ಸಿದ್ಧಾಪುರ: ಸಮೃದ್ಧಿ ಯುವಕ ಮಂಡಲ(ರಿ) ಕುಳ್ಳುಂಜೆ ಶಂಕರನಾರಾಯಣ ಇದರ ವತಿಯಿಂದ ಡಾ. ಬಿ ಆರ್ ಅಂಬೇಡ್ಕರ್ ವಸತಿ ಶಾಲೆ ಶಂಕರನಾರಾಯಣ ಇಲ್ಲಿಯ ವಿದ್ಯಾರ್ಥಿಗಳಿಗೆ ಕುಣಿತ ಭಜನೆಯ ಉದ್ಘಾಟನಾ ಕಾರ್ಯಕ್ರಮವು ಡಾ. ಬಿ ಆರ್ ಅಂಬೇಡ್ಕರ್ ವಸತಿ ಶಾಲೆಯಲ್ಲಿ ನಡೆಯಿತು.
ಶಂಕರನಾರಾಯಣ ದೇವಸ್ಥಾನದ ಅನುವಂಶಿಕ ಮೊಕ್ತೇಸರರಾದ ಲಕ್ಷ್ಮೀನಾರಾಯಣ ಉಡುಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಭಜನೆ ಎನ್ನುವುದು ನಾವು ಬಾಲ್ಯ ಜೀವನದಿಂದಲೇ ರೂಢಿಸಿಕೊಂಡು ಬಂದಲ್ಲಿ ಬದುಕಿನಲ್ಲಿ ಉತ್ತಮ ಬದಲಾವಣೆ ಕಾಣಲು ಸಾಧ್ಯ.
ಮನೆ ಮನೆಗಳಲ್ಲಿ ಭಜನೆ ಮೊಳಗಲು ಸಾಧ್ಯ ಎಂದರು. ಸಮೃದ್ಧಿ ಯುವಕ ಮಂಡಲ ಅಧ್ಯಕ್ಷರಾದ ಯೋಗೀಶ ದೇವಾಡಿಗರಾದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವೇದಿಕೆಯಲ್ಲಿ ಡಾ. ಬಿ ಆರ್ ಅಂಬೇಡ್ಕರ್ ವಸತಿ ಶಾಲೆಯ ಪ್ರಾಂಶುಪಾಲರಾದ ಪ್ರಕಾಶ ಶೆಟ್ಟಿ ಉಪಸ್ಥಿತರಿದ್ದು, ರಜತ ಮಹೋತ್ಸವದ ಸಂಭ್ರಮದಲ್ಲಿರುವ ಸಮೃದ್ಧಿ ಯುವಕ ಮಂಡಲದಲ್ಲಿ ಸಾಂಸ್ಕೃತಿಕ, ಧಾರ್ಮಿಕ ವೈದ್ಯಕೀಯ ಶಿಬಿರದಂತಹ ಹತ್ತು ಹಲವಾರು ಕಾರ್ಯಕ್ರಮಗಳೊಂದಿಗೆ ಸದಾ ಚಟುವಟಿಕೆಯಿಂದ ಕೂಡಿರುವುದು ಹೆಮ್ಮೆಯ ವಿಚಾರ ಎಂದರು. ಜಿಲ್ಲಾ ಪ್ರಶಸ್ತಿಯನ್ನು ಪಡೆದಿರುವ ಸಂಸ್ಥೆ ರಾಜ್ಯ, ರಾಷ್ಟ್ರಮಟ್ಟದಲ್ಲಿ ಗುರುತಿಸುವಂತಾಗಲಿ ಎಂದು ಹಾರೈಸಿದರು.
ಸಮೃದ್ಧಿ ಭಜನಾ ಮಂಡಳಿ ಕುಳ್ಳುಂಜೆ ಇದರ ಮುಖ್ಯಸ್ಥರಾದ ಚಂದ್ರ ನಾಯ್ಕ ಕಾಸನಕೊಡ್ಲು, ಕಾರ್ಯದರ್ಶಿ ಸಂದೀಪ ನಾಯ್ಕ ಎಳಜೆಡ್ಡು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾಲಾ ಸಿಬ್ಬಂದಿ ಸತೀಶ್, ಬಸವರಾಜ್, ಪ್ರೇಮ, ಪೂರ್ಣಿಮಾ, ಬಸವರಾಜ್ ಸಿ., ಶಾಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರು, ಸಮೃದ್ಧಿ ಯುವಕ ಮಂಡಲದ ಸದಸ್ಯರು ಉಪಸ್ಥಿತರಿದ್ದರು.
ಪೂರ್ವಾಧ್ಯಕ್ಷರಾದ ಪ್ರವೀಣ ಬಾಳೆಕೊಡ್ಲು ಸ್ವಾಗತಿಸಿ, ಕೇಶವ ಮಕ್ಕಿಮನೆ ವಂದಿಸಿದರು. ಉಪಾಧ್ಯಕ್ಷ ನಾರಾಯಣ ಟಿ ಕಾರ್ಯಕ್ರಮ ನಿರೂಪಿಸಿದರು.