Monday, January 20, 2025
Monday, January 20, 2025

ಕೊಡವೂರು: ಗೋಶಾಲೆ ನೂತನ‌ ಕಟ್ಟಡಕ್ಕೆ ಶಿಲಾನ್ಯಾಸ

ಕೊಡವೂರು: ಗೋಶಾಲೆ ನೂತನ‌ ಕಟ್ಟಡಕ್ಕೆ ಶಿಲಾನ್ಯಾಸ

Date:

ಕೊಡವೂರು: ದೇವಸ್ಥಾನಗಳಲ್ಲಿ ಶಿಲಾ ವಿಗ್ರಹ ಪ್ರತಿಮೆಗಳಲ್ಲಿ ಭಗವಂತನ ಚೈತನ್ಯವನ್ನು ತುಂಬಿ ಆರಾಧಿಸಲಾಗುತ್ತದೆ. ಗೋವುಗಳಲ್ಲಿ ದೇವಾನುದೇವತೆಗಳ ಸನ್ನಿಧಾನ ನಿತ್ಯ ಜಾಗೃತವಾಗಿರುತ್ತದೆ. ಚೈತನ್ಯ ತುಂಬಿದ ವಿಗ್ರಹದಷ್ಟೇ ಗೋವುಗಳೂ ಪ್ರಮುಖವಾಗಿವೆ.

ಆದ್ದರಿಂದ ದೇವಳಗಳ ಜೀರ್ಣೋದ್ಧಾರಕ್ಕೆ ನೀಡುವಷ್ಟೇ ಪ್ರಾಮುಖ್ಯತೆಯನ್ನು ಗೋಶಾಲೆಗಳ ನಿರ್ಮಾಣ, ನವೀಕರಣಗಳಿಗೂ ನೀಡಬೇಕು ಎಂದು ಗೋವರ್ಧನಗಿರಿ ಟ್ರಸ್ಟ್ ಮುಖ್ಯಸ್ಥರೂ ಹಾಗೂ ಶ್ರೀ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಕರೆ ನೀಡಿದರು.

ಟ್ರಸ್ಟ್ ವತಿಯಿಂದ ನಡೆಸಲ್ಪಡುತ್ತಿರುವ ಕೊಡವೂರು ಸಮೀಪವಿರುವ ನಂದಗೋಕುಲ ಗೋಶಾಲೆಯ ನೂತನ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿ ಸಂದೇಶ ನೀಡಿದರು.

ಕೆಎಂಎಫ್ ಅಧ್ಯಕ್ಷ ಕೆ. ರವಿರಾಜ ಹೆಗ್ಡೆ, ಆಸ್ಟ್ರೇಲಿಯಾದಲ್ಲಿ ಯೋಗ ಶಿಕ್ಷಕರಾಗಿರುವ ರಾಜೇಂದ್ರ ಎಂಕಣ್ಣಮೂಲೆ ಶುಭ ಹಾರೈಸಿದರು. ಬಡಾನಿಡಿಯೂರಿನ ಬಾಲಯ್ಯ ಕುಟುಂಬಿಕರ ಪಂಜುರ್ಲಿ ಟ್ರಸ್ಟ್ ಮುಖ್ಯಸ್ಥ ದಾನಿ ಉಮೇಶ್ ರಾವ್, ಕೊಡವೂರು ಶಂಕರನಾರಾಯಣ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ಕೆ. ಸುಧೀರ್ ರಾವ್, ನಗರಸಭಾ ಸದಸ್ಯ ವಿಜಯ್ ಕೊಡವೂರು, ಡಾ. ಸರ್ವೋತ್ತಮ ಉಡುಪ, ನಾಗರಾಜ ಪುರಾಣಿಕ್, ಇಂಜಿನಿಯರ್ ರಾಜೇಂದ್ರ ಮಯ್ಯ, ಚಂದ್ರಶೇಖರ್, ಗೋಶಾಲೆ ನಿರ್ವಾಹಕಿ ಪ್ರಮೀಳಾ ಜೋಶಿ ಮೊದಲಾದವರು ಉಪಸ್ಥಿತರಿದ್ದು ಶಿಲಾನ್ಯಾಸ ನೆರವೇರಿಸಿದರು.

