ಉಡುಪಿ: ತೋಟಗಾರಿಕೆ ಇಲಾಖೆಯ ವತಿಯಿಂದ ಹವಾಮಾನಾಧಾರಿತ ಬೆಳೆವಿಮೆ ಯೋಜನೆಯಡಿ ಪ್ರಸಕ್ತ ಸಾಲಿನ ಅಕ್ಟೋಬರ್ 31 ರಿಂದ ಅಗ್ರಿಕಲ್ಚರ್ ಇನ್ಸೂರೆನ್ಸ್ ವಿಮಾ ಕಂಪನಿಯ ವತಿಯಿಂದ ರೈತರ ಖಾತೆಗೆ ಕ್ಲೇಮ್ ಮೊತ್ತವು ಜಮೆ ಆಗುತ್ತಿದ್ದು, ಬೈಂದೂರು ತಾಲೂಕಿನಲ್ಲಿ ವಿಮೆ ಮಾಡಿಸಿದ 9 ಗ್ರಾಮ ಪಂಚಾಯತ್‌ನ 1114 ರೈತ ವಿಮಾ ಪ್ರಕರಣಗಳಿಗೆ ರೂ. 113,87,406 (1 ಕೋಟಿ 13 ಲಕ್ಷ), ಹೆಬ್ರಿ ತಾಲೂಕಿನ ಬೆಳ್ವೆ ಮತ್ತು ಮಡಾಮಕ್ಕಿ ಗ್ರಾಮಗಳ 48 ರೈತರ ವಿಮಾ ಪ್ರಕರಣಗಳಿಗೆ ರೂ. 17,35,077(17.35 ಲಕ್ಷ), ಕುಂದಾಪುರ ತಾಲೂಕಿನ 28 ಗ್ರಾಮ ಪಂಚಾಯತ್‌ನ 2228 ರೈತ ವಿಮಾ ಪ್ರಕರಣಗಳಿಗೆ ರೂ. 2,83,63,988 ಲಕ್ಷ (2 ಕೋಟಿ 83 ಲಕ್ಷ) ವಿಮಾ ಪರಿಹಾರ ಮೊತ್ತ ಬಂದಿದ್ದು, 2839 ಅಡಿಕೆ ಬೆಳೆ ವಿಮಾ ಪ್ರಕರಣಗಳಿಗೆ ರೂ. 385,55,603 ಹಾಗೂ ಕಾಳುಮೆಣಸಿನ ಬೆಳೆಯ 551 ವಿಮಾ ಪ್ರಕರಣಗಳಿಗೆ ರೂ. 29,30,868 ಪಾವತಿಯಾಗಿರುತ್ತದೆ.
ಬೆಳೆ ವಿಮೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಬೆಳೆ ಸಮೀಕ್ಷೆ ತಾಳೆಯಾಗದೇ ವಿಮಾ ಮೊತ್ತ ಪಾವತಿಸಲು ಬಾಕಿ ಇರುವ ಪ್ರಕರಣಗಳು ಆಯಾ ಬ್ಯಾಂಕ್ ಶಾಖಾ ಪ್ರಬಂಧಕರ ಲಾಗಿನ್ ಮತ್ತು ಮೊಬೈಲ್ ತಂತ್ರಾಂಶದಲ್ಲಿ ಬಾಕಿ ಇದ್ದು, ವಿಮೆ ಮೊತ್ತ ಜಮೆಯಾಗದೇ ಇರುವ ರೈತರು ವಿಮೆ ಮಾಡಿಸಿದ ಸಂಬಂಧಪಟ್ಟ ಬ್ಯಾಂಕ್ ಶಾಖೆಯನ್ನು ಸಂಪರ್ಕಿಸುವಂತೆ ಕುಂದಾಪುರ ತಾಲೂಕು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ನಿಧೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.