ಉಡುಪಿ, ಜೂ. 22: 2024ರ ನೀಟ್ ಪರೀಕ್ಷೆಗೆ ತಯಾರಾಗುತ್ತಿರುವ ಆಸಕ್ತ ವಿದ್ಯಾರ್ಥಿಗಳಿಗಾಗಿ ಉಡುಪಿ ಜ್ಞಾನಸುಧಾದಲ್ಲಿ ನೀಟ್ ಲಾಂಗ್ ಟರ್ಮ್ ಗೆ ಅರ್ಜಿ ಅಹ್ವಾನಿಸಲಾಗಿದೆ. ಪ್ರಸಕ್ತ ಸಾಲಿನ ತರಬೇತಿಗೆ ನೋಂದಣಿ ಪ್ರಕ್ರಿಯೆ
ಆರಂಭಗೊಂಡಿದ್ದು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯಿತಿ ಕೂಡಾ ಇರಲಿದೆ. ಈ ವಿದ್ಯಾರ್ಥಿಗಳಿಗೆ ಅನುಭವಿ ಉಪನ್ಯಾಸಕರಿಂದ ತರಬೇತಿ ದೊರಕಲಿದೆ. 2023ನೇ ಸಾಲಿನ ನೀಟ್ ಫಲಿತಾಂಶದಲ್ಲಿ ಜ್ಞಾನಸುಧಾದ 15 ವಿದ್ಯಾರ್ಥಿಗಳು 600ಕ್ಕಿಂತ ಅಧಿಕ ಅಂಕವನ್ನು 93 ವಿದ್ಯಾರ್ಥಿಗಳು 500ಕ್ಕಿಂತ ಅಧಿಕ ಅಂಕಗಳನ್ನು ಗಳಿಸಿದ್ದಾರೆ.
ಉಡುಪಿ ಜ್ಞಾನಸುಧಾದಲ್ಲಿ ನೀಟ್ ಲಾಂಗ್ ಟರ್ಮ್ ತರಬೇತಿ ಪಡೆದ ಅನಿರುದ್ದ್ 640 (ಹಿಂದೆ 435), ಅಂಕಿತಾ ಆಚಾರ್ಯ 620(ಹಿಂದೆ 492), ದಿಶಾ ಶೆಟ್ಟಿ 604 (ಹಿಂದೆ 497), ವೈಷ್ಣವಿ ಮೊಹರರ್ 615 (ಹಿಂದೆ 480) ಅಂಕಗಳನ್ನು ಪಡೆದು ರಾಜ್ಯದ ಪ್ರತಿಷ್ಠಿತ ಮೆಡಿಕಲ್ ಕಾಲೇಜುಗಳಲ್ಲಿ ಸೀಟ್ ಪಡೆಯುವ ನಿರೀಕ್ಷೆಯಲ್ಲಿದ್ದಾರೆ. ಆಸಕ್ತ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಳ್ಳಲು ಕೆಳಕಂಡ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದು. 8762280555, 8762095555.