Monday, January 20, 2025
Monday, January 20, 2025

ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ (ರಿ)- ಮಣಿಪಾಲ ಸಿಗ್ನಾ ಆರೋಗ್ಯ ಸುರಕ್ಷಾ ಕಾರ್ಡ್ ವಿತರಣೆ; ಸಾಧಕರಿಗೆ ಸನ್ಮಾನ

ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ (ರಿ)- ಮಣಿಪಾಲ ಸಿಗ್ನಾ ಆರೋಗ್ಯ ಸುರಕ್ಷಾ ಕಾರ್ಡ್ ವಿತರಣೆ; ಸಾಧಕರಿಗೆ ಸನ್ಮಾನ

Date:

ಉಡುಪಿ: ಸಾಧನೆಯ ಅಥವಾ ಸೇವೆಯ ಗುಣ ಇದ್ದಾಗ ಮಾತ್ರ ಒಬ್ಬ ವ್ಯಕ್ತಿ ಶಕ್ತಿಯಾಗಿ ಸಮಾಜದಲ್ಲಿ ಹೊರಹೊಮ್ಮುತ್ತಾನೆ. ಬೇರೆಯವರ ಒಳ್ಳೆಯತನವನ್ನು ಗುರುತಿಸಿ, ಸತ್ಕರಿಸಿ ತಮ್ಮ ಜೀವನದಲ್ಲಿ ಅದನ್ನು ಅಳವಡಿಸಿಕೊಂಡಾಗ ಮಾತ್ರ ಅವನ ಜೀವನ ಸಾರ್ಥಕಥೆಯನ್ನು ಪಡೆದು ಮನುಷ್ಯತ್ವದಿಂದ ಆತ ದೈವತ್ವದ ಕಡೆಗೆ ಸಾಗಲು ಸಾಧ್ಯ.

ಮನುಷ್ಯನಾದವನಿಗೆ ದೇವ ಪ್ರೇಮ, ದೇಹ ಪ್ರೇಮ ಹಾಗೂ ದೇಶಪ್ರೇಮ ಇರಬೇಕು. ಅಂತಹವರನ್ನು ನಾವು ಇಲ್ಲಿ ಈ ಸಂಸ್ಥೆಯಲ್ಲಿ ಕಾಣುತ್ತಿದ್ದೇವೆ.

ಸಾರ್ವಜನಿಕರ ಹಿತಕ್ಕಾಗಿ ಹಲವಾರು ಧಾರ್ಮಿಕ ಕಾರ್ಯಕ್ರಮಗಳು, ದೇಹಕ್ಕೆ ಮತ್ತು ದೇಶಕ್ಕೆ ಅಥವಾ ಸಮಾಜಕ್ಕೆ ಅಗತ್ಯವಿರುವ ವೈದ್ಯಕೀಯ ನೆರವು, ಮಕ್ಕಳಿಗೆ ವಿದ್ಯಾರ್ಥಿ ವೇತನ, ಅಶಕ್ತರಿಗೆ ಅಬಲರಿಗೆ ಅನಾರೋಗ್ಯ ಪೀಡಿತರಿಗೆ ಆರ್ಥಿಕ ನೆರವು, ಸಾಧಕರಿಗೆ ಸನ್ಮಾನ ಹೀಗೆ ಹತ್ತು ಹಲವು ಸೇವಾ ಕೈಂಕರ್ಯಗಳು ನಿಮ್ಮಿಂದ ಅವಿರತವಾಗಿ ನಡೆಯುತ್ತಿದೆ.

ಇದು ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ (ರಿ) ಮತ್ತು ಮಣಿಪಾಲ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಲೋಕಾರ್ಪಣೆಗೊಂಡ ಶ್ರೀ ಬ್ರಾಹ್ಮೀ ಸಭಾಭವನದಲ್ಲಿ ಸಂಪನ್ನಗೊಂಡ ಮಣಿಪಾಲ ಸಿಗ್ನಾ ಆರೋಗ್ಯ ಸುರಕ್ಷಾ ಕಾರ್ಡ್ ವಿತರಣೆ ಹಾಗೂ ವಿಪ್ರ ಸಾಧಕರಿಗೆ ಸನ್ಮಾನ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಅಂಬಲಪಾಡಿ ಶ್ರೀ ಜನಾರ್ಧನ ಮಹಾಕಾಳಿ ದೇವಳದ ಧರ್ಮದರ್ಶಿ ಡಾ. ನಿ.ಬೀ. ವಿಜಯ ಬಲ್ಲಾಳ್ ರವರ ಮತ್ತು ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ಮಕ್ಕಳ ಚಿಕಿತ್ಸಾ ವಿಭಾಗದ ತಜ್ಞ ಪ್ರಾಧ್ಯಾಪಕ ಡಾ. ಸುನಿಲ್ ಸಿ. ಮುಂಡ್ಕೂರು ರವರ ಭಾಷಣದ ಸಾರ.

