ಉಡುಪಿ, ಜು. 4: ಪೂರ್ಣಪ್ರಜ್ಞ ಸಂಧ್ಯಾ ಕಾಲೇಜು ಉಡುಪಿಯ ವಾಣಿಜ್ಯ ವಿಭಾಗ ಮತ್ತು ಎಂಟ್ರೆಪ್ರೆನುರ್ಶಿಪ್ ಡೆವಲಪ್ಮೆಂಟ್ ಸೆಲ್ ಹಾಗೂ ಅಟಲ್ ಇನ್ಕ್ಯುಬೇಷನ್ ಕೇಂದ್ರ ನಿಟ್ಟೆ ಇದರ ಸಹಯೋಗದೊಂದಿಗೆ ‘ಬೇಸಿಕ್ಸ್ ಆಫ್ ಸ್ಟಾರ್ಟಪ್’ ಒಂದು ದಿನದ ಸ್ವ ಉದ್ಯಮ ಕುರಿತಾದ ಕಾರ್ಯಾಗಾರವು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಸ್ಟಾರ್ಟಪ್ ಎಂದರೇನು? ಅದನ್ನು ಪ್ರಾರಂಭಿಸುವುದು ಹೇಗೆ ಅದರ ಮಹತ್ವವೇನು ಮತ್ತೆ ಅದಕ್ಕೆ ಯಾವುದೆಲ್ಲ ಸೌಲಭ್ಯಗಳು ಲಭ್ಯವಿದೆ ಎನ್ನುವುದನ್ನು ಏ.ಐ.ಸಿ ನಿಟ್ಟೆ ಇದರ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳಾದ ಡಾ. ಎ. ಪಿ. ಆಚಾರ್ ಅವರು ವಿವರಿಸಿದರು.
ಕಾರ್ಯಕ್ರಮದಲ್ಲಿ ಆಹ್ವಾನಿತರಾಗಿದ್ದ ಯಶಸ್ವಿ ಉದ್ಯಮಿಗಳಾದ ಡಾ. ವಿಜಯೇಂದ್ರ ವಸಂತ್ ಮತ್ತು ಎಂ. ಮಹೇಶ್ ಕುಮಾರ್ ಅವರು ತಮ್ಮ ಅನುಭವಗಳನ್ನು ಹಂಚಿಕೊಂಡರು. ನಂತರ ಮಾತನಾಡಿದ ಡಾ. ಸಂತೋಷ್ ರಾವ್, ಸ್ಟಾರ್ಟಪ್ ಪ್ರರಂಭಿಸುವಲ್ಲಿ ಪ್ರಸ್ತುತ ಸ್ಪರ್ಧಾತ್ಮಕ ಜಗತ್ತಿನಲ್ಲಿರುವ ವ್ಯವಸ್ಥೆಗಳು ಹಾಗೂ ಸರಕಾರ ಹಾಗೂ ಬೇರೆ ಬೇರೆ ಸಂಸ್ಥೆಗಳಿಂದ ಇರುವ ಪ್ರೋತ್ಸಾಹದ ಕುರಿತು ವಿವರಿಸಿದರು.
ಮುಖ್ಯ ಅತಿಥಿಗಳಾಗಿ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜು ಉಡುಪಿ ಇದರ ವ್ಯವಸ್ಥಾಪಕ ಸಮಿತಿಯ ಗೌರವ ಕಾರ್ಯದರ್ಶಿಗಳಾದ ಸಿ.ಎ.ಟಿ ಪ್ರಶಾಂತ್ ಹೊಳ್ಳ, ಪೂರ್ಣಪ್ರಜ್ಞ ಸಂಧ್ಯಾ ಕಾಲೇಜು ಹಳೆ ವಿದ್ಯಾರ್ಥಿ ಸಂಘ (ರಿ.) ಅಧ್ಯಕ್ಷರಾದ ಮಧುಕರ್ ಮುದ್ರಾಡಿ, ಕಾಲೇಜಿನ ಪ್ರಾಂಶುಪಾಲರಾದ ಡಾ. ಸುಕನ್ಯಾ ಮೇರಿ ಜೆ., ಉಪಪ್ರಾಂಶುಪಾಲರಾದ ವಿನಾಯಕ್ ಪೈ ಬಿ., ಹಾಗೂ ಕಾಲೇಜಿನ ಪದವಿ ಹಾಗು ಸ್ನಾತಕೋತ್ತರ ವಿಭಾಗದ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರು ಹಾಗೂ ಜಿಲ್ಲೆಯ ವಿವಿಧ ಕಾಲೇಜಿನಿಂದ ಆಗಮಿಸಿದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ನಾಗರಾಜ ಸ್ವಾಗತಿಸಿ, ಪ್ರಾಧ್ಯಾಪಕರು ಹಾಗೂ ಕಾರ್ಯಕ್ರಮ ಸಂಯೋಜಕರಾದ ರಾಮಕೃಷ್ಣ ನಾಯಕ್ ವಂದಿಸಿದರು. ವಿದ್ಯಾರ್ಥಿಗಳಾದ ಶಶಿಕಿರಣ್ ಹಾಗೂ ನಮ್ರತಾ ನಿರೂಪಿಸಿದರು.