Monday, November 25, 2024
Monday, November 25, 2024

ಅಸ್ಸಾಂ ಮುಖ್ಯಮಂತ್ರಿಗಳಿಂದ ತುಳು ಭಾಷೆ ಸ್ಥಾನಮಾನಕ್ಕಾಗಿ ಹಾರೈಕೆ

ಅಸ್ಸಾಂ ಮುಖ್ಯಮಂತ್ರಿಗಳಿಂದ ತುಳು ಭಾಷೆ ಸ್ಥಾನಮಾನಕ್ಕಾಗಿ ಹಾರೈಕೆ

Date:

ಉಡುಪಿ, ಆ.12: ಜೈ ತುಲುನಾಡ್(ರಿ.) ಸಂಘಟನೆಯು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಬಿಡುಗಡೆಗೊಳಿಸಿದ ‘ತುಲುಪುರ್ಪ’ ಕವನ ಸಂಕಲನ ಕೃತಿಯನ್ನು ಶ್ಲಾಘಿಸಿ ಅಸ್ಸಾಂ ಮುಖ್ಯಮಂತ್ರಿ ಡಿ.ಹಿಮಂತ ಬಿಸ್ವಾ ಶರ್ಮಾರವರು ಸಂಘಟನೆಯ ಅಧ್ಯಕ್ಷರಿಗೆ ಪತ್ರವನ್ನು ಬರೆದಿದ್ದಾರೆ. ದೇಶದಾದ್ಯಂತ ತುಳು ಭಾಷೆಯನ್ನು ಪರಿಚಯಿಸುವ ಹಾಗೂ ಭಾಷೆಗೆ ಮಾನ್ಯತೆಯನ್ನು ದೊರಕಿಸಿಕೊಡುವಲ್ಲಿ ಸಹಕಾರವನ್ನು ಬಯಸುತ್ತಾ ಈ ಕೃತಿಯನ್ನು ಪ್ರಧಾನಿಯವರಿಗೆ, ರಾಷ್ಟ್ರಪತಿಗಳಿಗೆ ಹಾಗೂ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಕಳುಹಿಸಿ ಕೊಡಲಾಗಿದ್ದು,ಇದೀಗ ಕೃತಿ ಸ್ವೀಕರಿಸಿದ ಅಸ್ಸಾಂ ರಾಜ್ಯದ ಮುಖ್ಯಮಂತ್ರಿಗಳಿಂದ ಪ್ರತಿಕ್ರಿಯೆಯು ಬಂದಿದೆ.

ವಿವಿಧತೆಯಲ್ಲಿ ಏಕತೆಯನ್ನು ಸಾರುವ ಭಾರತದಲ್ಲಿ ಹಲವು ಭಾಷೆಗಳಿವೆ, ಪಂಚ ಮಹಾದ್ರಾವಿಡ ಭಾಷೆಗಳಲ್ಲಿ ತುಳು ಭಾಷೆಯೂ ಒಂದು. ನಮ್ಮ ಐಕ್ಯತೆಯನ್ನು ಸಧೃಡಗೊಳಿಸುವಲ್ಲಿ ಭಾಷೆಗಳು ಆಧಾರ ಸ್ತಂಭಗಳಾಗಿವೆ. ತುಳು ಭಾಷೆಗೆ ಮಾನ್ಯತೆ ದೊರೆಯಬೇಕು. ಈ ನಿಟ್ಟಿನಲ್ಲಿ ಜೈ ತುಲುನಾಡ್ (ರಿ)ನ ಕಾರ್ಯ ಶ್ಲಾಘನೀಯವೆಂದು ಪ್ರತಿಕ್ರಿಯಿಸಿದ್ದಾರೆ. ಸಂಘಟನೆಯು ಕಳೆದ ಹಲವಾರು ವರ್ಷಗಳಿಂದ ತುಳು ಭಾಷೆ, ತುಳು ಸಂಸ್ಕೃತಿ, ತುಳು ಲಿಪಿಯ ಉಳಿವಿಗಾಗಿ ಹತ್ತು ಹಲವಾರು ಕೆಲಸಗಳನ್ನು ಮಾಡುತ್ತಾ ಬಂದಿದೆ.

