Thursday, November 28, 2024
Thursday, November 28, 2024

ಯಶ್ಪಾಲ್ ಸುವರ್ಣ ನೇತೃತ್ವದಲ್ಲಿ ಮಹಾಲಕ್ಷ್ಮೀ ಬ್ಯಾಂಕ್ ನಿರಂತರ ಪ್ರಗತಿ: ಪೇಜಾವರ ಶ್ರೀ

ಯಶ್ಪಾಲ್ ಸುವರ್ಣ ನೇತೃತ್ವದಲ್ಲಿ ಮಹಾಲಕ್ಷ್ಮೀ ಬ್ಯಾಂಕ್ ನಿರಂತರ ಪ್ರಗತಿ: ಪೇಜಾವರ ಶ್ರೀ

Date:

ಉಡುಪಿ: ಆರೋಗ್ಯವಂತ ದೇಹಕ್ಕೆ ರಕ್ತ ನಾಳಗಳು ಯಾವ ರೀತಿ ಅವಶ್ಯವೋ ಅದೇ ರೀತಿ ಸಮಾಜದಲ್ಲಿ ಸದೃಢ ಆರ್ಥಿಕ ವ್ಯವಸ್ಥೆಯ ನಿರ್ಮಾಣಕ್ಕೆ ನರನಾಡಿಯಂತೆ ಉತ್ತಮ ಬ್ಯಾಂಕಿಂಗ್ ವ್ಯವಸ್ಥೆ ಕೂಡಾ ಪ್ರಾಮುಖ್ಯಗಿದ್ದು, ಕರಾವಳಿ ಜಿಲ್ಲೆಯಲ್ಲಿ ಶಿಸ್ತುಬದ್ಧ ಕಾರ್ಯವೈಖರಿಯಿಂದ ಯಶ್ಪಾಲ್ ಸುವರ್ಣ ನೇತೃತ್ವದಲ್ಲಿ ನಿರಂತರ ಪ್ರಗತಿ ದಾಖಲಿಸುತ್ತಿರುವ ಮಹಾಲಕ್ಷ್ಮೀ ಬ್ಯಾಂಕ್ ಸಾಧನೆ ಅಭಿನಂದನಾರ್ಹ ಎಂದು ಪೇಜಾವರ ಮಠದ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.

ಉಡುಪಿ ಅಜ್ಜರಕಾಡು ಕಲ್ಮಂಜೆ ಟವರ್ಸ್ ನಲ್ಲಿ ಮಹಾಲಕ್ಷ್ಮೀ ಬ್ಯಾಂಕಿನ ವಿಸ್ತರಿತ ಆಡಳಿತ ಕಚೇರಿಯ ಉದ್ಘಾಟನೆಯನ್ನು ನೆರವೇರಿಸಿ ಆಶೀರ್ವಚನ ನೀಡಿದರು. ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದ ಕೇಂದ್ರ ಸರಕಾರದ ಕೃಷಿ ಮತ್ತು ರೈತ ಕಲ್ಯಾಣ ಖಾತೆ ರಾಜ್ಯ ಸಚಿವರಾದ ಶೋಭಾ ಕರಂದ್ಲಾಜೆ ಮಾತನಾಡಿ ಯಶ್ಪಾಲ್ ಸುವರ್ಣ ಅಧ್ಯಕ್ಷತೆಯಲ್ಲಿ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿರುವ ಮಹಾಲಕ್ಷ್ಮೀ ಬ್ಯಾಂಕ್ ಸಾಧನೆ ಸಹಕಾರಿ ಸಂಸ್ಥೆಗಳಿಗೆ ಮಾದರಿಯಾಗಲಿ ಎಂದರು.

ಬ್ಯಾಂಕಿಂಗ್ ಸೇವೆಯೊಂದಿಗೆ ಬ್ಯಾಂಕಿನ ಸಾಮಾಜಿಕ ಬದ್ಧತೆಯ ಪ್ರತಿಭಾ ಪುರಸ್ಕಾರದಂತಹ ಕಾರ್ಯಕ್ರಮಗಳು ನಿರಂತರವಾಗಿ ಮುಂದುವರೆಯಲಿ ಎಂದು ನಾಡೋಜ ಡಾ. ಜಿ. ಶಂಕರ್ ಶುಭ ಹಾರೈಸಿದರು.

ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ. ಎಂ ಎನ್ ರಾಜೇಂದ್ರ ಕುಮಾರ್ ಮಾತನಾಡಿ ಯಶ್ಪಾಲ್ ಸುವರ್ಣರ ದಕ್ಷ ನೇತೃತ್ವದಲ್ಲಿ ಮಹಾಲಕ್ಷ್ಮೀ ಬ್ಯಾಂಕ್ ಸಹಕಾರಿ ಕ್ಷೇತ್ರದಲ್ಲಿ ಮಾದರಿ ಸಂಸ್ಥೆಯಾಗಿ ಮೂಡಿಬರಲಿ ಎಂದು ಶುಭ ಹಾರೈಸಿದರು.

