ಉಡುಪಿ, ಜು. 27: ಯಕ್ಷಶಿಕ್ಷಣ ಟ್ರಸ್ಟ್ ನ ವಾರ್ಷಿಕ ಸಭೆ ಗುರುವಾರ ಶ್ರೀ ಕೃಷ್ಣ ಮಠದ ಕನಕ ಮಂಟಪದಲ್ಲಿ ಪರ್ಯಾಯ ಮಠಾಧೀಶರೂ ಟ್ರಸ್ಟ್ ನ ಗೌರವಾಧ್ಯಕ್ಷರೂ ಆಗಿರುವ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ನಡೆಯಿತು. ಉಡುಪಿ ಶಾಸಕರಾದ, ಟ್ರಸ್ಟ್ ನ ನೂತನ ಅಧ್ಯಕ್ಷರೂ ಆದ ಯಶ್ಪಾಲ್ ಎ.ಸುವರ್ಣ, ಸ್ಥಾಪಕಾಧ್ಯಕ್ಷರಾದ ಕೆ. ರಘುಪತಿ ಭಟ್ ಇವರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಕೋಶಾಧಿಕಾರಿ ಎಚ್.ಎನ್.ಶೃಂಗೇಶ್ವರ್ ಲೆಕ್ಕಪತ್ರ ಮಂಡಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ವರದಿ ಒಪ್ಪಿಸಿದರು.
14 ವರ್ಷ ಕೋಶಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ಕೆ.ಎಸ್. ಸುಬ್ರಮಣ್ಯ ಬಾಸ್ರಿ ಇವರ ಸೇವೆಯನ್ನು ಕೃತಜ್ಞತೆಯಿಂದ ಸ್ಮರಿಸಿಕೊಳ್ಳಲಾಯಿತು. ಈ ಬಾರಿ ಉಡುಪಿ ವಿಧಾನಸಭಾ ಕ್ಷೇತ್ರದ 43 ಪ್ರೌಢಶಾಲೆಗಳು, ಹಾಗೂ ಪ್ರಥಮ ಬಾರಿಗೆ ಕಾಪು ವಿಧಾನಸಭಾ ಕ್ಷೇತ್ರದ 15 ಪ್ರೌಢಶಾಲೆಗಳು, ಕುಂದಾಪುರ ವಿಧಾನಸಭಾ ಕ್ಷೇತ್ರದ 9 ಪ್ರೌಢಶಾಲೆಗಳು ಯಕ್ಷಶಿಕ್ಷಣಕ್ಕೆ ಒಳಪಡಲಿವೆ. 32 ಗುರುಗಳು ಯಕ್ಷಶಿಕ್ಷಣ ನೀಡಲಿದ್ದಾರೆ. ಸಭೆಯಲ್ಲಿ ಟ್ರಸ್ಟಿಗಳಾದ ಎಂ.ಗಂಗಾಧರ್ ರಾವ್, ವಿ.ಜಿ.ಶೆಟ್ಟಿ, ಎಸ್.ವಿ.ಭಟ್, ಮೀನಾಲಕ್ಷಣಿ ಅಡ್ಯಂತಾಯ, ವಿದ್ಯಾ ಪ್ರಸಾದ್, ಗಣೇಶ್ ಬ್ರಹ್ಮಾವರ್, ನಟರಾಜ ಉಪಾಧ್ಯ, ನಾಗರಾಜ ಹೆಗಡೆ ಉಪಸ್ಥಿತರಿದ್ದರು.