ಪಂಚ ಮಹಾದ್ರಾವಿಡ ಭಾಷೆಗಳಲ್ಲಿ ಹಿರಿಯ ಭಾಷೆಯೆನಿಸಿದ ತುಳು ಭಾಷೆಯು ತುಳುನಾಡಿನಲ್ಲಿ ಅಧಿಕೃತ ಪ್ರಾದೇಶಿಕ ಭಾಷೆಯಾಗಬೇಕು, ತುಳುನಾಡಿನಲ್ಲಿನ ತುಳುವರು ತಮ್ಮ ಮಾತೃಭಾಷೆಯಲ್ಲಿ ವಿದ್ಯಾಭ್ಯಾಸ ಮಾಡುವಂತಾಗಬೇಕು, ತುಳು ಭಾಷೆಗೆ ನಮ್ಮ ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ಸ್ಥಾನಮಾನವು ಲಭಿಸಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟುಕೊಂಡು ಜೈ ತುಲುನಾಡ್ (ರಿ) ಸಂಘಟನೆಯು ನಿರಂತರವಾಗಿ ಹೋರಾಟವನ್ನು ಮಾಡುತ್ತಾ ಬಂದಿದ್ದು, ಈ ಪ್ರಯತ್ನದ ಅಂಗವಾಗಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಮಯದಲ್ಲಿ ತುಳುನಾಡಿನ 111ಕವಿಗಳು ಬರೆದ ತುಳು ದೇಶಭಕ್ತಿ ಗೀತೆ, ತುಳುನಾಡ ಗೀತೆಗಳನ್ನು ಸಂಗ್ರಹಿಸಿ ಅದನ್ನು ತುಳು ಲಿಪಿಯಲ್ಲಿ ಮುದ್ರಿಸಿ, ‘ತುಲು ಪುರ್ಪ’ ಎಂಬ ಕೃತಿಯನ್ನು ಬಿಡುಗಡೆಗೊಳಿಸಿತು.

ಪೇಜಾವರ ಮಠಾಧೀಶರಾದ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥರ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ಡಿ ವೀರೇಂದ್ರ ಹೆಗ್ಗಡೆಯವರ ಆಶೀರ್ವಚನದ ನುಡಿಯೊಂದಿಗೆ ಈ ಕೃತಿಗೆ ತುಳುನಾಡಿನ ಅಲುಪ ವಂಶಸ್ಥ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯರಾದ ಡಾ. ಆಕಾಶ್ ರಾಜ್ ಜೈನ್ ಇವರು ಮುನ್ನುಡಿ ಬರೆದಿದ್ದು, ಬೆನ್ನುಡಿಯನ್ನು ಧರ್ಮದರ್ಶಿ ಹರಿಕೃಷ್ಣ ಪುನರೂರು ಬರೆದಿದ್ದು ಈ ಕೃತಿ ಇಂಗ್ಲಿಷ್, ಹಿಂದಿ, ಕನ್ನಡ, ತುಳು ಭಾಷೆಗಳಲ್ಲಿ ಮುದ್ರಣಗೊಂಡಿದ್ದು ಕೃತಿಯ ತಿರುಳನ್ನು ದೇಶದಾದ್ಯಂತ ಎಲ್ಲರಿಗೂ ತಿಳಿದುಕೊಳ್ಳಲು ಸಹಕಾರಿಯಾಗುವಂತೆ ಮುದ್ರಿಸಿರುವುದು ಇದರ ವಿಶೇಷತೆಯಾಗಿದೆ.

