ಕೋಟ: ದೇವಾಲಯಗಳಲ್ಲಿ ಧಾರ್ಮಿಕ ಸೇವೆಗಳ ಜೊತೆಯಲ್ಲಿ ಕಲಾ ಸೇವೆಯನ್ನು ನಡೆಸುವುದು ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದ ಪದ್ಧತಿ. ರಾಜಾಶ್ರಯದ ನಂತರ ದೇವಾಲಯಗಳೇ ಕಲೆಗಳಿಗೆ ಆಶ್ರಯವನ್ನು ನೀಡುತ್ತಾ ಬಂದಿವೆ.
ಉತ್ಸವಾದಿಗಳ ಸಂದರ್ಭದಲ್ಲಿ ಕಲಾ ಸೇವೆಯನ್ನು ಸಂಘಟಿಸುವುದು ಶ್ಲಾಘನೀಯ ಎಂದು ನಿವೃತ್ತ ಬ್ಯಾಂಕ್ ಅಧಿಕಾರಿ ನರಸಿಂಹ ಸೋಮಯಾಜಿ ಹೇಳಿದರು.
ಅವರು ಹಂದೆ ಶ್ರೀ ವಿಷ್ಣುಮೂರ್ತಿ ಶ್ರೀ ವಿನಾಯಕ ದೇವಸ್ಥಾನ ಹಾಗೂ ಯಕ್ಷದೇಗುಲ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನದ ವಾರ್ಷಿಕ ರಥೋತ್ಸವದ ಅವಭೃತಸ್ನಾನದ ಪ್ರಯುಕ್ತ ನಡೆದ ವಿಶೇಷ ಕಾರ್ಯಕ್ರಮ ಯಕ್ಷ-ಗಾನ-ಲಹರಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಗಂಗೊಳ್ಳಿ ಸರಸ್ವತಿ ವಿದ್ಯಾಲಯದ ಉಪನ್ಯಾಸಕ ಸುಜಯೀಂದ್ರ ಹಂದೆ ಎಚ್, ಯಕ್ಷದೇಗುಲ ಬೆಂಗಳೂರು ಇದರ ಸಂಚಾಲಕರಾದ ಸುದರ್ಶನ ಉರಾಳ, ಹಂದೆ ದೇವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷ ವೆಂಕಟರಮಣ ಸೋಮಯಾಜಿ, ಆಡಳಿತ ಮಂಡಳಿ ಅಧ್ಯಕ್ಷ ಅಮರ ಹಂದೆ, ಸಾಂಸ್ಕೃತಕ ವೇದಿಕೆಯ ಸದಸ್ಯ ರಾಘವೇಂದ್ರ ತುಂಗ, ಕಲಾ ಸಂಘಟಕ ವೆಂಕಟೇಶ ವೈದ್ಯ, ಬ್ಯಾಂಕ್ ಉದ್ಯೋಗಿ ರಾಘವೇಂದ್ರ ತುಂಗ, ಕಟ್ಟೆ ಬಳಗದ ಸುರೇಶ್ ಪೂಜಾರಿ ಉಪಸ್ಥಿತರಿದ್ದರು.
ಬಳಿಕ ಸುಜಯೀಂದ್ರ ಹಂದೆ ನಿರೂಪಣೆಯಲ್ಲಿ, ರಾಘವೇಂದ್ರ ಮಯ್ಯ ಹಾಲಾಡಿ, ಸುರೇಶ್ ಶೆಟ್ಟಿ ಶಂಕರನಾರಾಯಣ, ಲಂಬೋದರ ಹೆಗಡೆ ನಿಟ್ಟೂರು, ರಾಘವೇಂದ್ರ ಹೆಗಡೆ ಯಲ್ಲಾಪುರ, ಸುದೀಪ ಉರಾಳ ಕೋಟ ಇವರನ್ನು ಒಳಗೊಂಡು ಯಕ್ಷ-ಗಾನ-ಲಹರಿ ಕಾರ್ಯಕ್ರಮ ನೆರವೇರಿತು.