ಮಲ್ಪೆ: ಕೊಡವೂರು ವಾರ್ಡ್ ಅಭಿವೃದ್ಧಿ ಸಮಿತಿ, ಗೆಳೆಯರ ಬಳಗ (ರಿ.) ಲಕ್ಷ್ಮೀನಗರ, ಡಿಜಿಟಲ್ ಸೇವಾ ಕೇಂದ್ರ ಕೊಡವೂರು ಇವರ ಸಹಯೋಗದಲ್ಲಿ ಉಚಿತ ಆಯುಷ್ಮಾನ್ ಕಾರ್ಡ್ ನೋಂದಣಿ ಶಿಬಿರ ಭಾನುವಾರ ಲಕ್ಷ್ಮೀನಗರದಲ್ಲಿ ನಡೆಯಿತು.
ಶೇಖರ್ ಲಕ್ಷ್ಮೀನಗರ ದೀಪ ಬೆಳಗಿಸುವುದರ ಮೂಲಕ ಶಿಬಿರವನ್ನು ಉದ್ಘಾಟಿಸಿದರು. ನಗರಸಭಾ ಸದಸ್ಯರಾದ ವಿಜಯ್ ಕೊಡವೂರು ಮಾತನಾಡಿ, ಈಗಾಗಲೇ ಕೊಡವೂರು ವಾರ್ಡಿನಲ್ಲಿ ಇಂತಹ ಶಿಬಿರವನ್ನು ಪ್ರತೀ ಪರಿಸರದಲ್ಲಿ ಸಂಘ ಸಂಸ್ಥೆಗಳ ಸಹಯೋಗದಿಂದ ಮಾಡುತ್ತಿದ್ದು, ಕೇಂದ್ರ ಹಾಗೂ ರಾಜ್ಯ ಸರಕಾರಗಳ ಯೋಜನೆಯನ್ನು ಎಲ್ಲಾ ಜನರಿಗೂ ಮುಟ್ಟಿಸಲು ಇಂತಹ ಶಿಬಿರದ ಸಹಕಾರಿ ಎಂದರು. ಒಟ್ಟು 73 ಜನರು ಉಚಿತವಾಗಿ ಶಿಬಿರದ ಪ್ರಯೋಜನವನ್ನು ಪಡೆದರು.
ಗೆಳೆಯರ ಬಳಗದ ಅಧ್ಯಕ್ಷರಾದ ಪ್ರಶಾಂತ್, ಡಿಜಿಟಲ್ ಸೇವಾ ಕೇಂದ್ರ ಕೊಡವೂರು ಇದರ ಸುಶ್ಮಿತಾ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಸವಿತ ಡಿ., ಅಮಿತ್, ರಮೇಶ್, ರವಿ, ರಾಜೇಶ್, ವಿನಯ್ ಮುಂತಾದವರು ಉಪಸ್ಥಿತರಿದ್ದರು.