ಕಾರ್ಕಳ: ಗ್ರಾಮಗಳಲ್ಲಿರುವ ಸಂಘ ಸಂಸ್ಥೆಗಳು ಉತ್ತಮವಾಗಿ ಕಾರ್ಯನಿರ್ವಹಿಸಿದರೆ ಗ್ರಾಮದ ಅಭಿವೃದ್ಧಿ ಸಾಧ್ಯ. ಇದಕ್ಕೆ ಉತ್ತಮ ಉದಾಹರಣೆ ಎಂಬಂತೆ ಯುವಕ ಮಂಡಲ ಸಾಣುರು ಸ್ಥಳೀಯ ಜನರನ್ನು ಒಗ್ಗೂಡಿಸಿ ಗ್ರಾಮದ ಏಳಿಗೆಗಾಗಿ ಅರ್ಪಣಾ ಮನೋಭಾವದಿಂದ ಕಾರ್ಯನಿರ್ವಹಿಸುತ್ತಿದೆ.
ಗ್ರಾಮೀಣಾಭಿವೃದ್ಧಿ ಪರಿಕಲ್ಪನೆ ಸಾಕಾರಗೊಳಿಸಲು ಯುವಕ ಮಂಡಲ ಸಾಣೂರು ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಹಲವಾರು ದಶಕಗಳಿಂದ ಕ್ರಿಯಾಶೀಲ ಪ್ರಯತ್ನ ನಡೆಸುತ್ತಿದೆ.
ಭಾರತ ಸರ್ಕಾರ ಯುವ ಕಾರ್ಯ ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ ಸಂಘಟನೆ, ಉಡುಪಿ ಜಿಲ್ಲಾಡಳಿತ, ಉಡುಪಿ ಜಿಲ್ಲಾ ಪಂಚಾಯತ್ ಉಡುಪಿ ಇವುಗಳ ಸಂಯುಕ್ತ ಆಶ್ರಯದಲ್ಲಿ ರಾಜ್ಯ ಅತ್ಯುತ್ತಮ ಯುವ ಮಂಡಲ ಪ್ರಶಸ್ತಿ ಪುರಸ್ಕೃತ ಯುವಕ ಮಂಡಲ (ರಿ.) ಸಾಣೂರು ಇದರ ಸ್ವಚ್ಛ ಸಾಣೂರು ತಂಡದಿಂದ ದೇಶದ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಸಂಭ್ರಮದ ಪ್ರಯುಕ್ತ ಕ್ಲೀನ್ ಇಂಡಿಯಾ ಪ್ಲಾಸ್ಟಿಕ್ ಮುಕ್ತ ಪ್ರದೇಶ ಕಾರ್ಯಕ್ರಮದಡಿ ಪ್ರತಿ ಆದಿತ್ಯವಾರ ಸ್ವಚ್ಚತಾ ಸಾಪ್ತಾಹಿಕ ಸ್ವಚ್ಛತಾ ಆಂದೋಲನ ನಡೆಯುತ್ತಿದೆ.
ಹದಿಮೂರನೇ ವಾರದ ಸ್ವಚ್ಛತಾ ಸಾಪ್ತಾಹಿಕ: ಪುಲ್ಕೇರಿ ಬೈಪಾಸ್ ಮಠದಕೆರೆಯಿಂದ ಕುಂಟಲ್ಪಾಡಿವರೆಗೆ 13ನೇ ವಾರದ ಸ್ವಚ್ಛತಾ ಅಭಿಯಾನ ನಡೆಯಿತು.
ಸಾಣೂರು ಯುವಕ ಮಂಡಲದ ಅಧ್ಯಕ್ಷರಾದ ಪ್ರಸಾದ್ ಪೂಜಾರಿ, ಕಾರ್ಯದರ್ಶಿ ಮೋಹನ್ ಶೆಟ್ಟಿ, ಮಾಜಿ ಅಧ್ಯಕ್ಷರುಗಳಾದ ಮಹೇಶ್ ಕುಮಾರ್, ಜಗದೀಶ್ ಕುಮಾರ್, ಜೊತೆ ಕಾರ್ಯದರ್ಶಿ ಪ್ರಮಿತ್ ಸುವರ್ಣ, ಪದಾಧಿಕಾರಿಗಳಾದ ಪ್ರಸನ್ನ ಆಚಾರ್ಯ, ಜಿತೇಶ್ ರಾವ್, ಸುಮಂತ್, ಸುದರ್ಶನ್ ನಾಯ್ಕ್, ಸುಧಾಕರ್, ಸಂಪತ್, ಸಂದೀಪ್ ಆಚಾರ್ಯ, ವಿದ್ಯಾನಂದ್ ಕೋಟ್ಯಾನ್, ಅಭಿಷೇಕ್, ಸದಾನಂದ ಪೂಜಾರಿ, ವಿಗ್ನೇಶ್ ಮೊದಲಾದವರು ಭಾಗವಹಿಸಿದರು. ಸುಮಾರು 7 ಚೀಲ ತ್ಯಾಜ್ಯಗಳನ್ನು ಅಭಿಯಾನದ ಮೂಲಕ ಸಂಗ್ರಹಿಸಲಾಯಿತು.