ಉಡುಪಿ, ಜುಲೈ 13: ಕೃಷಿ ಇಲಾಖೆ ಹಾಗೂ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಕ್ಷೇತ್ರ ಭೇಟಿ ಸಂದರ್ಭದಲ್ಲಿ ಭತ್ತದ ಸಸಿ ಮಡಿಗಳಲ್ಲಿ ಸೈನಿಕ ಹುಳುವಿನ ಬಾದೆ ಹಾಗೂ ಹಾನಿಯ ಕುರಿತು ವರದಿ ನೀಡಿದ್ದು, ಸೈನಿಕ ಹುಳುವಿನ ಮರಿ ಕೀಟಗಳು ರಾತ್ರಿಯ ಅವಧಿಯಲ್ಲಿ ಸಸಿಯ ಎಲೆಗಳನ್ನು ತಿಂದು ಹಾನಿ ಉಂಟು ಮಾಡುತ್ತಿದ್ದು, ರೈತರು ಸಮಗ್ರ ಪೀಡೆ ನಿರ್ವಹಣೆಯ ಅಂಗವಾಗಿ ಪ್ಲಾಸ್ಟಿಕ್ ಚೀಲದಲ್ಲಿ ಕೊಳೆಯುತ್ತಿರುವ ಹಣ್ಣುಗಳ ತ್ಯಾಜ್ಯ ಇರಿಸಿ, ಆಕರ್ಷಣೆಗೊಂಡ ಸೈನಿಕ ಹುಳುಗಳನ್ನು ನಾಶ ಮಾಡಬೇಕು ಅಥವಾ ವಿದ್ಯುತ್ ದೀಪಕ್ಕೆ ಆಕರ್ಷಣೆಗೊಂಡ ಹುಳುಗಳನ್ನು ನಾಶ ಮಾಡಬಹುದು.
ಕೀಟಗಳ ಬಾದೆ ಹೆಚ್ಚಾಗುವ ಸಂಭವವಿದ್ದಲ್ಲಿ 2 ಮಿ.ಲೀ ಕ್ಲೋರೋಫೈರಿಫಾಸ್ ಅಥವಾ 2 ಮೀ.ಲೀ ಲ್ಯಾಂಬ್ಡಾಸೈಲೂತ್ರಿನ್ ನೇಜಿ ನೆನೆಯುವ ಹಾಗೆ ಸಿಂಪಡಿಸಿ, ಸೈನಿಕ ಹುಳಗಳನ್ನು ನಾಶ ಮಾಡುವಂತೆ ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.