ಕಟಪಾಡಿ, ಜೂನ್ 12: ರೋಟರಿ ಕ್ಲಬ್ ಶಂಕರಪುರ, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ವಿಭಾಗ ಮಾಹೆ ಮಣಿಪಾಲ, ಪ್ರಾಥಮಿಕ ಆರೋಗ್ಯ ಕೇಂದ್ರ ಮೂಡಬಿಟ್ಟು, ಕೆಎಂಸಿ ಮಣಿಪಾಲ ಇವರ ಸಂಯುಕ್ತ ಆಶ್ರಯದಲ್ಲಿ ಮಣಿಪಾಲ ಕೆಎಂಸಿ ದಂತ ಮಹಾವಿದ್ಯಾಲಯದ ತಜ್ಞ ವೈದ್ಯ ತಂಡದವರಿಂದ ಉಚಿತ ದಂತ ಚಿಕಿತ್ಸಾ ಶಿಬಿರವು ಶಂಕರಪುರದ ರೋಟರಿ ಶತಾಬ್ದಿ ಭವನದಲ್ಲಿ ನಡೆಯಿತು.
ಮಣಿಪಾಲ ಕೆಎಂಸಿ ದಂತ ಮಹಾ ವಿದ್ಯಾಲಯದ ಸಹ ಪ್ರಾಧ್ಯಾಪಕರಾದ ಡಾ. ಪ್ರಜ್ಞಾ ನಾಯಕ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಾಹೆ ಮಣಿಪಾಲದ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ವಿಭಾಗದ ನಿರ್ದೇಶಕರಾದ ಡಾ. ಗೀತಾ ಮಯ್ಯ ದಂತ ಚಿಕಿತ್ಸೆಯ ಬಗ್ಗೆ ಮಾಹಿತಿ ನೀಡಿದರು.
ರೋಟರಿ ಸಮಾಜ ಸೇವಾ ನಿರ್ದೇಶಕರಾದ ಸಂದೀಪ್ ಬಂಗೇರ ಪ್ರಾರ್ಥನೆ ನೆರವೇರಿಸಿದರು. ರೋಟರಿ ಅಧ್ಯಕ್ಷರಾದ ಗ್ಲಾಡಸನ್ ಕುಂದರ್ ಸ್ವಾಗತಿಸಿದರು. ಕಾರ್ಯದರ್ಶಿ ಸಿಲ್ವಿಯಾ ಕಾಸ್ಟಲಿನೋ ವಂದಿಸಿದರು.
ವಿಕ್ಟರ್ ಮೆಂಡೋನ್ಸ, ರೋಷನ್ ಜತ್ತನ್ನ, ಡಾ. ರಾಯನ್ ಮಾಥಾಯಸ್, ಸಂದೇಶ್, ವೈದ್ಯಾಧಿಕಾರಿಗಳು, ಸಹಾಯಕರು, ರೋಟರಿ ಸದಸ್ಯರು, ರೋಟರಾಕ್ಟ್ ಸದಸ್ಯರು, ಆಶಾ ಕಾರ್ಯಕರ್ತೆಯರು, ಉಪಸ್ಥಿತರಿದ್ದರು.