ಈ ಗೋಶಾಲೆಯು ಒಂದೂವರೆ ಎಕ್ರೆ ಪ್ರದೇಶದಲ್ಲಿ 1984 ರಲ್ಲಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಸ್ಥಾಪಿಸಿದ ಮೊದಲ ಗೋಶಾಲೆಯಾಗಿದ್ದು 150 ಗೋವುಗಳು ಪೋಷಿಸಲ್ಪಡುತ್ತಿವೆ. ಪ್ರಸ್ತುತ ನೂತನ ಒಂದು ಕೋಟಿ ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಟ್ರಸ್ಟ್ ವ್ಯವಸ್ಥಾಪಕ ರಘುರಾಮಾಚಾರ್ಯ ಹೇಳಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಆಸ್ಟ್ರೇಲಿಯಾದ ಯೋಗ ಶಿಕ್ಷಕ ರಾಜೇಂದ್ರ ಎಂಕಣ್ಣಮೂಲೆ ರೂ. ಎರಡು ಲಕ್ಷ, ಕೆಎಂಎಫ್ ಪರವಾಗಿ ಅಧ್ಯಕ್ಷ ರವಿರಾಜ ಹೆಗ್ಡೆ ಒಂದು ಲಕ್ಷ ರೂ ದೇಣಿಗೆ ಹಸ್ತಾಂತರಿಸಿದರು.

ವಾಸುದೇವ ಭಟ್ ಪೆರಂಪಳ್ಳಿ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ವೇಣುಗೋಪಾಲ ಸಾಮಗರು ಧಾರ್ಮಿಕ ವಿಧಿ ನೆರವೇರಿಸಿದರು. ಕೃಷ್ಣ ಭಟ್, ವಿಷ್ಣುಮೂರ್ತಿ ಆಚಾರ್ಯ, ಪ್ರಾಣೇಶ್ ಜೋಶಿ ಸಹಕರಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಪರ್ಕಳ ಮಹಾಲಿಂಗೇಶ್ವರ ದೇವಸ್ಥಾನ ಕೆರೆ ಮರು ನಿರ್ಮಾಣಕ್ಕೆ ಶಾಸಕ ಯಶ್ಪಾಲ್ ಸುವರ್ಣ ಸೂಚನೆ

ಮಣಿಪಾಲ, ಜ.20: ಪರ್ಕಳ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕೆರೆ ಕಾಮಗಾರಿ ಸ್ಥಳಕ್ಕೆ...

ಕೋಡಿ ಮಹಾಸತೀಶ್ವರಿ ಗೆಂಡೋತ್ಸವ ಸಂಪನ್ನ

ಕೋಟ, ಜ.20: ಇಲ್ಲಿನ ಕರಾವಳಿ ಕಡಲತಟದಲ್ಲಿ ಆರಾಧಿಸುವ ದೇವಿ ಶ್ರೀ ಮಹಾಸತೀಶ್ವರಿ...

ಪಂಚವರ್ಣದ ನೇತೃತ್ವದಲ್ಲಿ 238 ನೇ ವಾರದ ಪರಿಸರ ಸ್ನೇಹಿ ಅಭಿಯಾನ

ಕೋಟ, ಜ.20: ಪಂಚವರ್ಣ ಯುವಕ ಮಂಡಲ ಕೋಟ ಇದರ ಪ್ರವರ್ತಿತ ಪಂಚವರ್ಣ...

ಹನೆಹಳ್ಳಿ: ವಿದ್ಯಾರ್ಥಿಗಳಿಗೆ ಉಚಿತ ಶೂ ವಿತರಣೆ

ಬಾರಕೂರು, ಜ.20: ಲಯನ್ಸ್ ಕ್ಲಬ್ ಬಾರ್ಕೂರು (Dist 317 zone 1Region...
error: Content is protected !!