ಮಲ್ಪೆ, ಆ. 9: ಮನೆಗೆ ಬೀಗ ಹಾಕಿ ಕೆಲಸಕ್ಕೆ ಹೋಗಿದ್ದು, ಸಂಜೆ ಕೆಲಸ ಮುಗಿಸಿ ಮನೆಗೆ ಬಂದಾಗ ಬೆಡ್ರೂಮಿನಲ್ಲಿದ್ದ ಗ್ರೋಡೇಜ್ ಬಾಗಿಲು ತೆರೆದು, ಗ್ರೋಡೇಜ್ ಕಪಾಟಿನ ಬೀಗ ಒಡೆದು ಲಾಕರ್ನಲ್ಲಿದ್ದ ಚಿನಾಭರಣಗಳನ್ನು ಕಳವು ಮಾಡಲಾದ ಘಟನೆ ಮಲ್ಪೆ ಠಾಣಾ ವ್ಯಾಪ್ತಿಯ ಕಿನ್ನಿಮೂಲ್ಕಿಯ ಮನೆಯೊಂದರಲ್ಲಿ ಸಂಭವಿಸಿದೆ.
ಮನೆಯ ಬಾಗಿಲಿನ ಬೀಗವನ್ನು ಮುರಿದು ಬೆಡ್ರೂಮಿನ ಕಪಾಟಿನಲ್ಲಿದ್ದ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ಕಳವು ಮಾಡಲಾಗಿದೆ. ಕಳವಾದ ಸ್ವತ್ತಿನ ಒಟ್ಟು ಅಂದಾಜು ಮೌಲ್ಯ 803500 ಆಗಿರುತ್ತದೆ ಎಂದು ವೆಂಕಟೇಶ್ ಎಂಬವರು ನೀಡಿದ ದೂರಿನನ್ವಯ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.