ಕಟಪಾಡಿ, ಜು. 17: ಕಟಪಾಡಿ ಶ್ರೀ ವೆಂಕಟರಮಣ ದೇವಳದ ಎ. ಆರ್ ಕಾಮತ್ ಮೆಮೋರಿಯಲ್ ಸಭಾಗೃಹದಲ್ಲಿ ಕೋಟೇಶ್ವರದ ಯಾದವೇಂದ್ರ ವೈಧ್ಯಶಾಲ, ಭುವನೇಂದ್ರ ಪಂಚಕರ್ಮ ಸೆಂಟರ್ ಹಾಗೂ ಕಟಪಾಡಿ ವೆಂಕಟರಮಣ ದೇವಳ, ಯುವಕ ಸೇವಾ ಸಮಾಜ, ಎಸ್.ವಿ.ಎಸ್ ಚ್ಯಾರಿಟೇಬಲ್ ಟ್ರಸ್ಟ್ ಸಹಯೋಗದೊಂದಿಗೆ 49 ನೇ ಉಚಿತ ಆಯುರ್ವೇದ ಆರೋಗ್ಯ ತಪಾಸಣಾ ಶಿಬಿರ ಹಾಗೂ ಉಚಿತ ಔಷಧಿ ವಿತರಣಾ ಕಾರ್ಯಕ್ರಮ ನಡೆಯಿತು. ವಿವೇಕ್ ಟ್ರೇಡರ್ಸ್ ಮಂಗಳೂರು ಔಷಧಿ ಪ್ರಾಯೋಜಕತ್ವ ವಹಿಸಿದ್ದರು.
ಕುಂಬ್ಳೆ ವೆಂಕಟೇಶ್ ಶೆಣೈ ಮತ್ತು ಕಟಪಾಡಿ ಯುವಕ ಸೇವಾ ಸಮಾಜ ವತಿಯಿಂದ ಸುಮಾರು 25 ಸಾವಿರ ವೆಚ್ಚದ ಆಯುರ್ವೇದ ಔಷಧಿಗಳನ್ನು ಭುವನೇಂದ್ರ ಟ್ರಸ್ಟ್ ಗೆ ಹಸ್ತಾಂತರಿಸಲಾಯಿತು. ಕಟಪಾಡಿ ವೆಂಕಟರಮಣ ದೇವಳದ ಆಡಳಿತ ಮಂಡಳಿ ಸದಸ್ಯರು, ಯಾಧವೇಂದ್ರ ವೈದ್ಯಶಾಲಾ ಕೋಟೇಶ್ವರ ಆಡಳಿತ ಸದಸ್ಯರು, ಕಟಪಾಡಿ ವೆಂಕಟರಮಣ ಯುವಕ ಸೇವಾ ಸಮಾಜದ ಅಧ್ಯಕ್ಷರು, ಪದಾಧಿಕಾರಿಗಳು, ಎಸ್. ವಿ. ಎಸ್ ಚಾರಿಟೇಬಲ್ ಟ್ರಸ್ಟ್ ನ ಸದಸ್ಯರು, ಆಯುರ್ವೇದ ತಜ್ಞ ವೈದ್ಯರು, ವೈದ್ಯ ವಿದ್ಯಾರ್ಥಿಗಳು ಇದ್ದರು.