ಬ್ಯಾಂಕಿನ ವಿಸ್ತರಿತ ಆಡಳಿತ ಕಚೇರಿಯ ಉದ್ಘಾಟನೆಯ ಪ್ರಯುಕ್ತ ಬ್ಯಾಂಕಿನ ವತಿಯಿಂದ ಪೇಜಾವರ ಮಠದ ನೀಲಾವರ ಗೋಶಾಲೆಗೆ 2 ಲಕ್ಷ ಮೊತ್ತದ ಚೆಕ್ಕನ್ನು ಪೇಜಾವರ ಶ್ರೀಗಳಿಗೆ ಯಶ್ಪಾಲ್ ಸುವರ್ಣ ಹಸ್ತಾಂತರಿಸಿದರು.

ಸಮಾರಂಭದಲ್ಲಿ ಶಾಸಕರಾದ ಕೆ. ರಘುಪತಿ ಭಟ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮಟ್ಟಾರು ರತ್ನಾಕರ ಹೆಗ್ಡೆ, ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷರಾದ ಜಯ ಸಿ. ಕೋಟ್ಯಾನ್, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷರಾದ ಜಯಕರ ಶೆಟ್ಟಿ ಇಂದ್ರಾಳಿ, ಗೀತಾನಂದ ಫೌಂಡೇಶನ್ ಪ್ರವರ್ತಕರಾದ ಆನಂದ ಸಿ. ಕುಂದರ್, ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷರಾದ ದಯಾನಂದ ಸುವರ್ಣ, ಸಹಕಾರಿ ಮುಖಂಡರಾದ ಬೆಳಪು ದೇವಿಪ್ರಸಾದ್ ಶೆಟ್ಟಿ, ಉದ್ಯಮಿಗಳಾದ ಜೆರ್ರಿ ವಿನ್ಸೆಂಟ್ ಡಯಾಸ್, ಪುರುಷೋತ್ತಮ ಶೆಟ್ಟಿ ಮನೋಹರ್ ಎಸ್. ಶೆಟ್ಟಿ, ಉದಯ ಕುಮಾರ್ ಶೆಟ್ಟಿ ಮುನಿಯಾಲು, ಬಿಜೆಪಿ ಮುಖಂಡರಾದ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ ಕಿರಣ್ ಕುಮಾರ್ ಬೈಲೂರು, ಬ್ಯಾಂಕಿನ ಗ್ರಾಹಕರಾದ ಆನಂದ ಪಿ. ಸುವರ್ಣ, ಸಾಧು ಸಾಲ್ಯಾನ್, ಹರಿಯಪ್ಪ ಕೋಟ್ಯಾನ್, ರಮೇಶ್ ಕೋಟ್ಯಾನ್, ರಾಮಚಂದ್ರ ಕುಂದರ್, ಸುಭಾಷ್ ಮೆಂಡನ್, ರತ್ನಾಕರ ಸಾಲ್ಯಾನ್, ದಯಾನಂದ ಕುಂದರ್, ಪ್ರವೀಣ್ ಶೆಟ್ಟಿ ಕಪ್ಪೆಟ್ಟು ಹಾಗೂ ಬ್ಯಾಂಕಿನ ನಿರ್ದೇಶಕರು, ಸಿಬ್ಬಂದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಯುವನಿಧಿ ಯೋಜನೆ: ಸ್ವಯಂ ಘೋಷಣೆ ಕಡ್ಡಾಯ

ಉಡುಪಿ, ನ.27: ಕರ್ನಾಟಕ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಯುವನಿಧಿ ಯೋಜನೆಗೆ...

ತುಳು ಕಾದಂಬರಿ ಗತಿ ಬದಲಾಯಿಸಿದ ‘ನಾಣಜ್ಜೆರ್’

ಮೂಡುಬಿದಿರೆ, ನ.27: ತುಳು ಕಾದಂಬರಿ ಪ್ರಕಾರದ ದಿಕ್ಕನ್ನೇ ಬದಲಾಯಿಸಿದ ಕೃತಿ ‘ನಾಣಜ್ಜೆರ್...

ದೇಶದ ಸಂಸ್ಕೃತಿಯಲ್ಲಿ ಸಂವಿಧಾನದ ಬೇರು

ವಿದ್ಯಾಗಿರಿ (ಮೂಡುಬಿದಿರೆ), ನ.27: ನಮ್ಮ ಸಂವಿಧಾನದ ಮೂಲತತ್ವಗಳ ಬೇರು ದೇಶದ ಇತಿಹಾಸ,...

ಯಕ್ಷಾರಾಧನೆ ರಂಗದೋಕುಳಿ

ಕೋಟ, ನ.27: ಒಂದು ಕಾಲದಲ್ಲಿ ಯಕ್ಷಗಾನದ ಮಹತ್ವ ಅರಿತವರು ಬಹಳ ವಿರಳವಾಗಿದ್ದರು,...
error: Content is protected !!