ಉಡುಪಿಯ ಸುತ್ತಮುತ್ತಲಿನ ಸುಮಾರು 450 ವಿಪ್ರ ಕುಟುಂಬಕ್ಕೆ ಆರೋಗ್ಯ ಕಾರ್ಡ್ ವಿತರಿಸಲಾಯಿತು. ಕೋವಿಡ್ ಕಾಲಘಟ್ಟದಲ್ಲಿ ತಾಯಿ ಮಗು ಹಾಗೂ ಹಲವು ಜೀವಗಳನ್ನು ಉಳಿಸಿದ ಡಾ. ಟಿ.ಎಂ.ಎ. ಪೈ ಆಸ್ಪತ್ರೆಯ ಪ್ರಸೂತಿ ಹಾಗೂ ಸ್ತ್ರೀರೋಗ ತಜ್ಞೆ ಡಾ. ಶಶಿಕಲಾ ಭಟ್ ರವರನ್ನು, ಹಲವಾರು ನಾಟಕ, ಚಲನಚಿತ್ರಗಳಲ್ಲಿ ಅಭಿನಯಿಸಿದ ನಟ, ನಿರ್ದೇಶಕ, ಸಂಘಟಕ ಹಾಗೂ ನಾಯಕ ರಂಗಭೂಮಿ ಕಲಾವಿದ ರವಿರಾಜ್ ಎಚ್.ಪಿ., ಅಪರ ಕ್ರಿಯೆ ಮುಂತಾದ ಸಾಮಾಜಿಕ ಕಳಕಳಿಯ ಸೇವೆಯನ್ನು ಮಾಡುತ್ತಿರುವ ರಾಮ ಕೊಡಂಚ, ಅಚ್ಚುಕಟ್ಟು, ಶಿಸ್ತು ಸಂಯಮ ಭಕ್ತಿಶ್ರದ್ಧೆಯ ಧಾರ್ಮಿಕ ಸೇವೆಗಾಗಿ ರಮೇಶ್ ಭಟ್ ರನ್ನು ಸನ್ಮಾನಿಸಲಾಯಿತು.

ಬಾಲಕನಿಗೆ ಶಸ್ತ್ರಚಿಕಿತ್ಸೆಗಾಗಿ ನೆರವು, ಕೋವಿಡ್ ಹೆಲ್ಪ್ ಲೈನ್ ನಲ್ಲಿ ಕೋವಿಡ್ ಪೀಡಿತರಿಗೆ ಸಹಕಾರ ನೀಡಿದ ರಾಜೇಶ್ ನಾವಡ, ಮೋಹನ್ ದಾಸ್ ಭಟ್, ರಂಜನ್ ಕಲ್ಕೂರ್ ರವರ ನೇತೃತ್ವದಲ್ಲಿ ಅಭಿನಂದಿಸುವುದರ ಜೊತೆಗೆ ಕೋವಿಡ್ ಕಾರಣದಿಂದ ತಾಯಿಯನ್ನು ಕಳೆದುಕೊಂಡ ಸಂತ್ರಸ್ತೆಗೆ ಆರ್ಥಿಕ ನೆರವು, ಆರೋಗ್ಯ ಕಾರ್ಡ್ ವಿತರಣೆಯ ಸಂದರ್ಭದಲ್ಲಿ ಶ್ರಮಿಸಿದ ಸಂಚಾಲಕ ರಘುಪತಿ ರಾವ್ ಹಾಗೂ ಇತರ ಸದಸ್ಯರನ್ನು ಗುರುತಿಸಲಾಯಿತು.

