ಉಡುಪಿ, ಫೆ. 7: ಉಡುಪಿ ನಗರಸಭಾ ವ್ಯಾಪ್ತಿಯ ಪುತ್ತೂರು ಗ್ರಾಮದ ಅಂಬಾಗಿಲು ವೃತ್ತದ ಸನಿಹ ಶ್ರೀ ರಾಮ್ ಸಂಕೀರ್ಣದಲ್ಲಿ ಕರ್ನಾಟಕ ಒನ್ – ಸಮಗ್ರ ನಾಗರಿಕ ಸೇವಾ ಕೇಂದ್ರದ ಉದ್ಘಾಟನಾ ಕಾರ್ಯಕ್ರಮ ನಡೆಯಿತು.
ಶಾಸಕ ಕೆ. ರಘುಪತಿ ಭಟ್ ಉದ್ಘಾಟನೆ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ನಾಗರಿಕರಿಗೆ ಕ್ಲಪ್ತ ಸಮಯದಲ್ಲಿ ಅತ್ಯುತ್ತಮ ಸೇವೆ ನೀಡುವಂತೆ ಕರೆ ನೀಡಿದರು.
ಕೇಂದ್ರದ ನಿರ್ವಾಹಕಿ ನಿಕಿತಾ ದಿನೇಶ ರಾವ್ ಮಾಹಿತಿ ನೀಡಿದರು. ನಗರಸಭಾ ಸದಸ್ಯರುಗಳಾದ ಜಯಂತಿ ಪೂಜಾರಿ, ಮಂಜುಳಾ ನಾಯಕ್, ಬಾಲಕೃಷ್ಣ ಶೆಟ್ಟಿ, ದಿನೇಶ್ ಪೈ, ಸಂಕೀರ್ಣದ ಮಾಲಕರಾದ ನಮೃತಾ, ನಾಗೇಶ ಶೇಟ್ ಮುಂತಾದವರು ಉಪಸ್ಥಿತರಿದ್ದರು. ಅನಂತೇಶ ಶೇಟ್ ಸ್ವಾಗತಿಸಿ ವಂದಿಸಿದರು.