ಉಡುಪಿ: ಜಿಲ್ಲಾ ವ್ಯಾಪ್ತಿಯಲ್ಲಿ ನಿರ್ವಹಣಾ ಕೆಲಸಗಳನ್ನು ಕೈಗೊಳ್ಳಲಾಗುವುದರಿಂದ ನವೆಂಬರ್ 8 ರಿಂದ 10 ರ ವರೆಗೆ ವಿವಿಧೆಡೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂನ ಕಚೇರಿ ಪ್ರಕಟಣೆ ತಿಳಿಸಿದೆ.
ನವೆಂಬರ್ 8 ರಂದು 220/110/11ಕೆವಿ ಕೇಮಾರ್ ವಿದ್ಯುತ್ ಉಪಕೇಂದ್ರದಿಂದ ಹೊರಡುವ 11ಕೆವಿ ಫೀಡರ್‌ಗಳಾದ ನಿಟ್ಟೆ, ಕಲ್ಯಾ, ಲೆಮಿನಾ, 110/11 ಕೆವಿ ಬೆಳ್ಮಣ್ ಉಪಕೇಂದ್ರದಿಂದ ಹೊರಡುವ ಬೋಳ ಫೀಡರ್ ಹಾಗೂ 110/11 ಕೆವಿ ಕಾರ್ಕಳ ಉಪಕೇಂದ್ರದಿಂದ ಹೊರಡುವ ಪದವು ಫೀಡರ್‌ನಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ನಿಟ್ಟೆ, ನಿಟ್ಟೆ ಕಾಲೇಜು, ನಿಟ್ಟೆ ವಾಟರ್ ಸಪ್ಲೈ, ಬೊರ್ಗಲ್ ಗುಡ್ಡೆ, ಲೆಮಿನಾ ಇಂಡಸ್ಟ್ರಿಸ್, ದೂಪದಕಟ್ಟೆ, ಕೆಮ್ಮಣ್ಣು, ನೆಲ್ಲಿಗುಡ್ಡೆ, ಬೇಲಾಡಿ, ಬಾರಾಡಿ ಕಲ್ಯಾ, ಬೋಳ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಾಗೂ 110 ಕೆವಿ ಬೆಳ್ಮಣ್ ವಿದ್ಯುತ್ ಉಪಕೇಂದ್ರದಿಂದ ಹೊರಡುವ 11 ಕೆವಿ ಮುಂಡ್ಕೂರು ಫೀಡರ್‌ನಲ್ಲಿ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಮುಂಡ್ಕೂರು, ಕಾಂಜರಕಟ್ಟೆ, ಸಚ್ಚರಿಪೇಟೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಗ್ಗೆ 9 ರಿಂದ ಸಂಜೆ 5 ರ ವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.
110/33/11 ಕೆವಿ ಮಣಿಪಾಲ ವಿದ್ಯುತ್ ಉಪಕೇಂದ್ರದಿಂದ ಹೊರಡುವ 11ಕೆವಿ ಮೂಡುಬೆಳ್ಳೆ, ಕೆ.ಎಂ.ಎಫ್ ಮತ್ತು ಇಂದ್ರಾಳಿ ಫೀಡರಿನಲ್ಲಿ ಹಾಗೂ 110/33/11ಕೆವಿ ಹಿರಿಯಡ್ಕ ವಿದ್ಯುತ್ ಉಪಕೇಂದ್ರದಿಂದ ಹೊರಡುವ 11ಕೆವಿ ಪೆರ್ಡೂರು ಫೀಡರಿನಲ್ಲಿ ಮೆಂಟೆನೆನ್ಸ್ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಮಣಿಪುರ, ಮೂಡುಬೆಳ್ಳೆ, ಮರ್ಣೆ, ಕಟ್ಟಿಂಗೇರಿ, ಕೆಮ್ತೂರು, ಈಶ್ವರನಗರ, ಸರಳೇಬೆಟ್ಟು, ಅರ್ಬಿ, ಪ್ರಗತಿನಗರ, 80 ಬಡಗುಬೆಟ್ಟು, ಹಯಗ್ರೀವ ನಗರ, ಲಕ್ಷ್ಮೀಂದ್ರನಗರ, ಇಂದ್ರಾಳಿ ರೈಲ್ವೆ ನಿಲ್ದಾಣ, ಪುತ್ತಿಗೆ, ಪಕ್ಕಾಲು, ಪೆರ್ಡೂರು ಪೇಟೆ, ಮುತ್ತೂರ್ಮೆ, ಕುಕ್ಕೆಹಳ್ಳಿ, ಪಾಡಿಗಾರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಗ್ಗೆ 9 ರಿಂದ ಸಂಜೆ 5 ರ ವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.
