ಉಡುಪಿ: ಹೋಂ ಡಾಕ್ಟರ್ ಫೌಂಡೇಶನ್ ಇದರ ವತಿಯಿಂದ ಕೊಳಲಗಿರಿ ಸಂತೆ ಮೈದಾನದಲ್ಲಿ ಮಂಗಳವಾರ ವಿಶಿಷ್ಟ ದೀಪಾವಳಿ ಕಾರ್ಯಕ್ರಮ ನಡೆಯಿತು. ಶಾರದಾ ಅಂಧ ಕಲಾವಿದರ ಬಳಗ ವತಿಯಿಂದ ಸುಗಮ ಸಂಗೀತದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಬಡ ರೋಗಿಗಳಿಗೆ ಸಹಾಯಧನ, ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಅನಾಥರ ದತ್ತು ಸ್ವೀಕಾರ ಉದ್ದೇಶದಲ್ಲಿ 20 ಬಡ ಕುಟುಂಬಕ್ಕೆ ದಿನಸಿ ವಸ್ತುಗಳ ವಿತರಣೆ, ಬಡ ರೋಗಿಯನ್ನು ಡಯಾಲಿಸಿಸ್‌ಗಾಗಿ ಆಸ್ಪತ್ರೆಗೆ ಸಾಗಿಸಲು ನೆರವಾಗುತ್ತಿರುವ 50 ರಿಕ್ಷಾ ಚಾಲಕರಿಗೆ ಗೌರವ, ಭಾಗ್ಯದ ಜ್ಯೋತಿ ಯೋಜನೆಯ ಫಲಾನುಭವಿ ಕುಟುಂಬಕ್ಕೆ ಗ್ರೈಂಡರ್ ವಿತರಣೆ, ಅದೇ ರೀತಿ ಅಂಧ ಕಲಾವಿದರಿಗೆ ಟೀ ಶರ್ಟ್ ಗಳನ್ನು ನೀಡಲಾಯಿತು.
ಡಾ. ಶಶಿಕಿರಣ್ ಶೆಟ್ಟಿ ಬರೆದ ಕಥಾ ಸಂಕಲನ ‘ಬದುಕು ಬದಲಿಸುವ ಕಥೆಗಳು’ ಪುಸ್ತಕ ಬಿಡುಗಡೆ ಮಾಡಲಾಯಿತು. ಡಾ. ಸುಮಾ ಶೆಟ್ಟಿ, ಬಂಗಾರಪ್ಪ, ರಾಘವೇಂದ್ರ ಪ್ರಭು ಕರ್ವಾಲು, ರಾಘವೇಂದ್ರ ಪೂಜಾರಿ, ನೈನಾ ನಾಯಕ್, ಸುಜಯ, ಶಶಿಕಲಾ ಶೆಟ್ಟಿ, ಉದಯ ನಾಯ್ಕ್ ಮುಂತಾದವರು ಉಪಸ್ಥಿತರಿದ್ದರು.