ತುಲು ಪುರ್ಪದ ಕೆಲಸವನ್ನು ಶ್ಲಾಘಿಸಿರುವ ಅಸ್ಸಾಂ ಮುಖ್ಯಮಂತ್ರಿಗಳಿಗೆ ಜೈ ತುಲುನಾಡ್ (ರಿ.) ಸಂಘಟನೆಯು ಕೃತಜ್ಞತೆಯನ್ನು ಸಲ್ಲಿಸಿದೆ. ತುಲು ಪುರ್ಪ ಕೃತಿಯ ಸಂಪಾದಕೀಯ ಬಳಗದಲ್ಲಿ ಸಂಘಟನೆಯ 2022-23ನೇ ಸಾಲಿನ ಸಮಿತಿಯ ಅಧ್ಯಕ್ಷರಾದ ಅಶ್ವಥ್ ತುಲುವೆ, ಪ್ರಧಾನ ಕಾರ್ಯದರ್ಶಿ ಅವಿನಾಶ್ ಮುಕ್ಕ, 2022 -23 ನೇ ಸಾಲಿನ ತುಳು ಸಾಹಿತ್ಯ ಸಮಿತಿಯ ಮೇಲ್ವಿಚಾರಕರಾದ ಕುಶಲಾಕ್ಷಿ ವಿ. ಕುಲಾಲ್ ಕಣ್ವತೀರ್ಥ, ಸಹ ಮೇಲ್ವಿಚಾರಕರಾದ ಗೀತಾ ಲಕ್ಷ್ಮೀಶ್, ಸಂಘಟನಾ ಕಾರ್ಯದರ್ಶಿ ಸದಾಶಿವ ಮುದ್ರಾಡಿ, ಕಿರಣ್ ತುಲುವ, ನಿಶ್ಚಿತ್ ಜಿ ರಾಮಕುಂಜ, ಜಗದೀಶ್ ಗೌಡ ಕಲ್ಕಲ, ಯತೀಶ್ ಕುಮಾರ್, ಪ್ರಚಾರ ಸಮಿತಿಯ ಮೇಲ್ವಿಚಾರಕರಾದ ವಿನಯ್ ರೈ, ಸುಮಂತ್ ಹೆಬ್ರಿ, ಸಂಜನಾ ಪೂಜಾರಿ, ಪೃಥ್ವಿ ತುಲುವೆ, ರಂಜನ್ ಎಸ್ ವೈ ಬೆಳ್ತಂಗಡಿ, ಶರತ್ ಕೊಡವೂರು, ಶಶಿಕಲಾ, ಪ್ರಜ್ಞಾ, ಪ್ರಹ್ಲಾದ್ ತಂತ್ರಿ ಹಾಗೂ ಇನ್ನಿತರರು ಈ ಕೃತಿಯನ್ನು ಬೆಳಕಿಗೆ ತರುವಲ್ಲಿ ಶ್ರಮಿಸಿರುತ್ತಾರೆ ಎಂದು ಸಂಘಟನೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಪಂಚವರ್ಣ: 231ನೇ ಪರಿಸರಸ್ನೇಹಿ ಅಭಿಯಾನ

ಕೋಟ. ನ.25: ಪಂಚವರ್ಣ ಸಂಸ್ಥೆ ಪರಿಸರ ಜಾಗೃತಿ ಸ್ವಚ್ಛತಾ ಆಂದೋಲನ ಅವಿಭಜಿತ...

ಸಿಒಡಿಪಿ: ವಿಚಾರ ಸಂಕಿರಣ

ಮಂಗಳೂರು, ನ.25: ಮಾನವ ಕಳ್ಳಸಾಗಣೆ ಮತ್ತು ಸೈಬರ್ ಅಪರಾಧ ಕುರಿತ ವಿಚಾರ...

ಜನಾರ್ದ​ನ್ ಕೊಡವೂರು​ ದಂಪತಿಗಳಿಗೆ ಅಭಿನಂದನೆ ​

ಉಡುಪಿ, ನ.24: ಭಾರ​ತ್ ಸ್ಕೌಟ್ಸ್ ಅಂಡ್ ಗೈಡ್ಸ್ ​ಉಡುಪಿ ಸಂಸ್ಥೆಯ ಜಿಲ್ಲಾ​...

ಶಿಸ್ತು, ಛಲ, ಆತ್ಮಸ್ಥೈರ್ಯ ಬೆಳೆಸಿಕೊಳ್ಳಿ: ಉಡುಪಿ ಜಿಲ್ಲಾಧಿಕಾರಿ

ಉಡುಪಿ, ನ.24: ಸ್ಕೌಟ್ಸ್ ಮತ್ತು ಗೈಡ್ಸ್ ನಲ್ಲಿ ಭಾಗವಹಿಸುವುದರಿಂದ ಜೀವನದಲ್ಲಿ ಶಿಸ್ತು,...
error: Content is protected !!