ಕೃಷ್ಣಾಪುರ ಮಠದ ಶ್ರೀ ಶ್ರೀ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರನ್ನು ಸಭಾಭವನಕ್ಕೆ ಅದ್ದೂರಿಯಿಂದ ಬರಮಾಡಿಸಿಕೊಂಡು ಅವರಿಗೆ ಸಭಾಧ್ಯಕ್ಷ ಎಂ. ಜಿ. ಚೈತನ್ಯ ದಂಪತಿಗಳು ಫಲ ಪುಷ್ಪ ಮಾಣಿಕ್ಯ ಮಂಗಳಾರತಿ, ಪಾದಪೂಜೆಯನ್ನು ನೆರವೇರಿಸಿದರು. ನಂತರ ಅನುಗ್ರಹ ಸಂದೇಶಗೈದ ಮಠಾಧೀಶರು ಪರ್ಯಾಯ ಮಹೋತ್ಸವದಲ್ಲಿ ಸಾಂಗವಾಗಿ ತೊಡಗಿಕೊಳ್ಳಲು ವಿನಂತಿಸಿದರು.

ಸವಿತಾ, ಗಾಯತ್ರಿ, ಆಶಾ ಪ್ರಾರ್ಥನೆ ನೆರವೇರಿಸಿದರು. ಅಧ್ಯಕ್ಷ ಚೈತನ್ಯ ಎಂ.ಜಿ. ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸಾಧಕರನ್ನು ಪೂರ್ಣಿಮಾ ಜನಾರ್ಧನ್, ಪದ್ಮಲತಾ ವಿಷ್ಣು, ರಾಜೇಂದ್ರ ಪ್ರಸಾದ್ ಹಾಗೂ ನಾರಾಯಣದಾಸ ಉಡುಪರು ಪರಿಚಯಿಸಿ ವಂದನಾರ್ಪಣೆಗೈದರು.

ವೇದಿಕೆಯಲ್ಲಿ ಕೋಶಾಧಿಕಾರಿ ಕುಮಾರಸ್ವಾಮಿ ಉಡುಪ, ಉಪಾಧ್ಯಕ್ಷ ರಘುಪತಿ ರಾವ್ ಉಪಸ್ಥಿತರಿದ್ದರು. ಸುಮಿತ್ರಾ ಕೆರೆಮಠ ಮತ್ತು ಸುನೀತಾ ಸಹಕರಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ರಾಜೇಶ್ ಭಟ್ ಪಣಿಯಾಡಿ ನಿರ್ವಹಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಲ್ಸಂಕ ಸರ್ಕಲ್ ನಲ್ಲಿ ಬ್ಯಾರಿಕೇಡ್ ಅಳವಡಿಸಿರುವುದು ಅವೈಜ್ಞಾನಿಕ ಕ್ರಮ: ಮಾಜಿ ಶಾಸಕ ರಘುಪತಿ ಭಟ್

ಉಡುಪಿ, ಜ.19: ಅಂಬಾಗಿಲು - ಗುಂಡಿಬೈಲು ಮಾರ್ಗವಾಗಿ ಉಡುಪಿ ನಗರ ಪ್ರವೇಶಿಸುವ...

ಜ.27: ತೆಂಕನಿಡಿಯೂರು ಕಾಲೇಜಿನಲ್ಲಿ ಡಾ. ಶಿವರಾಮ ಕಾರಂತರ ಕಾದಂಬರಿ ಅಧ್ಯಯನ ಶಿಬಿರ

ಉಡುಪಿ, ಜ.18: ಕರ್ನಾಟಕ ಸರಕಾರದ ಡಾ. ಶಿವರಾಮ ಕಾರಂತ ಟ್ರಸ್ಟ್ ಉಡುಪಿ...

ಮಣಿಪಾಲ ಕೆ.ಎಂ.ಸಿ: ಗೋಲ್- ಡೈರೆಕ್ಟೆಡ್ ಬ್ಲೀಡಿಂಗ್ ಮ್ಯಾನೇಜ್ಮೆಂಟ್ ವಿಚಾರ ಸಂಕಿರಣ

ಮಣಿಪಾಲ, ಜ.19: ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಮಣಿಪಾಲದ ಇಮ್ಯುನೊಹೆಮಟಾಲಜಿ...

ಕಲ್ಸಂಕ ಜಂಕ್ಷನ್ ಸುಗಮ ಸಂಚಾರ ವ್ಯವಸ್ಥೆ ಬಗ್ಗೆ ಜಿಲ್ಲಾಧಿಕಾರಿ ಜೊತೆ ಶಾಸಕ ಯಶ್ಪಾಲ್ ಸುವರ್ಣ ಸಮಾಲೋಚನೆ

ಉಡುಪಿ, ಜ.19: ಕಲ್ಸಂಕ ಜಂಕ್ಷನ್ ನಲ್ಲಿ ಬ್ಯಾರಿಕೇಡ್ ಅಳವಡಿಸಿ ಆಂಬಾಗಿಲು ಭಾಗದ...
error: Content is protected !!