ಉಡುಪಿ, ಜೂನ್ 11: ಪರ್ಯಾಯ ಪೂರ್ವಭಾವಿ ಸಂಚಾರದಲ್ಲಿರುವ ಉಡುಪಿ ಶ್ರೀ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಹಾಗೂ ಕಿರಿಯಪಟ್ಟದ ಶ್ರೀ ಸುಶ್ರೀ0ದ್ರ ತೀರ್ಥ ಶ್ರೀಪಾದಂಗಳವರಿಗೆ ನವದೆಹಲಿಯಲ್ಲಿ ಪೌರ ಸನ್ಮಾನ ನಡೆಸಲಾಯಿತು.
ವಿಶ್ವ ಹಿಂದೂ ಪರಿಷತ್ ಪ್ರಮುಖ ವೆಂಕಟಕೋಟೇಶ್ವರ ರಾವ್ ಇವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯದ ಸಂಸ್ಕೃತ ವಿಭಾಗದ ಮುಖ್ಯಸ್ಥರಾದ ಡಾ. ಉಪೇಂದ್ರರಾವ್ ಅಭಿನಂದನಾ ಭಾಷಣ ಮಾಡಿದರು.
ವಿಶ್ವ ಹಿಂದೂ ಪರಿಷತ್ತಿನ ಅಂತರರಾಷ್ಟ್ರೀಯ ಪ್ರಚಾರಕರಾದ ವಿಜ್ಞಾನಾಂದ ಸ್ವಾಮಿ ಮಹಾರಾಜ್ ಇವರು ಶ್ರೀಗಳ ಕಾರ್ಯವನ್ನು ಶ್ಲಾಘಿಸಿದರು. ಭಾರತ ಸರ್ಕಾರದ ಆಯುಷ್ ಮಂತ್ರಾಲಯದ ನಿರ್ದೇಶಕರಾದ ಡಾ. ಈಶ್ವರ ವಿ ಬಸವರೆಡ್ಡಿ ಗೌಡೀಯ ವೈಷ್ಣವ ತತ್ವಪ್ರಚಾರಕರಾದ ಶ್ರೀಯಜ್ನೇಶ್ವರ ಪ್ರಭುಗಳು, ಪಂಜಾಬ್ ಮತ್ತು ಸಿಂದ್ ಬ್ಯಾಂಕಿನ ಮುಖ್ಯಸ್ಥರಾದ ರಾಘವೇಂದ್ರ ಕೊಳ್ಳೇಗಾಲ ಮುಂತಾದವರು ಉಪಸ್ಥಿತರಿದ್ದರು.
ದೆಹಲಿ ಭಕ್ತರು ಶ್ರೀಪಾದರಿಗೆ ಗೌರವಾರ್ಪಣೆ ಮಾಡಿದರು. ಕರ್ನಾಟಕ ಸಂಘ, ದೆಹಲಿ ಕನ್ನಡ ಶಿಕ್ಷಣ ಸಂಸ್ಥೆಯ ವತಿಯಿಂದ ಗೌರವಾರ್ಪಣೆ ನಡೆಯಿತು. ಶ್ರೀಪಾದರು ಸಂಸ್ಕೃತ ಇಂಗ್ಲಿಷ್ ಭಾಷೆಯಲ್ಲಿ ಉಪನ್ಯಾಸವಿತ್ತು ತಮ್ಮ ಪರ್ಯಾಯದ ಯೋಜನೆಯಾದ ಭಗವದ್ಗೀತೆಯ ವೈಶಿಷ್ಟ್ಯತೆಯನ್ನು ನಿರೂಪಿಸಿ ತಮ್ಮ ಚತುರ್ಥ ಪರ್ಯಾಯಕ್ಕೆ ಎಲ್ಲ ಭಗವದ್ಭಕ್ತರನ್ನು ಆಹ್ವಾನಿಸಿದರು. ಅನಿಲ್ ಕುಮಾರ್ ರಾಮಾಚಾರ್ ಸ್ವಾಗತಿಸಿ ವಂದಿಸಿದರು. ಬಿ. ಗೋಪಾಲಾಚಾರ್ಯ ನಿರೂಪಿಸಿದರು.