ಉಡುಪಿ, ಜುಲೈ 3: ಕೇಂದ್ರ ಸರ್ಕಾರದ ವತಿಯಿಂದ ಗೋಧಿ ಮಾರಾಟಗಾರರಿಗೆ 2024 ರ ಮಾರ್ಚ್ 31 ರ ವರೆಗೆ ಗೋಧಿಗೆ ಈ ಕೆಳಗಿನಂತೆ ದಾಸ್ತಾನು ಮಿತಿ ವಿಧಿಸಲಾಗಿರುತ್ತದೆ. ವ್ಯಾಪಾರಿಗಳು ಅಥವಾ ಸಗಟು ವ್ಯಾಪಾರಿಗಳಿಗೆ 3,000 ಮೆ.ಟ, ಪ್ರತೀ ಚಿಲ್ಲರೆ ಅಂಗಡಿಗಳ ಚಿಲ್ಲರೆ ವ್ಯಾಪಾರಿಗಳಿಗೆ 10 ಮೆ.ಟ, ದೊಡ್ಡ ಸರಣಿ ಚಿಲ್ಲರೆ ವ್ಯಾಪಾರಿಗಳಿಗೆ ಪ್ರತಿ ಓಟ್‌ಲೆಟ್‌ಗೆ 10 ಮೆ.ಟ ಮತ್ತು ಅವರ ಎಲ್ಲಾ ಡಿಪೋಗಳಿಗೆ 3000 ಮೆ.ಟ ಹಾಗೂ ಪ್ರೊಸೆರ‍್ಸ್: ವಾರ್ಷಿಕ ಸ್ಥಾಪಿತ ಸಾಮರ್ಥ್ಯದ 75 % ಅಥವಾ ಮಾಸಿಕ ಸ್ಥಾಪಿತ ಸಾಮರ್ಥ್ಯಕ್ಕೆ ಸಮನಾದ ಪ್ರಮಾಣವು 2023-24 ರ ಉಳಿದ ತಿಂಗಳುಗಳಿಂದ ಗುಣಿಸಿದಾಗ ಇರುವ ಕಡಿಮೆ. ಆದ್ದರಿಂದ ಜಿಲ್ಲೆಯಲ್ಲಿರುವ ಎಲ್ಲಾ ಗೋಧಿ ವರ್ತಕರು / ಪ್ರೋಸೆಸರ್‌ಗಳು ಕೇಂದ್ರ ಸರ್ಕಾರದ ವೆಬ್‌ಸೈಟ್ https://evegoils.nic.in/wsp/login ನಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು.
ನೋಂದಾಯಿತರು ಪ್ರತೀ ಶುಕ್ರವಾರ ದಾಸ್ತಾನನ್ನು ಘೋಷಿಸಬೇಕು. ಈ ಆದೇಶದಲ್ಲಿನ ಸೂಚನೆಗಳನ್ನು ಪಾಲಿಸದವರ ವಿರುದ್ಧ ಅಗತ್ಯ ವಸ್ತುಗಳ ಕಾಯ್ದೆ 1955 ಸೆಕ್ಷನ್ 7 ರ ಅನ್ವಯ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆಹಾರ ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.