Tuesday, February 25, 2025
Tuesday, February 25, 2025

ಉದ್ಯಾವರ- ಹಿರಿಯ ವಿದ್ಯಾರ್ಥಿಗಳಿಂದ ಗುರುವಂದನೆ

ಉದ್ಯಾವರ- ಹಿರಿಯ ವಿದ್ಯಾರ್ಥಿಗಳಿಂದ ಗುರುವಂದನೆ

Date:

ಉದ್ಯಾವರ: ಉದ್ಯಾವರ ಸರಕಾರಿ ಪ್ರೌಢ ಶಾಲೆಯ 1992-93ನೇ ಸಾಲಿನ ಎಸ್‌ಎಸ್‌ಎಲ್‌ಸಿ ಹಿರಿಯ ವಿದ್ಯಾರ್ಥಿಗಳಿಂದ ಅಧ್ಯಾಪಕರಿಗೆ ಹಾಗೂ ಕಚೇರಿ ಸಿಬ್ಬಂದಿಗಳಿಗೆ ಗೌರವಿಸುವ ಕಾರ್ಯಕ್ರಮ ಉದ್ಯಾವರ ಲಯನ್ಸ್ ಭವನದಲ್ಲಿ ನಡೆಯಿತು.

ಅಂದು ಮುಖ್ಯೋಪಾಧ್ಯಾಯರೂ, ಆಂಗ್ಲ ಭಾಷೆ ಬೋಧನೆ ಮಾಡಿದ ಮಹಾಬಲ ತಿಂಗಳಾಯ ದೀಪ ಬೆಳಗಿಸಿ ಉದ್ಘಾಟಿಸಿದರು.

ಅಗಲಿದ ಗುರುಗಳಿಗೆ ಹಾಗೂ ಸಹಪಾಠಿಗಳಿಗೆ ನುಡಿನಮನ ಸಲ್ಲಿಸಲಾಯಿತು. ಗಣಿತ ಶಿಕ್ಷಕರಾದ ವಿಠ್ಠಲ ಮಾಸ್ಟರ್, ದೈಹಿಕ ಶಿಕ್ಷಕರಾದ ಉಮಾನಾಥ ಶೆಟ್ಟಿ, ವಿಜ್ಞಾನ ಶಿಕ್ಷಕರಾದ ಐಜೆ ವಿಲಿಯಮ್, ಸಮಾಜ ವಿಜ್ಞಾನ ಶಿಕ್ಷಕರಾದ ಮರ್ಜೋರೀ ಪಯಾಜ್, ಕನ್ಮಡ ಶಿಕ್ಷಕರಾದ ಪಿಆರ್ ಹನಸಿ, ಸಮಾಜ ವಿಜ್ಜಾನ ಶಿಕ್ಷಕರಾದ ಎಂ ಎನ್ ಶೇರಿಗಾರ್, ಟೈಲರಿಂಗ್ ವಿಭಾಗದ ಶರಣಪ್ಪ ಹಾಗೂ ಕಚೇರಿ ಸಿಬ್ಬಂದಿ ವೃಂದದವರಾದ ಕೆ.ಮಾಧವ ಶೇರಿಗಾರ್, ಗೋಪಾಲಕೃಷ್ಣ ನಾಯಕ್, ಅಂಗಾರ ಪೂಜಾರಿ, ಗೋಪಾಲ ದೇವಾಡಿಗ ಗೌರವ ಅಭಿನಂದನೆಗಳನ್ನು ಸ್ವೀಕರಿಸಿದರು‌.

ಸನ್ಮಾನಿತರು ತಮ್ಮ ಅನುಭವಗಳನ್ನು ಹಂಚಿಕೊಂಡರು. ಶಾಲೆಗೆ ಕಂಪ್ಯೂಟರ್ ಕೊಡುಗೆಯಾಗಿ ನೀಡಲಾಯಿತು. ಹಿರಿಯ ವಿದ್ಯಾರ್ಥಿಗಳ ಮಕ್ಕಳಿಂದ ನೃತ್ಯ ವೈವಿಧ್ಯ, ಗಾಯನ ಜರಗಿತು. ಜಗದೀಶ್ ಕುಮಾರ್ ಸ್ವಾಗತಿಸಿ, ಪ್ರಸ್ತಾವಿಕವಾಅಗಿ ಮಾತನಾಡಿದರು. ದಯಾನಂದ ಕರ್ಕೇರ ನಿರೂಪಿಸಿದರು. ದಯಾನಂದ ವಂದಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಹೊಂಬೆಳಕು ಕ್ರೀಡಾ ಹಾಗೂ ಸಾಂಸ್ಕೃತಿಕ ಉತ್ಸವದಲ್ಲಿ ಸಾಲಿಗ್ರಾಮ ಪ.ಪಂ.ಗೆ ನಾಲ್ಕು ಬಹುಮಾನ

ಉಡುಪಿ, ಫೆ.25: ಮಂಗಳೂರಿನ ಅಡ್ಯಾರು ಸಹ್ಯಾದ್ರಿ ಕ್ರೀಡಾಂಗಣದಲ್ಲಿ ನಡೆದ ಪಂಚಾಯತ್ ರಾಜ್...

ಆಸ್ತಿ ತೆರಿಗೆ ಪಾವತಿಗೆ ಸೂಚನೆ

ಉಡುಪಿ, ಫೆ.25: ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಕಟ್ಟಡ / ನಿವೇಶನಗಳನ್ನು...

ವೈದ್ಯಾಧಿಕಾರಿ ಹುದ್ದೆ: ಅರ್ಜಿ ಆಹ್ವಾನ

ಉಡುಪಿ, ಫೆ.25: ಆರೋಗ್ಯ ಇಲಾಖೆಯ ವತಿಯಿಂದ ಜಿಲ್ಲೆಯ ಕಾರ್ಕಳ ಸಾರ್ವಜನಿಕ ಆಸ್ಪತ್ರೆಯಲ್ಲಿ...

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಚಿಣ್ಣರು ಶ್ರೀಕೃಷ್ಣನ ಫ್ರೆಂಡ್ಸ್: ಪುತ್ತಿಗೆ ಶ್ರೀ

ಉಡುಪಿ, ಫೆ.25: ಶ್ರೀಕೃಷ್ಣನಿಗೆ ಮಕ್ಕಳು ಎಂದರೆ ಬಹಳ ಪ್ರೀತಿ.​ ಕೃಷ್ಣನು ತನ್ನ...
error: Content is protected !!