Wednesday, February 26, 2025
Wednesday, February 26, 2025

ಪೂರ್ಣಪ್ರಜ್ಞ ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್: ಗ್ರಂಥಪಾಲಕರ ದಿನಾಚರಣೆ

ಪೂರ್ಣಪ್ರಜ್ಞ ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್: ಗ್ರಂಥಪಾಲಕರ ದಿನಾಚರಣೆ

Date:

ಉಡುಪಿ, ಆ.14: ಭಾರತದ ಗ್ರಂಥಾಲಯ ವಿಜ್ಞಾನದ ಪಿತಾಮಹ ಡಾ. ಎಸ್.ಆರ್.ರಂಗನಾಥನ್ ಅವರ 131 ನೇ ಜನ್ಮದಿನದ ನೆನಪಿಗಾಗಿ ಪೂರ್ಣಪ್ರಜ್ಞ ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್‍ನಲ್ಲಿ ರಾಷ್ಟ್ರಿಯ ಗ್ರಂಥಪಾಲಕರ ದಿನವನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಸಾರ್ವಜನಿಕ ಗ್ರಂಥಾಲಯ ಇಲಾಖೆ, ಉಡುಪಿಯ ಮುಖ್ಯ ಗ್ರಂಥಾಲಯ ಅಧಿಕಾರಿ ನಳಿನಿ ಜಿ.ಐ. ಮಾತನಾಡಿ, ಇಂದಿನ ಡಿಜಿಟಲ್ ಜಗತ್ತಿನಲ್ಲಿ ಇ-ಸಂಪನ್ಮೂಲಗಳ ಪ್ರಾಮುಖ್ಯತೆಯನ್ನು ಅವರು ಎತ್ತಿ ತೋರಿಸಿದರು. ಗ್ರಂಥಾಲಯದ ಬಳಕೆದಾರರ ವಿವಿಧ ಅವಶ್ಯಕತೆಗಳನ್ನು ಪೂರೈಸಲು ಗ್ರಂಥಾಲಯದಲ್ಲಿರುವ ಭೌತಿಕ ಸಂಪನ್ಮೂಲಗಳು ಮತ್ತು ಇ-ಸಂಪನ್ಮೂಲಗಳ ನಡುವೆ ಗ್ರಂಥಪಾಲಕರು ಹೇಗೆ ಸಮತೋಲನವನ್ನು ಹೊಂದಿದ್ದಾರೆ ಎಂಬುದನ್ನು ಅವರು ಒತ್ತಿ ಹೇಳಿದರು.

ಸಂಸ್ಥೆಯ ನಿರ್ದೇಶಕರಾದ ಡಾ. ಭರತ್ ವಿ ಅವರು ಗ್ರಂಥಾಲಯದಲ್ಲಿ ಒದಗಿಸಲಾದ ಎಲ್ಲಾ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಲು ವಿದ್ಯಾರ್ಥಿಗಳನ್ನು ಪ್ರೇರೇಪಿಸಿದರು ಮತ್ತು ಓದುವ ಹವ್ಯಾಸವನ್ನು ಬೆಳೆಸಲು ಒತ್ತು ನೀಡಿದರು. ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಗ್ರಂಥಪಾಲಕಿಯಾದ ರಂಜಿತ ಸಿ ಪೂರ್ಣಪ್ರಜ್ಞ ಸಂಶೋಧನಾ ಮತ್ತುಅಭಿವೃದ್ಧಿಕೇಂದ್ರದ ನಿರ್ದೇಶಕರಾದ ಡಾ. ಕೃಷ್ಣ ಕೊತಾಯ ಅವರು ವಿಶೇಷ ಅಭ್ಯಗತರಾಗಿ ಭಾಗವಹಿಸಿದ್ದರು. ಸಂಸ್ಥೆಯ ಗ್ರಂಥಪಾಲಕ ಪುರುಷೋತ್ತಮ್ ಸ್ವಾಗತಿಸಿ, ಪ್ರಥಮ ಎಂಬಿಎ ವಿದ್ಯಾರ್ಥಿನಿಯರಾದ ಪ್ರೀತಿ ನಾಯಕ್ ವಂದಿಸಿ, ನವ್ಯ ಪ್ರಭು ಕಾರ್ಯಕ್ರಮ ನಿರೂಪಿಸಿದರು. ಗ್ರಂಥಾಲಯ ಸಮಿತಿಯ ಸಂಯೋಜಕಿ ಸುಜಾತ ಜಿ ಎಲ್ ಕಾರ್ಯಕ್ರಮವನ್ನು ಆಯೋಜಿಸಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

51 ವಯಸ್ಸಿನಲ್ಲೂ ಸ್ಪೋಟಕ ಆಟ; ಗತ ವೈಭವ ನೆನಪಿಸಿದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್

ಮುಂಬಯಿ, ಫೆ.26: ಮಂಗಳವಾರ ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ...

ಮಹಾಕುಂಭ ವೈಭವ- 45 ದಿನಗಳಲ್ಲಿ 65 ಕೋಟಿಗೂ ಹೆಚ್ಚು ಭಕ್ತರು, 3 ಲಕ್ಷ ಕೋಟಿ ರೂ. ಆದಾಯ

ಪ್ರಯಾಗರಾಜ್, ಫೆ.26: ಬುಧವಾರ ಮಹಾಶಿವರಾತ್ರಿಯಂದು ಸಂಪನ್ನಗೊಂಡ ಮಹಾಕುಂಭಮೇಳ ಕಳೆದ 45 ದಿನಗಳಲ್ಲಿ...

ಜೆಇಇ ಬಿ ಆರ್ಕ್ ಮತ್ತು ಬಿ ಪ್ಲಾನಿಂಗ್ ಫಲಿತಾಂಶ: ಕ್ರಿಯೇಟಿವ್ ಸಾಧನೆ

ಉಡುಪಿ, ಫೆ.26: ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (ಎನ್.ಟಿ.ಎ) ವತಿಯಿಂದ ನಡೆಸಲಾದ ಜೆಇಇ...

ಪರೀಕ್ಷಾ ತರಬೇತಿ

ಕುಂದಾಪುರ, ಫೆ.26: ಜೆಸಿಐ ಶಂಕರನಾರಾಯಣ ಹಾಗೂ ಸರಕಾರಿ ಪದವಿಪೂರ್ವ ಕಾಲೇಜು ಶಂಕರನಾರಾಯಣ...
error: Content is protected !!