ಕೋಟ: ಕೋಟತಟ್ಟು ಕೊರಗ ಸಮುದಾಯದವರ ಮೆಹಂದಿ ಕಾರ್ಯಕ್ರಮದಲ್ಲಿ ನಡೆದ ಲಾಠಿ ಚಾರ್ಜ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊರಗ ಸಮುದಾಯದವರೂ ಸೇರಿದಂತೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆನ್ನಲಾದ ಏಳು ಮಂದಿಯ ಮೇಲೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೋಟ ಠಾಣೆಯ ಪೊಲೀಸ್ ಕಾನ್ಸ್ಟೇಬಲ್ ಜಯರಾಮ ನಾಯ್ಕ ಎಲ್ ಎಂಬವರು ಈ ಬಗ್ಗೆ ದೂರು ನೀಡಿದ್ದು, ಅದರಂತೆ ರಾಜೇಶ್, ಸುದರ್ಶನ್, ಗಣೇಶ ಬಾರ್ಕೂರು, ಸಚಿನ್, ಗಿರೀಶ್ ಹಾಗೂ ಸ್ಥಳೀಯರಾದ ನಾಗೇಂದ್ರ
ಪುತ್ರನ್, ನಾಗರಾಜ ಪುತ್ರನ್ ಎಂಬವರ ಮೇಲೆ ಪ್ರಕರಣ ದಾಖಲಾಗಿದೆ.
ಜಯರಾಮ ನಾಯ್ಕ ಎಲ್ ಎಂಬವರು ಕೋಟ ಠಾಣೆಯಲ್ಲಿ ಕಾನ್ಸ್ಟೇಬಲ್ ಆಗಿ ಕೆಲಸ ನಿರ್ವಹಿಸುತ್ತಿದ್ದು ಡಿ. 27 ರಂದು ಠಾಣಾ ಮೀಸಲು ಕರ್ತವ್ಯಕ್ಕೆ ನೇಮಿಸಲಾಗಿತ್ತು. ಕರ್ತವ್ಯ ಮುಗಿಸಿ ವಸತಿಗೃಹದಲ್ಲಿ ವಿಶ್ರಾಂತಿಯಲ್ಲಿರುವಾಗ ಠಾಣಾ
ಪೊಲೀಸ್ ಉಪನಿರೀಕ್ಷಕರಾದ ಸಂತೋಷ್ ಬಿ.ಪಿ ರವರು ರಾತ್ರಿ 10:45 ಗಂಟೆಗೆ ಕರೆ ಮಾಡಿ ಕೋಟತಟ್ಟು ಗ್ರಾಮದ ಚಿಟ್ಟಿಬೆಟ್ಟುವಿನ ರಾಜೇಶ್ ಎಂಬುವವರ ಮನೆಯಲ್ಲಿ ಮೆಹಂದಿ ಕಾರ್ಯಕ್ರಮಕ್ಕೆ ಏರುಧ್ವನಿಯಲ್ಲಿ ಡಿಜೆ ಸೌಂಡ್ ಅನ್ನು
ಹಾಕಿ ಮೆಹಂದಿ ಮನೆಯ ಎದುರಿನ ಸಾರ್ವಜನಿಕ ರಸ್ತೆಯಲ್ಲಿ ಸುಮಾರು 30-50 ಜನ ಮಧ್ಯ ಸೇವನೆ ಮಾಡಿ ಕೇಕೆ ಹಾಕುತ್ತಾ ನೃತ್ಯ ಮಾಡುತ್ತಿದ್ದು ಈ ಬಗ್ಗೆ ಜಯರಾಮ ನಾಯ್ಕ ಎಲ್ ಅವರು ಠಾಣಾಧಿಕಾರಿಯವರೊಂದಿಗೆ ಸ್ಥಳಕ್ಕೆ ಭೇಟಿ ನೀಡಿದಾಗ ಏಳು ಮಂದಿ ಹಾಗೂ ಇತರರು ಡಿಜೆ ಸೌಂಡ್ ನ್ನು ಜೋರಾಗಿ ಹಾಕಿಕೊಂಡು ನೃತ್ಯ ಮಾಡುತ್ತಿರುವುದು ಕಂಡು ಬಂದಿದೆ.