110/11ಕೆವಿ ಬ್ರಹ್ಮಾವರ ಉಪವಿದ್ಯುತ್ ಕೇಂದ್ರದಿಂದ ಹೊರಡುವ 11 ಕೆವಿ ಮಟಪಾಡಿ, ಉಪ್ಪೂರು, ಕೊಳಲಗಿರಿ, ಹೊನ್ನಾಳ, ಚೇರ್ಕಾಡಿ, ಕೊಕ್ಕರ್ಣೆ ಹಾಗೂ 110/11ಕೆವಿ ನಿಟ್ಟೂರು ಉಪವಿದ್ಯುತ್ ಕೇಂದ್ರದಿಂದ ಹೊರಡುವ 11 ಕೆವಿ ಕಲ್ಯಾಣಪುರ ಫೀಡರಿನಲ್ಲಿ ತುರ್ತು ನಿರ್ವಹಣೆ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಮಟಪಾಡಿ, ಉಪ್ಪೂರು, ಮಾಯಾಡಿ, ಸಾಲ್ಮರ, ಕುದ್ರುಬೆಟ್ಟು, ಕೆ.ಜಿ ರೋಡ್, ಕೋಟೆ ರೋಡ್, ನಿಡಂಬಳ್ಳಿ, ಕಲ್ಯಾಣಪುರ, ಉಗ್ಗೇಲ್ ಬೆಟ್ಟು, ಜಾತಬೆಟ್ಟು, ಹಾವಂಜೆ, ಆದಶ್ನಗರ, ಕೀರ್ತಿನಗರ, ಸಾಲಿಕೇರಿ, ಬಿರ್ತಿ, ಹೊನ್ನಾಳ, ಕುಕ್ಕುಡೆ, ಹೇರೂರು, ಚಾಂತಾರು, ಕುಂಜಾಲು, ಆರೂರು, ಚೇರ್ಕಾಡಿ, ಹಲುವಳ್ಳಿ, ಪಡುನೀಲಾವರ, ಎಳ್ಳಂಪಳ್ಳಿ, ತಡೆಕಲ್ಲು, ಪ್ರಗತಿನಗರ, ಜಾರ್ಜೆಡ್ಡು, ಗಣೇಶ್ ಕಲಾಮಂದಿರ, ಕೆ.ಕೆ. ಫಾರ್ಮ್ಸ್, ಸಂತೆಕಟ್ಟೆ, ನೇಜಾರು, ಮೂಡುತೋನ್ಸೆ, ಕೋಡಿಬೆಂಗ್ರೆ, ಬಡಾನಿಡಿಯೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಗ್ಗೆ 9.30 ರಿಂದ ಸಂಜೆ 5.30 ರ ವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
33/11 ಮಣಿಪಾಲ-ಶಿರ್ವ ಲೈನ್‌ನಲ್ಲಿ ಮತ್ತು 33/11ಕೆವಿ ಶಿರ್ವ ಎಂ.ಯು.ಎಸ್.ಎಸ್ ನಲ್ಲಿ ವಾಹಕ ಬದಲಾವಣೆ ಕಾಮಗಾರಿ ಮತ್ತು ಬ್ಯಾಂಕ್ -1 ಗೆ ಸಂಬಂಧಿಸಿದ ಎಂ.ಇ.ಐ ಬ್ರೇಕರ್‌ಗಳ ಸರ್ವಿಸಿಂಗ್ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಉಳಿಯಾರಗೋಳಿ, ಪಾಂಗಳ, ಮೂಡಬೆಟ್ಟು, ಬಂಟಕಲ್ಲು ಗ್ರಾಮ, ಶಂಕರಪುರ ಗ್ರಾಮ, ಕುಂಜಾರುಗಿರಿ, ಸಾಲ್ಮರ, ಪಾಜೈ, ಕುರ್ಕಾಲು, ಇನ್ನಂಜೆ, ಪಡುಬೆಳ್ಳೆ, ಬೆಳ್ಳೆ, ಶಿರ್ವ, ಮಟ್ಟಾರು, ಪದವು, ಪಾಂಬೂರು, ಪಂಜಿಮಾರು, ಪಿಲಾರುಖಾನ, ಪೆರ್ನಾಲು, ಕುತ್ಯಾರು, (ಪುಂಚಲಕಾಡು), ಕಳತ್ತೂರು, ಚಂದ್ರನಗರ, ಕಾಪು, ಉಚ್ಚಿಲ, ಕಲ್ಯ, ಮೂಳೂರು, ಕೊಪ್ಪಲಂಗಡಿ, ಪೊಲಿಪು, ಪಾದೂರು, ಅಬ್ಬೆಟ್ಟು, ಹೇರೂರು, ಮಜೂರು, ಮಲ್ಲಾರು, ಬೆಳಪು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಗ್ಗೆ 9 ರಿಂದ ಸಂಜೆ 5.30 ರ ವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
110/11 ಕೆ.ವಿ ಹಾಲಾಡಿ ವಿದ್ಯುತ್ ಉಪಕೇಂದ್ರದಲ್ಲಿ 110/11 ಕೆ.ವಿ 10 ಎಮ್.ವಿ.ಎ ಪರಿವರ್ತಕ-1 ಹಾಗೂ 110/11 ಕೆ.ವಿ 10 ಎಮ್.ವಿ.ಎ ಪರಿವರ್ತಕ-2 ಮತ್ತು ಸಂಬಂಧಿಸಿದ ಉಪಕರಣಗಳ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ 11 ಕೆ.ವಿ ಶಂಕರನಾರಾಯಣ, ಆವರ್ಸೆ, ಬಿದ್ಕಲ್ಕಟ್ಟೆ, ಬೈಲೂರು, ಬೆಳ್ವೆ, ಹೈಕಾಡಿ, ವಾರಾಹಿ ಮತ್ತು ಕೆ.ಎನ್.ಎನ್.ಎಲ್ ಹಾಲಾಡಿ ಮಾರ್ಗಗಳಲ್ಲಿ, ಅಮಾಸೆಬೈಲು, ಕುಳುಂಜೆ, ಶಂಕರನಾರಾಯಣ, ಹಾಲಾಡಿ-26, ಮಚ್ಚಟ್ಟು, ರಟ್ಟಾಡಿ, ತೊಂಬಟ್ಟು, ಕೆಳಸುಂಕ, ಜಡ್ಡಿನಗದ್ದೆ, ಹಾಲಾಡಿ, ಬಿದ್ಕಲ್ಕಟ್ಟೆ, ಗಾವಳಿ, ಹಾಲಾಡಿ-28, ಮಡಾಮಕ್ಕಿ, ಹಾಲಾಡಿ-76, ಸಿದ್ದಾಪುರ, ಉಳ್ಳೂರು-74, ಕಕ್ಕುಂಜೆ, ಹೆಸ್ಕತ್ತೂರು, ಯಡಾಡಿ-ಮತ್ಯಾಡಿ, ಹಳ್ಳಾಡಿ-ಹರ್ಕಾಡಿ, ಹಾರ್ದಳ್ಳಿ-ಮಂಡಳ್ಳಿ, ಮೊಳಹಳ್ಳಿ, ಬೈಲೂರು, ಕೊಂಡಳ್ಳಿ, ಬೆದ್ರಾಡಿ, ಕೋಣಿಹರ, ಬೆಳ್ವೆ, ಅಲ್ಬಾಡಿ, ಆರ್ಡಿ, ಹೆಂಗವಳ್ಳಿ, ಸೂರ್ಗೋಳಿ, ಶೇಡಿಮನೆ, ಹೈಕಾಡಿ ಮತ್ತು ಗೋಳಿಯಂಗಡಿ ಗ್ರಾಮಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಗ್ಗೆ 9.30 ರಿಂದ ಸಂಜೆ 5 ರ ವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.
ಕುಂದಾಪುರ ವಿದ್ಯುತ್ ಉಪಕೇಂದ್ರದಿಂದ ಹೊರಡುವ 11 ಕೆ.ವಿ ಇಂಡಸ್ಟ್ರೀಯಲ್, ಕೋಟೇಶ್ವರ, ತೆಕ್ಕಟ್ಟೆ, ಕುಂಭಾಶಿ, ಅಂಪಾರು, ಜಪ್ತಿ, ಬಳ್ಕೂರು, ಜಪ್ತಿ ವಾಟರ್ ಸಪ್ಲೈ, ಕೋಡಿ ಮತ್ತು ಗುರುಕುಲ ಮಾರ್ಗಗಳಲ್ಲಿ ಟ್ರೀ ಟ್ರಿಮ್ಮಿಂಗ್ ಮತ್ತು ಮಾರ್ಗ ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಹಂಗಳೂರು, ಕೋಟೇಶ್ವರ, ಜಪ್ತಿ, ಕಾಳಾವರ ಮೊಳಹಳ್ಳಿ, ಅಸೋಡು, ಕೊರ್ಗಿ, ಯಡಾಡಿ-ಮತ್ಯಾಡಿ, ಬೀಜಾಡಿ, ಗೋಪಾಡಿ, ಕುಂಭಾಶಿ, ತೆಕ್ಕಟ್ಟೆ, ಅಂಪಾರು, ಹಳ್ನಾಡು, ಕಾವ್ರಾಡಿ, ಶಂಕರನಾರಾಯಣ, ಕೋಣಿ, ಬಳ್ಕೂರು, ಜಪ್ತಿ, ಹೊಂಬಾಡಿ-ಮಂಡಾಡಿ, ಕಾಳಾವರ, ಮೊಳಹಳ್ಳಿ, ಅಸೋಡು, ಕೊರ್ಗಿ, ಯಡಾಡಿ-ಮತ್ಯಾಡಿ, ಕುಂದಾಪುರ ಪುರಸಭೆಯ ಕುಡಿಯುವ ನೀರಿನ ಸ್ಥಾವರ, ಬಸ್ರೂರು, ಬಿದ್ಕಲ್ಕಟ್ಟೆ, ಆನಗಳ್ಳಿ, ಕಂದಾವರ, ಅಂಕದಕಟ್ಟೆ, ಗೋಪಾಡಿ, ಎಮ್.ಕೋಡಿ, ಹಂಗಳೂರು ಮತ್ತು ಕೋಡಿ ಗ್ರಾಮಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಗ್ಗೆ 10 ರಿಂದ ಸಂಜೆ 5 ರ ವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
110ಕೆವಿ ಬೆಳ್ಮಣ್ ವಿದ್ಯುತ್ ಉಪಕೇಂದ್ರದಿAದ ಹೊರಡುವ 11ಕೆವಿ ಫೀಡರ್ ಗಳಾದ ಸೂಡ, ನಂದಳಿಕೆ ಮತ್ತು ಬೆಳ್ಮಣ್ ಫೀಡರ್‌ಗಳಲ್ಲಿ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ 11ಕೆವಿ ಬೆಳ್ಮಣ್ ಟೌನ್, 11 ಕೆವಿ ಸೂಡ, ಮತ್ತು 11 ಕೆವಿ ನಂದಳಿಕೆ ಫೀಡರಿನಲ್ಲಿ ಬೆಳ್ಮಣ್, ನಂದಳಿಕೆ, ಜಂತ್ರ, ಕೆದಿಂಜೆ, ಮಾವಿನಕಟ್ಟೆ, ಸೂಡ, ಸಕ್ಕೇರಿಬೈಲು, ದೇಂದೊಟ್ಟು ಪದವು, ಕೊರಜೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಗ್ಗೆ 9 ರಿಂದ ಸಂಜೆ 5 ರ ವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
110/11ಕೆವಿ ಕಾರ್ಕಳ ಉಪವಿದ್ಯುತ್ ಸ್ಥಾವರದಿಂದ ಹೊರಡುವ 11ಕೆವಿ ಅಜೆಕಾರು ಮಾರ್ಗದ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಅಜೆಕಾರು, ಶಿರ್ಲಾಲು, ಎಳ್ಳಾರೆ, ಮರ್ಣೆ, ಅಂಡಾರು, ಹೆರ್ಮುಂಡೆ, ಕಡ್ತಲ, ಕುಕ್ಕುಜೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಗ್ಗೆ 9.30 ರಿಂದ ಸಂಜೆ 5 ರ ವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗುತ್ತದೆ.
110/11ಕೆವಿ ಮಣಿಪಾಲ ಎಂ.ಯು.ಎಸ್.ಎಸ್ ನಿಂದ ಹೊರಡುವ 11ಕೆವಿ ಉದ್ಯಾವರ-2 ಫೀಡರಿನಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಅಚ್ಚಡ, ಕಟಪಾಡಿ, ಮಟ್ಟು, ಯೇಣಗುಡ್ಡೆ, ಕೋಟೆ, ಪೊಸಾರು, ಅಗ್ರಹಾರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ನವೆಂಬರ್ 9 ರಂದು ಬೆಳಗ್ಗೆ 9 ರಿಂದ ಸಂಜೆ 5.30 ರ ವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ನವೆಂಬರ್ 10 ರಂದು 110/11ಕೆವಿ ಮಧುವನ ಉಪವಿದ್ಯುತ್ ಕೇಂದ್ರದಿಂದ ಹೊರಡುವ 11 ಕೆವಿ ಬಾರ್ಕೂರು ಎಕ್ಸ್ ಪ್ರೆಸ್ ಫೀಡರಿನಲ್ಲಿ ತುರ್ತು ನಿರ್ವಹಣೆ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಹೊಸಾಳ, ಕಚ್ಚೂರು, ರಂಗನಕೆರೆ, ಹೇರಾಡಿ, ಹನೆಹಳ್ಳಿ, ಕೂರಾಡಿ, ನಡೂರು, ಪಡುನೀಲಾವರ, ಬೆಣ್ಣೆಕುದ್ರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಗ್ಗೆ 9.30 ರಿಂದ ಸಂಜೆ 5.30 ರ ವರೆಗೆ ಹಾಗೂ 110/11ಕೆವಿ ನಂದಿಕೂರು ಉಪವಿದ್ಯುತ್ ಕೇಂದ್ರದಿಂದ ಹೊರಡುವ 11 ಕೆವಿ ಎರ್ಮಾಳು, ನಂದಿಕೂರು ಮತ್ತು ಸಾಂತೂರು ಫೀಡರ್‌ಗಳಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಎರ್ಮಾಳು, ತೆಂಕ, ಬಡಾ, ಪೂಂದಾಡು, ಅದಮಾರು, ಹೆಜಮಾಡಿ, ಅವರಾಲು, ನಡ್ಸಾಲು, ನಂದಿಕೂರು, ಎನ್.ಎಸ್ ರೋಡ್, ಪಡುಬಿದ್ರೆ, ಎಸ್.ಎಸ್ ರೋಡ್, ಡೌನ್ ಟೌನ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಗ್ಗೆ 9 ರಿಂದ ಸಂಜೆ 5.30 ರ ವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದ್ದು, ಸಂಬAಧಪಟ್ಟ ಗ್ರಾಹಕರು ಮೆಸ್ಕಾಂನೊಂದಿಗೆ ಸಹಕರಿಸುವಂತೆ ಪ್ರಕಟಣೆ ತಿಳಿಸಿದೆ.