ಬ್ರಹ್ಮಾವರ, ಏ. 6: ಯುವಕ-ಯುವತಿಯರಿಗೆ ಉಚಿತವಾದ ಗೃಹೋಪಯೋಗಿ ವಿದ್ಯುತ್ ಉಪಕರಣಗಳ ದುರಸ್ತಿ ತರಬೇತಿಯನ್ನು ಉಡುಪಿ ಜಿಲ್ಲೆಯ ಬ್ರಹ್ಮಾವರದ 52ನೇ ಹೇರೂರಿನಲ್ಲಿ ಇರುವ ಡಾ. ಡಿ.ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ ಕೆನರಾ ಬ್ಯಾಂಕಿನ ಪ್ರಾಯೋಜಕತ್ವದಲ್ಲಿ ನಡೆಯುತ್ತಿರುವ ಗ್ರಾಮಾಭಿವೃದ್ಧಿ ಮತ್ತು ಸ್ವ ಉದ್ಯೋಗ ತರಬೇತಿ ಸಂಸ್ಥೆ (ರುಡ್ ಸೆಟ್ ಸಂಸ್ಥೆ) ಯಲ್ಲಿ ಒಂದು ತಿಂಗಳ ಕಾಲ ಊಟ-ವಸತಿ, ಸಮವಸ್ತ್ರ ಜೊತೆಗೆ ತರಬೇತಿ ನಡೆಯಲಿದೆ.
ಕೇವಲ ಕೌಶಲ್ಯ ತರಬೇತಿ ಅಲ್ಲದೇ ವ್ಯಕ್ತಿತ್ವ ವಿಕಾಸನ, ಉದ್ಯಮಶೀಲತೆ, ಸರಕಾರಿ ಮತ್ತು ಬ್ಯಾಂಕ್ ಯೋಜನೆ, ಸಹಾಯಧನಯ ಬಗ್ಗೆ, ಸಮಯ ನಿರ್ವಹಣೆ, ಮಾರುಕಟ್ಟೆ ಕೌಶಲ್ಯ, ಮಾತುಗಾರಿಕೆ, ಸಮಸ್ಯೆ ಬಗೆಹರಿಸುವ ರೀತಿ, ರಿಸ್ಕ್ ಎದುರಿಸುವ ಕೌಶಲ್ಯ ವನ್ನು ಸಹ ತಿಳಿಸಿಕೊಡಲಾಗುತ್ತದೆ. ತರಬೇತಿಯ ಕೊನೆಗೆ ಪ್ರಮಾಣ ಪತ್ರ ನೀಡುತ್ತೇವೆ.ಹಾಗೂ ತರಬೇತಿಯನ್ನು ಪಡೆದುಕೊಂಡ ಹೋದ ನಂತರ ಪ್ರಗತಿ ಅವಲೋಕನ, ಮಾರ್ಗದರ್ಶನ, ಸಹಾಯ, ಸಹಕಾರ ಎರಡು ವರ್ಷಗಳ ಕಾಲ ನಿರಂತರವಾಗಿ ಸಂಸ್ಥೆಯ ಕಡೆಯಿಂದ ಉಚಿತವಾಗಿ ನೀಡಲಾಗುತ್ತದೆ.
ದಿನಾಂಕ 01.06.2023 ರಿಂದ 30.06.2023ರ ವರೆಗೆ ಈ ತರಬೇತಿ ನಡೆಯಲಿದ್ದು, ತರಬೇತಿ ಪಡೆಯಲು ಬಯಸುವವರು ಗ್ರಾಮೀಣ ಭಾಗದ 18 ರಿಂದ 45 ವರ್ಷದ ಒಳಗಿನವರು, ಬಿ.ಪಿ.ಎಲ್ ಕುಟುಂಬದ ಸದಸ್ಯರಾಗಿ ಇರಬೇಕು, ಕನ್ನಡ ಓದಲು ಬರೆಯಲು ಬರುವ ಮುಂದೇ ಇದನ್ನೇ ವೃತ್ತಿಯನ್ನಾಗಿ ಮಾಡಲು ಇಚ್ಚಿಸುವವರು ನಿಮ್ಮ ಹೆಸರು, ವಿಳಾಸ, ನಿಮ್ಮ ಮೊಬೈಲ್ ನಂ. ಜನ್ಮ ದಿನಾಂಕ ಬರೆದು ನೀವು ಪಡೆಯಲು ಇಚ್ಚಿಸುವ ತರಬೇತಿಯ ಯಾವುದೆಂದು ಬರೆದು, ನಿಮ್ಮ ಹೆಸರು ಇರುವ ರೇಷನ್ ಕಾರ್ಡ್, ಆಧಾರ್ ಕಾರ್ಡ್ ಇರಿಸಿ ತಕ್ಷಣ ಈ ಕೆಳಗಿನ ವಿಳಾಸಕ್ಕೆ ಅರ್ಜಿ ಸಲ್ಲಿಸಬಹುದು ಅಥವಾ ಈ ಕೆಳಗಿನ ವಾಟ್ಸಪ್ ನಂ. ಕಳುಹಿಸಿ ಕೊಡಿ.
ನಿರ್ದೇಶಕರು, ರುಡ್ ಸೆಟ್ ಸಂಸ್ಥೆ, 52ನೇ ಹೇರೂರು, ಬ್ರಹ್ಮಾವರ-576213, ಉಡುಪಿ ಜಿಲ್ಲೆ, ವಾಟ್ಸಪ್ ನಂ. 9632561145, 9448348569,9844086383, 9611544930,9591233748, 8861325564. ವೆಬ್ ಸೈಟ್ ನ ಮೂಲಕ ಸಹ ಅರ್ಜಿ ಸಲ್ಲಿಸಬಹುದು. www.rudsetitraining.org
ಇಮೇಲ್ ವಿಳಾಸ- [email protected]