ಉಡುಪಿ, ಜೂನ್ 29: ಪೂರ್ಣಪ್ರಜ್ಞಾ ಸಂಧ್ಯಾ ಕಾಲೇಜು ಉಡುಪಿ, ಅಟಲ್ ಇನ್‌ಕ್ಯುಬೇಷನ್ ಸೆಂಟರ್ ನಿಟ್ಟೆ ಇವರ ಸಹಯೋಗದೊಂದಿಗೆ ಒಂದು ದಿನದ ಉದ್ಯಮಶೀಲತೆ ಅಭಿವೃದ್ದಿ ಕಾರ್ಯಾಗಾರವನ್ನು ಜುಲೈ 1 ರಂದು ಕಾಲೇಜಿನ ಮಿನಿ ಅಡಿಟೋರಿಯಂನಲ್ಲಿ ಹಮ್ಮಿಕೊಳ್ಳಲಾಗಿದೆ. ಕಾರ್ಯಾಗಾರದ ಉದ್ಘಾಟನೆಯನ್ನು ಕಾಲೇಜಿನ ಗೌರವ ಕಾರ್ಯದರ್ಶಿ ಸಿ.ಎ. ಟಿ. ಪ್ರಶಾಂತ ಹೊಳ್ಳ ನೆರವೇರಿಸಲಿರುವರು.
ಸಂಪನ್ಮೂಲ ವ್ಯಕ್ತಿಗಳಾದ ಅಟಲ್ ಇನ್‌ಕ್ಯುಬೇಷನ್ ಸೆಂಟರ್ ನಿಟ್ಟೆ ಸಿ.ಇ.ಒ. ಡಾ. ಎ.ಪಿ. ಆಚಾರ್, ಇನ್‌ಕ್ಯುಬೇಷನ್ ಹೆಲ್ತ್ ಕೇರ್ ತರಬೇತುದಾರ ಡಾ. ವಿಜೇಂದ್ರ ವಸಂತ, ಎಂ. ಮಹೇಶ್ ಕುಮಾರ್, ಮಣಿಪಾಲ್ ಯುನಿವರ್ಸಲ್ ಟೆಕ್ನಾಲಜಿ ಚೀಫ್ ಎಕ್ಸಿಕ್ಯೂಟಿವ್ ಡಾ. ಸಂತೋಷ್ ರಾವ್ ಭಾಗವಹಿಸುವರು ಎಂದು ಕಾಲೇಜಿನ ಪ್ರಾಚಾರ್ಯರಾದ ಡಾ. ಸುಕನ್ಯಾ ಮೇರಿ ಜೆ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.