Friday, September 20, 2024
Friday, September 20, 2024

ಆಸರೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ 130ನೇ ಮನೆಗೆ ಉಚಿತ ವಿದ್ಯುತ್ ಸಂಪರ್ಕ

ಆಸರೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ 130ನೇ ಮನೆಗೆ ಉಚಿತ ವಿದ್ಯುತ್ ಸಂಪರ್ಕ

Date:

ಉಡುಪಿ, ಜೂನ್ 14: ಉಡುಪಿ ನಗರವನ್ನು ನೂರು ಶೇಕಡ ವಿದ್ಯುತ್ ಹೊಂದಿದ ದೇಶದ ಮೊಟ್ಟ ಮೊದಲ ನಗರವನ್ನಾಗಿ ಮಾಡುವಲ್ಲಿ ದಾಪುಗಾಲು ಇಡುತ್ತಿರುವ ಆಸರೆ ಚಾರಿಟೇಬಲ್ ಟ್ರಸ್ಟ್ (ರಿ.) ಕಡಿಯಾಳಿ ಇವರ ನೇತ್ರತ್ವದಲ್ಲಿ ಉಡುಪಿ ನಗರದ ಸುಬ್ರಹ್ಮಣ್ಯನಗರ ವಾರ್ಡಿನ ಶಾಂತ ಮತ್ತು ಸುಮಿತ್ರ ಇವರ ಮನೆಗಳಿಗೆ ಉಚಿತ ವಿದ್ಯುತ್ ಸಂಪರ್ಕ ನೀಡಲಾಯಿತು. ಇದುವರೆಗೆ ಟ್ರಸ್ಟ್ ವತಿಯಿಂದ ಉಡುಪಿ ನಗರದ 130 ಮನೆಗಳಿಗೆ ಉಚಿತ ವಿದ್ಯುತ್ ಸಂಪರ್ಕ ನೀಡಲಾಗಿದೆ. ದಾನಿಗಳಾದ ಉಡುಪಿ ಮೂಲದ ಗೋವಾದ ಉದ್ಯಮಿ ಹರೀಶ ಕಲ್ಕೂರ ಮತ್ತು ಸುಮಾ ಹರೀಶ್ ಕಲ್ಕೂರ ಇವರು ಉಚಿತ ವಿದ್ಯುತ್ ಸಂಪರ್ಕವನ್ನು ಉದ್ಘಾಟಿಸಿ ಮನೆಯವರಿಗೆ ಗೃಹಬಳಕೆ ವಸ್ತುಗಳನ್ನು ನೀಡಿದರು.

ಸುಬ್ರಹ್ಮಣ್ಯನಗರ ವಾರ್ಡಿನ ನಗರಸಭಾ ಸದಸ್ಯರಾದ ಜಯಂತಿ ಪೂಜಾರಿ, ಮಾಜಿ ನಗರಸಭಾ ಸದಸ್ಯೆ ಸುಬೇದ, ಆಸರೆ ಟ್ರಸ್ಟಿನ ಸದಸ್ಯರಾದ ವಿದ್ಯಾಶಾಮ್ ಸುಂದರ್, ಶ್ರೀನಿವಾಸ್ ರಾವ್, ರಾಜಾರಾಮ್, ಸುರೇಶ್ ಪೂಜಾರಿ, ಮತ್ತು ಸ್ಥಳೀಯರು ಉಪಸ್ಥಿತರಿದ್ದರು. ಆಸರೆ ಚಾರಿಟೇಬಲ್ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಕೆ. ರಾಘವೇಂದ್ರ ಕಿಣಿ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಸಾಗರ ಸುರಕ್ಷತೆಗಾಗಿ ಎಂಒಯುಗೆ ಭಾರತೀಯ ಕೋಸ್ಟ್ ಗಾರ್ಡ್ ಸಹಿ

ನವದೆಹಲಿ, ಸೆ.20: ಭಾರತೀಯ ಕೋಸ್ಟ್ ಗಾರ್ಡ್ ನವದೆಹಲಿಯಲ್ಲಿ ಸಾಗರ ಸಂರಕ್ಷಣೆಗಾಗಿ ದಿ...

ಶಿಕ್ಷಕರು ಹೊಸ ತಂತ್ರಜ್ಞಾನಕ್ಕೆ ತೆರೆದುಕೊಳ್ಳಬೇಕು: ಡಾ.ಅಶೋಕ ಕಾಮತ್

ಉಡುಪಿ, ಸೆ.20: ರೋಟರಿ ಉಡುಪಿ ಮತ್ತು ಇನ್ನರ್ ವೀಲ್ ಕ್ಲಬ್ ಅವರ...

ತಿರುಪತಿ ಪ್ರಸಾದಕ್ಕೆ ಅಪಚಾರ- ತಪ್ಪಿತಸ್ಥರನ್ನು ಬಂಧಿಸಿ ಕಠಿಣ ಶಿಕ್ಷೆ ನೀಡಿ: ಸಂಸದ ಕೋಟ ಶ್ರೀನಿವಾಸ ಪೂಜಾರಿ

ಉಡುಪಿ, ಸೆ.20: ಆರಾಧ್ಯ ಮೂರ್ತಿ ಶ್ರೀ ತಿರುಪತಿ ತಿಮ್ಮಪ್ಪನ ಪವಿತ್ರ ಪ್ರಸಾದಕ್ಕೆ...

ಮಣಿಪುರ: ರಸ್ತೆ ಕಾಮಗಾರಿ ಪೂರ್ಣ

ಮಣಿಪುರ, ಸೆ.19: ಕಾಪು ವಿಧಾನಸಭಾ ಕ್ಷೇತ್ರದ ಮಣಿಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ...
error: Content is protected !!