ಉಡುಪಿ, ಜೂನ್ 3: ಉಡುಪಿ ನಗರಸಭಾ ವ್ಯಾಪ್ತಿಯ ಶಿರಿಬೀಡು ವಾರ್ಡಿನ ಸಿಟಿ ಬಸ್ ಸ್ಟ್ಯಾಂಡ್ ನಿಂದ ಕಾಫಿಯಾ ಹೋಟೆಲ್ ವರೆಗೆ ಒಳಚರಂಡಿ ಜಾಲದ ಪೈಪ್ ಬದಲಾವಣೆ ಮಾಡಿ ಕಾಂಕ್ರೀಟ್ ಛೇಂಬರ್ ನಿರ್ಮಾಣ ಕಾಮಗಾರಿ ನಡೆಯುತ್ತಿರುವುದರಿಂದ, ಸದರಿ ರಸ್ತೆಯಲ್ಲಿ ಜೂನ್ 15 ರ ವರೆಗೆ ವಾಹನ ಸಂಚಾರ ನಿಷೇಧಿಸಲಾಗಿದ್ದು, ಬದಲಿ ವ್ಯವಸ್ಥೆಯಾಗಿ, ಸರ್ವಿಸ್ ಬಸ್ ಸ್ಟ್ಯಾಂಡ್ ಎದುರಿನಿಂದ ಕೆ.ಎಸ್.ಆರ್.ಟಿ.ಸಿ ಬಸ್ ಸ್ಟ್ಯಾಂಡ್ ಮಾರ್ಗವಾಗಿ ಚಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ನಗರಸಭೆಯ ಪೌರಾಯಕ್ತರ ಪ್ರಕಟಣೆ ತಿಳಿಸಿದೆ.
ಉಡುಪಿ: ವಾಹನ ಸಂಚಾರ ಬದಲಾವಣೆ

ಉಡುಪಿ: ವಾಹನ ಸಂಚಾರ ಬದಲಾವಣೆ
Date: