಂಪೆನಿಯ ರಾಘವೇಂದ್ರ ಹೊಳ್ಳ, ರೋಟರಿ ಕಾರ್ಯದರ್ಶಿ ವಿಘ್ನೇಶ್ವರ ಅಡಿಗ, ಸದಸ್ಯರಾದ ಪಿ.ಸಿ.ಹೊಳ್ಳ, ಲೀಲಾವತಿ ಗಂಗಾಧರ್, ಸಿ. ಚಂದ್ರ ನಾಯರಿ, ಕುಸುಮಾ, ಮನೋಜ್ ಕುಮಾರ್, ರತ್ನ.ಜೆ.ರಾಜ್ ಉಪಸ್ಥಿತರಿದ್ದರು.
ಕಾರ್ಯಕ್ರಮ ಸಂಯೋಜಕ ವೆಂಕಟೇಶ ಭಟ್ ಶಿಬಿರದ ಅವಶ್ಯಕತೆ ತಿಳಿಸಿದರು. ಸಾಲಿಗ್ರಾಮ ಸಿರಿ ಆಯುರ್ವೇದ ಚಿಕಿತ್ಸಾಲಯ ವೈದ್ಯೆ ಡಾ. ವಾಣಿಶ್ರೀ ಐತಾಳ್ ಶಿಬಿರಾರ್ಥಿಗಳಿಗೆ ಸೂಕ್ತ ಸಲಹೆ ಮತ್ತು ಚಿಕಿತ್ಸೆ ನೀಡಿದರು. ಸಾಲಿಗ್ರಾಮ ಸಾಸ್ತಾನ ಪರಿಸರದ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಂಡರು.