Saturday, October 19, 2024
Saturday, October 19, 2024

ನಗರ ಕೇಂದ್ರ ಗ್ರಂಥಾಲಯ: ಪುಸ್ತಕ ಪ್ರದರ್ಶನ ಉದ್ಘಾಟನೆ

ನಗರ ಕೇಂದ್ರ ಗ್ರಂಥಾಲಯ: ಪುಸ್ತಕ ಪ್ರದರ್ಶನ ಉದ್ಘಾಟನೆ

Date:

ಉಡುಪಿ, ಜುಲೈ 20: ಕೇರಳದ ಗ್ರಂಥಾಲಯ ಚಳುವಳಿಯ ಪಿತಾಮಹ ಪಿ. ಎನ್ ಪಣಿಕ್ಕರ್ (ಪುತುವಾಯಿಲ್ ನಾರಾಯಣ ಪಣಿಕ್ಕರ್) ಇವರ ಪುಣ್ಯತಿಥಿಯ ಪ್ರಯುಕ್ತ ಜೂನ್ 19 ರಂದು ರಾಷ್ಟ್ರೀಯ ಓದುವ ದಿನವನ್ನಾಗಿ ಆಚರಿಸಲಾಗುತ್ತಿದ್ದು, ಜೂನ್ 19 ರಿಂದ ಜುಲೈ 18 ರ ವರೆಗೆ ಓದುವ ತಿಂಗಳು ಕಾರ್ಯಕ್ರಮವನ್ನು ಆಚರಿಸಲಾಗುತ್ತದೆ. ಮಕ್ಕಳು ಹಾಗೂ ಸಾರ್ವಜನಿಕರನ್ನು ಗ್ರಂಥಾಲಯದತ್ತ ಆಕರ್ಷಿಸಿ ಅವರಲ್ಲಿ ಪುಸ್ತಕ ಓದುವ ಹವ್ಯಾಸ ಮತ್ತು ಗ್ರಂಥಾಲಯಗಳ ಮಹತ್ವದ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಓದುವ ತಿಂಗಳು ಕಾರ್ಯಕ್ರಮದ ಪ್ರಯುಕ್ತ ಪುಸ್ತಕ ಪ್ರದರ್ಶನವನ್ನು ಅಜ್ಜರಕಾಡಿನ ವಿದ್ಯಾ ವಾಚಸ್ಪತಿ ಡಾ. ಬನ್ನಂಜೆ ಗೋವಿಂದಾಚಾರ್ಯ ಸ್ಮಾರಕ ಮಕ್ಕಳ ಸಮುದಾಯ ಕೇಂದ್ರ ಗ್ರಂಥಾಲಯದಲ್ಲಿ ಸಾಹಿತಿ ಸಂಗೀತ ಜಾನ್ಸನ್ ಹಾಗೂ ನಗರ ಗ್ರಂಥಾಲಯದಲ್ಲಿ ಹಿರಿಯ ಸಾಹಿತಿ ಹಾಗೂ ಜಿಲ್ಲಾ ಗ್ರಂಥಾಲಯ ಪ್ರಾಧಿಕಾರದ ಉಪಾಧ್ಯಕ್ಷೆ ವಸಂತಿ ಶೆಟ್ಟಿ ಬ್ರಹ್ಮಾವರ ಉದ್ಘಾಟಿಸಿದರು.

ಶಾಲಾ ಮಕ್ಕಳಿಗಾಗಿ ಪುಸ್ತಕ ಓದುವ ಸ್ಪರ್ಧೆ, ಕನ್ನಡ ಪುಸ್ತಕ ಓದಿ ಕಥೆ ಹೇಳುವ ಸ್ಪರ್ಧೆ, ಪುಸ್ತಕ ಓದಿ, ವಿಷಯ ತಿಳಿಸುವ ಸ್ಪರ್ಧೆಗಳನ್ನು ಏರ್ಪಡಿಸಿದ್ದು, ಅತೀ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಭಾಗವಹಿಸಿದ್ದರು. ನಗರ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿ ನಳಿನಿ ಜಿ.ಐ ಸ್ವಾಗತಿಸಿ, ಪ್ರಥಮ ದರ್ಜೆ ಸಹಾಯಕಿ ಶಕುಂತಳಾ ಕುಂದರ್ ನಿರೂಪಿಸಿ, ಗ್ರಂಥಪಾಲಕಿ ರಂಜಿತ ಸಿ ವಂದಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಲ್ಸಂಕ: ಮೈ ಮರೆತರೆ ಕಾದಿದೆ ಅಪಾಯ

ಉಡುಪಿ, ಅ.19: ಉಡುಪಿ ನಗರದ ಕಲ್ಸಂಕ ಮಣಿಪಾಲ ರಸ್ತೆಯ ಮಾಲ್ ಒಂದರ...

ಅಧ್ಯಯನ ಪ್ರವಾಸ

ಕುಂದಾಪುರ, ಅ.19: ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಗಣಕ...

ಸ್ಯಾಮ್ ಸಂಗ್ ಸಾಲ್ವ್ ಫಾರ್ ಟುಮಾರೊ 2024 ಫಲಿತಾಂಶ ಪ್ರಕಟ

ಉಡುಪಿ, ಅ.19: ಸ್ಯಾಮ್ ಸಂಗ್ ಇಂಡಿಯಾ ಕಂಪನಿಯ ಪ್ರಮುಖ ರಾಷ್ಟ್ರೀಯ ಶಿಕ್ಷಣ...

ಮಕ್ಕಳಿಗೆ ಎಳವೆಯಲ್ಲಿಯೇ ವೇದಿಕೆ ಕಲ್ಪಿಸಿ: ಗೀತಾ ಆನಂದ್ ಕುಂದರ್

ಕೋಟ, ಅ.19: ಎಳವೆಯಲ್ಲಿಯೇ ಮಕ್ಕಳಿಗೆ ಸಮರ್ಪಕ ವೇದಿಕೆ ಕಲ್ಪಿಸಿಕೊಡಬೇಕು, ಮಕ್ಕಳ ಪ್ರಥಮ...
error: Content is protected !!