ಉಡುಪಿ, ಜೂನ್ 8: ಬೆಂಗಳೂರಿನ ರಾಜಾಜಿನಗರದ ಸ್ಪಂದನಾ ಸೇವಾ ಸಂಸ್ಥೆಯು ನೀಡುವ ‘ಯಶೋ ಮಾಧ್ಯಮ 2023’ ಪ್ರಶಸ್ತಿಗೆ ಬ್ರಹ್ಮಾವರದ ವಿಜಯ ಕರ್ನಾಟಕ ಪತ್ರಿಕೆಯ ವರದಿಗಾರ ಎಚ್. ಮೋಹನ ಉಡುಪ ಹಂದಾಡಿ ಅವರು ಭಾಜನರಾಗಿದ್ದಾರೆ. ಜೂನ್ 10 ರಂದು ಉಡುಪಿ ಜಿಲ್ಲೆಯ ಕಲ್ಯಾಣಪುರದ ಹಿಂದೂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯುವ ಉಚಿತ ನೋಟ್ ಪುಸ್ತಕ ವಿತರಣಾ ಕಾರ್ಯಕ್ರಮದಲ್ಲಿ ಪ್ರಶಸ್ತಿ ವಿತರಿಸಲಾಗುವುದು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಶಿರಿಯಾರ ಗಣೇಶ್ ನಾಯಕ್, ಡಿವೈಎಸ್ಪಿ ಕುಮಾರ್ ಚಂದ್ರ, ರವೀಂದ್ರ, ಯು. ಲೋಕೇಶ್ ಪೂಜಾರಿ, ಸಂತೋಷ್ ಕಾಮತ್ ಹಾಗೂ ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿರುವರು ಎಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.