ಉಡುಪಿ, ಆ.11: ರಾಜ್ಯ ಅತ್ಯುತ್ತಮ ಯುವ ಮಂಡಲ ಪ್ರಶಸ್ತಿ ಪುರಸ್ಕೃತ ಯುವಕ ಮಂಡಲ (ರಿ). ಸಾಣೂರು ವತಿಯಿಂದ ಸಾಣೂರು ಗ್ರಾಮದ 7 ಶಿಕ್ಷಣ ಸಂಸ್ಥೆಗಳಿಗೆ ಮತ್ತು 4 ರಿಕ್ಷಾ ನಿಲ್ದಾಣಗಳಿಗೆ ಕಸದ ತೊಟ್ಟಿ ವಿತರಿಸಲಾಯಿತು. ಈ ಸಂಧರ್ಭದಲ್ಲಿ ಮಾತನಾಡಿದ ಕಾರ್ಕಳದ ನ್ಯಾಯವಾದಿ, ಸ್ವಚ್ಛ ಕಾರ್ಕಳ ಬ್ರಿಗೇಡ್ ನ ಎಂ. ಕೆ ವಿಪುಲ್ ತೇಜ್, ಗ್ರಾಮದ ಸರ್ವತೋಮುಖ ಅಭಿವೃದ್ಧಿಯಲ್ಲಿ ಗ್ರಾಮದ ಯುವಕ ಸಂಸ್ಥೆಗಳು ಕೈ ಜೋಡಿಸಿದಾಗ ಅಭಿವೃದ್ಧಿಯ ಜೊತೆಗೆ ಸ್ವಚ್ಛ ಭಾರತದ ಪರಿಕಲ್ಪನೆ ಈಡೇರುತ್ತದೆ. ಈ ನಿಟ್ಟಿನಲ್ಲಿ ಸಾಣೂರು ಯುವಕ ಮಂಡಲವು ಸ್ವಚ್ಛತೆಗಾಗಿ ಕೈಗೊಂಡಿರುವ ನೇತೃತ್ವ ಎಲ್ಲರಿಗೂ ಮಾದರಿ ಎಂದರು.
ಕೆ. ಎಂ.ಎಫ್ ಮಂಗಳೂರು ನಿರ್ದೇಶಕರಾದ ಸಾಣೂರು ನರಸಿಂಹ ಕಾಮತ್ ಮಾತನಾಡಿ, ಪ್ರತಿ ಮನೆಯ ಪರಿಸರ ಸ್ವಚ್ಛಗೊಳಿಸಿದಾಗ ಸಮಾಜದಲ್ಲಿ ಜನರಿಗೆ ಅರಿವು ಮೂಡಲು ಸಾಧ್ಯ ಎಂದರು. ಸ್ವಚ್ಛ ಕಾರ್ಕಳ ಬ್ರಿಗೇಡ್ ನ ಸದಸ್ಯರಾದ ರಾಜೇಂದ್ರ ಅಮೀನ್ ಮಾತನಾಡಿ, ಪ್ರತಿಯೊಂದು ಕ್ಷೇತ್ರದಲ್ಲಿ ಮುಂಚೂಣಿಯಲ್ಲಿ ನಿಂತುಕೊಂಡು ಸಾಮಾಜಿಕ ಕಳಕಳಿಯ ಸೇವೆ ಮಾಡುತ್ತಿರುವ ಸಾಣೂರು ಯುವಕ ಮಂಡಲದ ಕಾರ್ಯವೈಖರಿ ಮಾದರಿ. ಸ್ವಚ್ಛತೆಯ ಬಗ್ಗೆ ನಾಗರಿಕರು ಸ್ವಯಂ ಜವಾಬ್ದಾರಿಗಳಾದ ಗ್ರಾಮದ ಸ್ವಚ್ಛತೆ ಆಗುತ್ತದೆ. ಪ್ಲಾಸ್ಟಿಕ್ ಇನ್ನಿತರ ತ್ಯಾಜ್ಯಗಳನ್ನು ಬಿಸಾಡುವುದು ಅಥವಾ ಸುಡುವುದರಿಂದ ಮಾನವ ಕುಲಕ್ಕೂ ಪ್ರಾಣಿ ಸಂಕುಲಗಳಿಗೂ ಮಾರಕ ಎಂದರು.
ಸಾಣೂರು ಗ್ರಾಮ ಪಂಚಾಯತ್ ನ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುರೇಖಾ ಮಾತನಾಡಿ, ಸ್ವಚ್ಛ ಸಾಣೂರು ನಿರ್ಮಿಸುವಲ್ಲಿ ನೇತೃತ್ವ ವಹಿಸಿರುವ ಸಾಣೂರು ಯುವಕ ಮಂಡಲದ ಜೊತೆ ನಾಗರಿಕರು ಕೈಜೋಡಿಸಿ ಗ್ರಾಮ ಪಂಚಾಯತ್ ಗೂ ಉತ್ತಮ ಕೀರ್ತಿ ತರುವಲ್ಲಿ ಸಹಕರಿಸುವಂತೆ ವಿನಂತಿಸಿದರು. ವೇದಿಕೆಯಲ್ಲಿ ಶಕ್ತಿ ಸಮೃದ್ಧಿ ಸಂಜೀವಿನಿ ಒಕ್ಕೂಟದ ಅಧ್ಯಕ್ಷರಾದ ಜಯಲಕ್ಷ್ಮಿ ಶೆಟ್ಟಿಗಾರ್ ಉಪಸ್ಥಿತರಿದ್ದರು. ಸಾಣೂರು ಯುವಕ ಮಂಡಲದ ಅಧ್ಯಕ್ಷರು ಗ್ರಾಮ ಪಂಚಾಯತ್ ನ ಉಪಾಧ್ಯಕ್ಷರಾದ ಪ್ರಸಾದ್ ಪೂಜಾರಿ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಯುವಕ ಮಂಡಲದ ಕಾರ್ಯದರ್ಶಿ ಮೋಹನ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಯುವಕ ಮಂಡಲದ ಮಾಜಿ ಅಧ್ಯಕ್ಷರುಗಳಾದ ಜಗದೀಶ್ ಕುಮಾರ್, ಶಂಕರ್ ಶೆಟ್ಟಿ ಕೋಲ್ಡ್ರೋಟ್ಟು ಪದಾಧಿಕಾರಿಗಳಾದ ರಾಜೇಶ್ ಪೂಜಾರಿ, ಚಂದ್ರಹಾಸ್ ಪೂಜಾರಿ, ಸತೀಶ್ ಮಡಿವಾಳ, ಪ್ರಶಾಂತ್ ಆಚಾರ್ಯ, ಸುಮುಕ್ ನಾಯಕ್, ವಿದ್ಯಾನಂದ್ ಕೋಟ್ಯಾನ್, ಪಂಚಾಯತ್ ಸದಸ್ಯರುಗಳು, ಸಾಣೂರು ಗ್ರಾಮದ ಶೈಕ್ಷಣಿಕ ಸಂಸ್ಥೆಗಳ ಪ್ರಾಂಶುಪಾಲರು, ಮುಖ್ಯ ಶಿಕ್ಷಕರು, ರಿಕ್ಷಾ ಚಾಲಕ ಮಾಲಕ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.