ಉಡುಪಿ, ಆ. 11: ಹಳೆ ವಿದ್ಯಾರ್ಥಿಗಳ ಸಂಘ ಹಾಗೂ ಯುವಕ ಸಂಘ (ರಿ.), ಕೊಡವೂರು, ಸ್ವಾವಲಂಬಿ ಭಾರತ ಉಡುಪಿ, ನೇತ್ರ ತಪಾಸಣಾ ವಿಭಾಗ ಪ್ರಸಾದ್ ನೇತ್ರಾಲಯ ಉಡುಪಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ, ಸಮುದಾಯ ದಂತ ವೈದ್ಯಕೀಯ ವಿಭಾಗ ಕಸ್ತೂರ್ಬಾ ಮೆಡಿಕಲ್ ಕಾಲೇಜು ಉಡುಪಿ, ಪ್ರಾಥಮಿಕ ಆರೋಗ್ಯ ಕೇಂದ್ರ ಮಲ್ಪೆ ಉಪಕೇಂದ್ರ ಕೊಡವೂರು, ತಂಬಾಕು ನಿಯಂತ್ರಣ ಘಟಕ, ಸಮುದಾಯ ವೈದ್ಯಕೀಯ ವಿಭಾಗ ಜಂಟಿ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಗಸ್ಟ್ 12 ಶನಿವಾರ ಪೂರ್ವಾಹ್ನ 9.30 ರಿಂದ ಅಪರಾಹ್ನ 1.30 ಗಂಟೆಯವರೆಗೆ ಕೊಡವೂರಿನ ವಿಪ್ರಶ್ರೀ ಸಭಾಭವನದಲ್ಲಿ ನಡೆಯಲಿದೆ.
ಶಿಬಿರದಲ್ಲಿ ದಂತ ಚಿಕಿತ್ಸೆ, ಕಣ್ಣಿನ ತಪಾಸಣೆ, ಮಧುಮೇಹ, ರಕ್ತದೊತ್ತಡ, ಬಿಪಿ ಶುಗರ್ ತಪಾಸಣೆ, ತಂಬಾಕು ವ್ಯಸನ ಚಿಕಿತ್ಸೆ, ಮಲೇರಿಯಾ ತಪಾಸಣೆ ನಡೆಸಲಾಗುವುದು. ಆರೋಗ್ಯ ತಪಾಸಣಾ ಶಿಬಿರಕ್ಕೆ ಬರುವವರು ಆಧಾರ್ ಕಾರ್ಡ್ ತರಬೇಕು. ಇದೇ ಸಂದರ್ಭದಲ್ಲಿ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ದತ್ತು ಸ್ವೀಕಾರ, ದಿವ್ಯಾಂಗರಿಗೆ ವ್ಹಿಲ್ ಚೇರ್ ವಿತರಣೆ ಹಾಗೂ ಕೇಂದ್ರ/ ರಾಜ್ಯ ಸರಕಾರದ ಸವಲತ್ತುಗಳ ಸಮಗ್ರ ಮಾಹಿತಿ ಶಿಬಿರ, ನಗರಸಭೆ ನೀರಿನ ಜೋಡಣೆ (ಬೇಕಾಗುವ ದಾಖಲೆ- ರೇಷನ್ ಕಾರ್ಡ್ ಆಧಾರ್ ಕಾರ್ಡ್ ಪ್ರಸ್ತುತ ಸಾಲಿನ ತೆರಿಗೆ ರಶೀದಿ) ಪರಿಶಿಷ್ಟ ಜಾತಿ ಪಂಗಡದವರಿಗೆ ಆರೋಗ್ಯ ವಿಮೆ (ಬೇಕಾಗುವ ದಾಖಲೆ- ಹಳೆ ವಿಮೇ ಕಾರ್ಡ್,
ರೇಷನ್ ಕಾರ್ಡ್, ಆಧಾರ್ ಕಾರ್ಡ್, ಜಾತಿ ಆದಾಯ ಸರ್ಟಿಫಿಕೇಟ್), ಗೃಹಲಕ್ಷ್ಮಿ (ಬೇಕಾಗುವ ದಾಖಲೆ- ರೇಷನ್ ಕಾರ್ಡ್, ಗಂಡನ ಆಧಾರ್ ಕಾರ್ಡ್). ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕಾರ್ಯಕ್ರಮ ಸಂಯೋಜಕ ಕೆ. ವಿಜಯ ಕೊಡವೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.