ಉಡುಪಿ, ಮಾ. 5: ಹೆಚ್.ಡಿ.ಎಫ್.ಸಿ ಬ್ಯಾಂಕ್, ಕುಂದಾಪುರ ಶಾಖೆಯಲ್ಲಿ ಖಾತೆ ಹೊಂದಿದ ವ್ಯಕ್ತಿಯೊಬ್ಬರಿಗೆ ದಿನಾಂಕ 04.03.2023 ರಂದು ಯಾರೋ ಅಪರಿಚಿತ ವ್ಯಕ್ತಿ ಪಾನ್ಕಾರ್ಡ್ ಅಪ್ಡೇಟ್ ಮಾಡಲು ಸಂದೇಶ ಕಳುಹಿಸಿದ್ದು ಸದ್ರಿ ಸಂದೇಶದಲ್ಲಿರುವ ಲಿಂಕ್ನ್ನು ಬ್ಯಾಂಕ್ನಿಂದ ಕಳುಹಿಸಿರುವುದಾಗಿದೆ ಎಂದು ಪಿರ್ಯಾದಿದಾರರು ನಂಬಿ ಸದ್ರಿ ಲಿಂಕ್ನಲ್ಲಿ ವಿವರವನ್ನು ಅಪ್ಡೇಟ್ ಮಾಡಿದಲ್ಲಿ ಬ್ಯಾಂಕ್ ಖಾತೆಯಿಂದ ರೂ.1,00,000 ಹಣ ಆನ್ ಲೈನ್ ಮುಖೇನ ವರ್ಗಾವಣೆಗೊಂಡಿರುತ್ತದೆ.
ಯಾರೋ ಅಪರಿಚಿತ ವ್ಯಕ್ತಿಗಳು ಬ್ಯಾಂಕ್ ಅಧಿಕಾರಿ ಎಂದು ನಂಬಿಸಿ ವಂಚಿಸಿ ಹಣ ವರ್ಗಾವಣೆ ಮಾಡಲಾಗಿದೆ ಎಂದು ಸುಧಾಕರ್ ಎಂಬವರು ನೀಡಿದ ದೂರಿನಂತೆ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.