ಉಪ್ಪೂರು: ಯುವ ವಿಚಾರ ವೇದಿಕೆ (ರಿ.) ಉಪ್ಪೂರು, ಕೊಳಲಗಿರಿ ವತಿಯಿಂದ ಸಂಘವು ಹಡಿಲು ಭೂಮಿ ಕೃಷಿ ಯೋಜನೆಯಿಂದ ಕೃಷಿ ಮಾಡಿ ದೊರೆತ ಅಕ್ಕಿಯನ್ನು ಉಪ್ಪೂರಿನ ಸಾಲ್ಮರದ ಸ್ಪಂದನ ಭೌದ್ಧಿಕ ದಿವ್ಯಾಂಗರ ವಸತಿ ಕೇಂದ್ರಕ್ಕೆ ವಿತರಿಸಲಾಯಿತು. ಸುಮಾರು 2 ಕ್ವಿಂಟಾಲ್ ಅಕ್ಕಿಯನ್ನು ಸ್ಪಂದನ ಕೇಂದ್ರಕ್ಕೆ ನೀಡಲಾಯಿತು. ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಅಕ್ಕಿಯನ್ನು ಸಂಸ್ಥೆಗೆ ಹಸ್ತಾಂತರಿಸಿದರು.
ಬಳಿಕ ಮಾತನಾಡಿದ ಅವರು, ಕೃಷಿಯ ಅಭಿವೃದ್ಧಿಯಲ್ಲಿ ಯುವಜನರು ಕ್ರಿಯಾಶೀಲತೆಯಿಂದ ಭಾಗವಹಿಸಿದರೆ ಗ್ರಾಮೀಣಾಭಿವೃದ್ಧಿಯ ಪರಿಕಲ್ಪನೆ ಸಾಕಾರಗೊಳ್ಳುವುದು. ಕೃಷಿಯ ಬಗ್ಗೆ ಯುವಜನರಲ್ಲಿ ಆಸಕ್ತಿಯನ್ನು ಹೆಚ್ಚಿಸುವಲ್ಲಿ ಯುವ ವಿಚಾರ ವೇದಿಕೆಯ ಕಾರ್ಯ ಶ್ಲಾಘನೀಯ ಎಂದರು.
ಗ್ರಾಮ ಪಂಚಾಯತ್ ಸದಸ್ಯ ಅಶ್ವಿನ್ ರೋಚ್ ಶುಭ ಹಾರೈಸಿದರು. ಸ್ಪಂದನ ಸ್ಥಾಪಕ ಪ್ರಾಂಶುಪಾಲ ಜನಾರ್ದನ್, ಉಮೇಶ್, ಯುವ ವಿಚಾರ ವೇದಿಕೆ ಅಧ್ಯಕ್ಷರಾದ ದಿನೇಶ್ ಶೆಟ್ಟಿ, ಹಿರಿಯ ಸದಸ್ಯರಾದ ಮಾಧವ, ಕಾರ್ಯದರ್ಶಿ ಸುಕೇಶ್, ಸದಸ್ಯರಾದ ಶೋಭಾ ಯೋಗೀಶ್, ಶಕುಂತಲಾ, ಬೃಂದಾ, ಸೌಮ್ಯ, ಹರಿಣಾಕ್ಷಿ, ಸದಾಶಿವ, ಅಶೋಕ್, ರವೀಂದ್ರ, ಶಶಿಕುಮಾರ್, ಸುಬ್ರಹ್ಮಣ್ಯ, ವೈಭವ್, ಶ್ರೇಯಸ್ ಉಪಷ್ಟಿತರಿದ್ದರು.
ಸುಬ್ರಹ್ಮಣ್ಯ ಆಚಾರ್ಯ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಸದಾಶಿವ ಕುಮಾರ್ ವಂದಿಸಿದರು.