ಬ್ರಹ್ಮಾವರ: ಸ್ವಾವಲಂಬಿ ಭಾರತ, ಕೊಡವೂರು ವಾರ್ಡ್ ಅಭಿವೃದ್ಧಿ ಸಮಿತಿ, ವಿಷ್ಣುಮೂರ್ತಿ ಯುವಕ ಮಂಡಲ ಸಹಕಾರದಿಂದ 18 ನೇ ಶಾಲೆ ಆರೂರು ಮಹತೋಭಾರ ಶ್ರೀ ವಿಷ್ಣುಮೂರ್ತಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ 41 ಲಕ್ಷದ 4 ಸಾವಿರದ ವಿಮಾಮೊತ್ತದ ಉಚಿತ ಅಪಘಾತ ಸ್ಟಾರ್ ಹೆಲ್ತ್ ಇನ್ಸೂರೆನ್ಸ್ ವಿಮಾ ಕಾರ್ಡ್ ವಿತರಣೆ ಕಾರ್ಯಕ್ರಮ ಆರೂರು ವಿಷ್ಣುಮೂರ್ತಿ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು.
ವಿಷ್ಣುಮೂರ್ತಿ ದೇವಸ್ಥಾನದ ಅಧ್ಯಕ್ಷರಾದ ಎ. ರತ್ನಾಕರ ಭಟ್ ಉದ್ಘಾಟನೆ ನೆರವೇರಿಸಿದರು. ಸ್ವಾವಲಂಬಿ ಭಾರತ ಜಿಲ್ಲಾ ಪ್ರಮುಖ್ ಹಾಗೂ ಕೊಡವೂರು ನಗರಸಭಾ ಸದಸ್ಯರಾದ ಕೆ ವಿಜಯ ಕೊಡವೂರು ಮಾತನಾಡಿ, ಉಡುಪಿ ಜಿಲ್ಲೆಯ ಸರಕಾರಿ ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಹಾಗೂ ಮಕ್ಕಳಿಗೆ ಕೆಲವು ಕಡೆ ಅವಘಡ ಆಗಿದ್ದನ್ನು ರಕ್ಷಣೆಯಾಗಿರುವುದಕ್ಕೆ ಮನಗಂಡು ಹಲವಾರು ದಾನಿಗಳ ಮುಖಾಂತರ ಮಕ್ಕಳಿಗೆ ಉತ್ತಮ ಸೌಲಭ್ಯ ನೀಡುವುದರಲ್ಲಿ ಇದೊಂದು ದಿಟ್ಟ ಹೆಜ್ಜೆ ಎಂದು ಹೇಳಿದರು. ಶ್ರೀ ರಾಮಚಂದ್ರನ ಆದರ್ಶ ಗುಣಗಳನ್ನು ವಿದ್ಯಾರ್ಥಿಗಳು ಪಾಲಿಸಬೇಕು ಎಂದರು.
ಸ್ಟಾರ್ ಹೆಲ್ತ್ ಇನ್ಸೂರೆನ್ಸ್ ನ ಮಾರಾಟ ವಿಭಾಗದ ಸೀನಿಯರ್ ಮ್ಯಾನೇಜರ್ ಉದಯ ನಾಯ್ಕ್ ಮಾತನಾಡಿ, ಸಂಪೂರ್ಣ ವಿಮಾ ಸೌಲಭ್ಯದ ಬಗ್ಗೆ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಮಾಹಿತಿ ನೀಡಿ, ನಗರಸಭಾ ಸದಸ್ಯ ವಿಜಯ ಕೊಡವೂರವರ ಆದರ್ಶ ಮಹಾನಾಯಕರ ಹಾದಿ, ಅಭಿವೃದ್ಧಿ ಕನಸು ನನಸಾಗಲಿ, ದೇಶದಲ್ಲಿ ಮಾದರಿಯಾಗಲಿ ಎಂದರು.
ಉಡುಪಿ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷೆ ನಳಿನಿ ಪ್ರದೀಪ ರಾವ್ ಶುಭ ಹಾರೈಸಿದರು. ವಿಮಾ ದಾನಿಗಳಾಗಿರುವ ಶ್ರೀ ಮಹಾಗಣಪತಿ ಪೈಂಟಿಂಗ್ ಕಾಂಟ್ರಾಕ್ಟರ್ ಸುರೇಶ್ ಶೇರಿಗಾರ್ ಇವರನ್ನು ಸನ್ಮಾನಿಸಲಾಯಿತು.
ಆರೂರು ಗ್ರಾಮ ಪಂಚಾಯತ್ ಸದಸ್ಯ ಉದಯ ನಾಯ್ಕ್, ಚಂದ್ರಾವತಿ ಹೆಬ್ಬಾರ್, ವಿಷ್ಣುಮೂರ್ತಿ ಯುವಕ ಮಂಡಲದ ಅಧ್ಯಕ್ಷರಾಗಿರುವ ಗಣಪತಿ ನಾಯ್ಕ್, ಕಡಿಯಾಳಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಚಂದ್ರಶೇಖರ್ ನಾಯ್ಕ್, ಕೊಡವೂರ್ ಅಭಿವೃದ್ಧಿ ಸಮಿತಿಯ ವಿನಯ ನಾಯ್ಕ್, ಸಂತೋಷ್, ಯುವಕ ಮಂಡಲದ ಸರ್ವ ಸದಸ್ಯರು, ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು. ಶಾಲೆಯ ಮುಖ್ಯೋಪಾಧ್ಯಾಯರ ಸಂದೀಪ್ ಹೆಗ್ಡೆ ಸ್ವಾಗತಿಸಿ, ಮಹೇಶ್ ಶೇರಿಗಾರ್ ವ೦ದಿಸಿದರು. ಯಾದವ್ ಶೇರಿಗಾರ್ ಕಾರ್ಯಕ್ರಮ ನಿರೂಪಿಸಿದರು.