ಕೋಟ: ಸೋಮವಾರ ರಾತ್ರಿ ಕೋಟತಟ್ಟು ಕೊರಗ ಕಾಲೋನಿಯ ಮೆಹೆಂದಿ ಕಾರ್ಯಕ್ರಮದಲ್ಲಿ ಕೋಟ ಠಾಣಾ ಪೊಲೀಸರ ಲಾಠಿ ಚಾರ್ಜ್ ಆರೋಪ ಕೇಳಿ ಬಂದಿದ್ದು, ಉಡುಪಿ ಹಿಂದೂ ಜಾಗರಣಾ ವೇದಿಕೆಯ ಮುಖಂಡ ಪ್ರಕಾಶ್ ಕುಕ್ಕೆಹಳ್ಳಿ ನೇತೃತ್ವದ ತಂಡ ಭೇಟಿ ನೀಡಿ ಸಾಂತ್ವನ ಹೇಳಿ ದಾಳಿಯನ್ನು ಖಂಡಿಸಿದೆ.
ಕೊರಗ ಸಮುದಾಯದ ಮೇಲೆ ದಾಳಿಯನ್ನು ಸಹಿಸಲು ಸಾಧ್ಯವಿಲ್ಲ. ಘಟನೆಗೆ ಕಾರಣರಾಗಿರುವ ಠಾಣಾಧಿಕಾರಿ ಹಾಗೂ ಠಾಣಾ ಸಿಬ್ಬಂದಿಗಳನ್ನು ವಿರುದ್ಧ ಕ್ರಮ ಕೈಗೊಂಡು ಸಮುದಾಯಕ್ಕೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದೆ.
ಕೊರಗ ಸಮುದಾಯದ ಜೊತೆ ನಮ್ಮ ಸಂಘಟನೆ ನಿರಂತವಾಗಿ ಇರುತ್ತದೆ. ಇನ್ನು ಮುಂದೆ ಇಂತಹ ಘಟನೆಗಳು ಸಂಭವಿಸದಂತೆ ಸಂಬಂಧಪಟ್ಟ ಇಲಾಖೆ ಎಚ್ಚರಿಕೆ ವಹಿಸಬೇಕಾಗಿದೆ ಎಂದು ಪುನರುಚ್ಚರಿಸಿದರು. ಈ ಸಂದರ್ಭದಲ್ಲಿ ಸಂಘಟನೆಯ ಪ್ರಮುಖರು ಉಪಸ್ಥಿತರಿದ್ದರು.