ಈ ವೇಳೆ ಸ್ಥಳದಲ್ಲಿ ಹಾಜರಿದ್ದ ಸ್ಥಳೀಯ ನಿವಾಸಿ ಸುಬ್ರಹ್ಮಣ್ಯ ಉರಾಳ ರವರು ಪಿ.ಎಸ್‌ಐರವರ ಬಳಿ ತನ್ನ ತಾಯಿಗೆ ಹೃದಯ ಸಂಬಂಧಿ ತೊಂದರೆ ಇದ್ದು ಡಿಜೆ ಸೌಂಡ ಅನ್ನು ಮೆಲ್ಲನೆ ಇಡುವಂತೆ 112 ಗೆ ಮಾಹಿತಿ ನೀಡಿದ್ದು 112
ಸಿಬ್ಬಂದಿಯವರು ಸ್ಥಳಕ್ಕೆ ಬಂದಾಗ ಅವರಲ್ಲಿಯೂ ಸಹಆರೋಪಿಗಳು ಉಡಾಫೆಯಾಗಿ ಮಾತನಾಡಿದ್ದಾರೆ ಎನ್ನಲಾಗಿದೆ.
ಆಗ ಪಿ.ಎಸ್.ಐ ಅವರು ಡಿಜೆ ಸೌಂಡ್ ಅನ್ನು ಕಡಿಮೆ ಮಾಡುವಂತೆ ತಿಳಿಸಿದಾಗ ಆರೋಪಿಗಳು ಗುಂಪು
ಕಟ್ಟಿಕೊಂಡು ಕೈಯಲ್ಲಿ ದೊಣ್ಣೆ ಹಿಡಿದುಕೊಂಡು ಪಿ.ಎಸ್.ಐ ಅವರ ಬಳಿ “ನೀವು ಏನು ಮಾಡಿತ್ತೀರಾ ನಾವು ಬಂದ್ ಮಾಡುವುದಿಲ್ಲ” ಎಂದು ಉಡಾಫೆಯಾಗಿ ಮಾತನಾಡಿ ಸಮವಸ್ತ್ರದಲ್ಲಿದ್ದ ಪಿ.ಎಸ್.ಐ ಅವರನ್ನು ಕೈಯಿಂದ
ದೂಡಿದ್ದಾರೆ ಎಂದು ತಿಳಿಸಲಾಗಿದೆ.
ಆರೋಪಿತರು ಹಲ್ಲೆ ಮಾಡಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಜಯರಾಮ ದೂರಿನಲ್ಲಿ ತಿಳಿಸಿದ್ದಾರೆ. ಜಯರಾಮ ನೀಡಿರುವ ದೂರಿನಂತೆ ಕೋಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಕೊರಗ ಕಾಲೋನಿಗೆ ಮುಖಂಡರ ಭೇಟಿ
ಕೋಟತಟ್ಟು ಕೊರಗ ಕಾಲೋನಿಯಲ್ಲಿ ಸೋಮವಾರದ ನಡೆದ ಲಾಠಿ ಚಾರ್ಜ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಜಂಗದಳ ರಾಜ್ಯ ಸಂಚಾಲಕ ಸುನೀಲ್ ಕೆ.ಆರ್ ಭೇಟಿ ನೀಡಿ ಸಮಯದಾಯಕ್ಕೆ ಸಾಂತ್ವನ ಹೇಳಿದರು.
ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ ಹಿಂದೂ ಸಮುದಾಯದ ಒಂದು ಭಾಗವಾಗಿರುವ ಕೊರಗ ಸಮುದಾಯಕ್ಕೆ ಅನ್ಯಾಯವಾಗಲು ಹಿಂದೂ ಸಂಘಟನೆಗಳು ಎಂದೂ ಬಿಡುವುದಿಲ್ಲ. ಈ ಪ್ರಕರಣವನ್ನು ನೇರವಾಗಿ ಕಟುವಾದ ಶಬ್ದದಲ್ಲಿ ಖಂಡಿಸುವುದರ ಜೊತೆ ನಿರಂತವಾಗಿ ಆ ಸಮುದಾಯಕ್ಕೆ ಆಸರೆಯಾಗುವ ಕೆಲಸ ಮಾಡುತ್ತದೆ. ಪ್ರಸ್ತುತ ನಡೆದ ವಿದ್ಯಾಮಾನದಲ್ಲಿ ಪೋಲಿಸ್ ಇಲಾಖೆ ಕೊರಗ ಸಮುದಾಯ ಸೇರಿದಂತೆ ಇತರರ ಮೇಲೆ ದಾಖಲಿಸಿದ ಪ್ರಕರಣವನ್ನು ಶೀಘ್ರದಲ್ಲಿ ಹಿಂಪಡೆಯಬೇಕು ಇಲ್ಲವಾದಲ್ಲಿ ಉಗ್ರ ಹೋರಾಟ ಕೈಗೊಂಡು ಆ ಸಮುದಾಯಕ್ಕೆ ನ್ಯಾಯ ದೊರಕಿಸುತ್ತೇವೆ ಎಂದು ಉಲ್ಲೇಖಿಸಿದರು. ಕೊರಗ ಸಮುದಾಯದ ಗಣೇಶ್ ಕೊರಗ, ಗಣೇಶ್ ಬಾರ್ಕೂರು, ಮಹಾಬಲ ಕೋಟ, ವಿಶ್ವ ಹಿಂದೂ ಪರಿಷತ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ್ ಮೆಂಡನ್, ಭಜರಂಗದಳದ ಜಿಲ್ಲಾ ಸಂಯೋಜಕ ಸುರೇಂದ್ರ ಕೋಟೇಶ್ವರ, ವಿಶ್ವ ಹಿಂದೂ ಪರಿಷತ್ ಬ್ರಹ್ಮಾವರ ಘಟಕದ ಅಧ್ಯಕ್ಷ ರಾಘವೇಂದ್ರ ಕುಂದರ್, ಕಾರ್ಕಳ ತಾಲೂಕು ಸಂಚಾಲಕ ಚೇತನ್ ಪೆರ್ಲಕೆ, ಬಜರಂಗದಳ ಕುಂದಾಪುರ ತಾಲೂಕು ಸಹಸಂಚಾಲಕ ಶ್ರೀನಾಥ್ ಶೆಟ್ಟಿ, ವಿಶ್ವ ಹಿಂದೂ ಪರಿಷತ್ ಕುಂದಾಪುರ ತಾಲೂಕು ಕಾರ್ಯದರ್ಶಿ ಪ್ರದೀಪ್, ಮುಖಂಡರುಗಳಾದ ಮಾರುತಿ, ಹರ್ಷವರ್ಧನ್, ಸತೀಶ್ ಕುಂದರ್, ರತ್ನಾಕರ ಬಾರಿಕೆರೆ, ಪ್ರಸಾದ್ ಬಿಲ್ಲವ,
ಆಮ್ ಆದ್ಮಿ ಪಕ್ಷದ ನಿಯೋಗ ಭೇಟಿ: ಆಪ್ ಮುಖಂಡ ಮಾಜಿ ಶಾಸಕ ಬಸವರಾಜ್ ಭೇಟಿ ನೀಡಿ ಸಾಂತ್ವನ ಹೇಳಿದರು. ಆಮ್ ಆದ್ಮಿ ಪಕ್ಷದ ಉಡುಪಿ ಜಿಲ್ಲಾ ಮುಖಂಡರುಗಳಾದ ಶ್ರೀಕಾಂತ್, ಆಶ್ಲೆ, ರಾಬರ್ಟ್, ಸ್ಟೀಫನ್ ಲೋಬೋ, ಜುನೇದ್, ವಿಜಯಾನಂದ ಮತ್ತಿತರರು ಉಪಸ್ಥಿತರಿದ್ದರು.