ಉಡುಪಿ: ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು ಉಡುಪಿ ಇಲ್ಲಿನ ಪ್ರೌಢಶಾಲಾ ವಿಭಾಗದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಸಹಯೋಗದೊಂದಿಗೆ ರಾಷ್ಟ್ರೀಯ ಏಕತಾ ದಿನಾಚರಣೆಯನ್ನು ಆಚರಿಸಲಾಯಿತು. ಅನಘಾ ಹೊಳ್ಳ ಸರ್ದಾರ್ ವಲ್ಲಭಭಾಯಿ ಪಟೇಲ್ ಕುರಿತು ಮಾತನಾಡಿದರು. ಶಿಕ್ಷಕ ಶೇಖರ ಬೋವಿ ರಾಷ್ಟ್ರೀಯ ಏಕತಾ ದಿನದ ಮಹತ್ವದ ಕುರಿತು ಮಾತನಾಡಿದರು
ಮುಖ್ಯ ಶಿಕ್ಷಕಿ ಜಯಲಕ್ಷ್ಮಿ ಅಧ್ಯಕ್ಷತೆ ವಹಿಸಿ ಏಕತಾ ಪ್ರತಿಜ್ಞೆಯನ್ನು ಬೋಧಿಸಿದರು. ಶಿಕ್ಷಕ ವಸಂತ ಜೋಗಿ ಕಾರ್ಯಕ್ರಮ ನಿರೂಪಿಸಿದರು. ವಿಜ್ಞಾನ ಶಿಕ್ಷಕಿ ಇಂದಿರಾ ಉಪಸ್ಥಿತರಿದ್ದರು. ಆಲ್ ಕಾರ್ಗೋ ಸಂಸ್ಥೆಯಿಂದ ಕೊಡ ಮಾಡಲ್ಪಟ್ಟ 86000 ರೂಪಾಯಿಗಳ ವಿದ್ಯಾರ್ಥಿವೇತನದ ಚೆಕ್ ಗಳನ್ನು 30 ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.