ಉಡುಪಿ, ಜೂ.21: ದೈಹಿಕ ಅಂಗ ಸಾಧನೆಯೊಂದಿಗೆ ಚಿತ್ತವೃತ್ತಿ ನಿಯಂತ್ರಣವೇ ಯೋಗದ ಆದ್ಯ ಗುರಿ. ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ಯೋಗ ತುಂಬಾ ಸಹಕಾರಿ. ಆದ್ದರಿಂದ ವಿದ್ಯಾರ್ಥಿಗಳು ಯೋಗಾಭ್ಯಾಸದತ್ತ ಒಲವು ತೋರಬೇಕು ಎಂದು ಉಡುಪಿ ಪತಂಜಲಿ ಯೋಗ ಸಮಿತಿಯ ವೇದಾವತಿ ಹೇಳಿದರು. ಅವರು ವಿಶ್ವ ಯೋಗ ದಿನಾಚರಣೆ ಅಂಗವಾಗಿ ಉಡುಪಿ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಎನ್ಎಸ್ಎಸ್ ಮತ್ತು ಪತಂಜಲಿ ಯೋಗ ಸಮಿತಿ ಸಹಯೋಗದಲ್ಲಿ ಯೋಗ ತರಬೇತಿ ಕಾರ್ಯಕ್ರಮವನ್ನು ನಡೆಸಿಕೊಟ್ಟು ಮಾತನಾಡಿದರು.
ಪತಂಜಲಿ ಸಮಿತಿಯ ಅನಿತಾ, ಗಿರೀಶ್ ಮತ್ತು ಸಹನಾ ತರಬೇತುದಾರರಾಗಿ ಪಾಲ್ಗೊಂಡಿದ್ದರು. ಮುಖ್ಯ ಶಿಕ್ಷಕಿ ಇಂದಿರಾ ಸ್ವಾಗತಿಸಿ, ದೈಹಿಕ ಶಿಕ್ಷಕ ವಸಂತ್ ಜೋಗಿ ವಂದಿಸಿದರು. ಎನ್.ಎಸ್.ಎಸ್ ಸಂಚಾಲಕಿ ಮಂಜುಳಾ ಕಾರ್ಯಕ್ರಮ ನಿರೂಪಿಸಿದರು.