ಉಡುಪಿ, ಜ.28: ಕಲ್ಯಾಣಪುರ ಸಂತೆಕಟ್ಟೆಯ ಓವರ್ ಪಾಸ್ ಕಾಮಗಾರಿ ಜನವರಿ 30 ಸೋಮವಾರದಿಂದ ಆರಂಭಗೊಳ್ಳಲಿದ್ದು, ಮೊದಲ ಹಂತದಲ್ಲಿ ಉಡುಪಿಯಿಂದ ಬ್ರಹ್ಮಾವರಕ್ಕೆ ಹೋಗುವ ಬದಿಯ ಕಾಮಗಾರಿ ಪ್ರಾರಂಭಗೊಳ್ಳಲಿದೆ. ಕಾಮಗಾರಿ ನಡೆಯುವ ಸಂದರ್ಭದಲ್ಲಿ ಟ್ರಾಫಿಕ್ ನಿಯಂತ್ರಿಸುವ ನಿಟ್ಟಿನಲ್ಲಿ ವಾಹನ ಸವಾರರು ಆದಷ್ಟು ಬದಲಿ ಮಾರ್ಗವನ್ನು ಬಳಸಬೇಕಾಗಿ ಶಾಸಕ ಕೆ. ರಘುಪತಿ ಭಟ್ ವಿನಂತಿಸಿದ್ದಾರೆ.
