ಕೋಟ: ಲಕ್ಷ್ಮೀ ಸೋಮ ಬಂಗೇರ ಸರಕಾರಿ ಪ್ರಥಮ ದರ್ಜೆ ಕಾಲೇಜು ಕೋಟ-ಪಡುಕೆರೆ ಇಲ್ಲಿನ ಚುನಾವಣಾ ಸಾಕ್ಷರತಾ ಕ್ಲಬ್ ವತಿಯಿಂದ ‘ಮತದಾರ ಜಾಗೃತಿ ಹಕ್ಕು ಕಾರ್ಯಕ್ರಮ’ ಹಮ್ಮಿಕೊಳ್ಳಲಾಯಿತು.
ಕಾಲೇಜಿನ ಹಳೆ ವಿದ್ಯಾರ್ಥಿ ಹಾಗೂ 2019-20 ನೇ ಸಾಲಿನ ಉಡುಪಿ ಜಿಲ್ಲೆಯ ಕಾಲೇಜು ವಿಭಾಗದ ಅತ್ಯುತ್ತಮ ವಿದ್ಯಾರ್ಥಿ ರಾಯಭಾರಿಯಾಗಿದ್ದ ವಿಘ್ನೇಶ್ ಶೆಣೈ ಪ್ರಜಾಪ್ರಭುತ್ವದಲ್ಲಿ ಮತದಾರನ ಪಾತ್ರವನ್ನು ವಿವರಿಸುತ್ತಾ, 18 ವರ್ಷ ಪ್ರಾಯದವರು ಮತದಾರರ ಪಟ್ಟಿಯಲ್ಲಿ ಹೇಗೆ ಆನ್‌ಲೈನ್‌ನಲ್ಲಿ ಹೆಸರು ನೊಂದಾಯಿಸುವ ಕುರಿತು, ಗುರುತಿನ ಚೀಟಿ ಪಡೆಯುವ ಮತ್ತು ಪರಿಷ್ಕರಿಸುವ ಮತ್ತು ಇ-ಎಪಿಕ್ ಡೌನ್‌ಲೋಡ್ ಮಾಡಿಕೊಳ್ಳುವ ಕುರಿತಾಗಿ ವಿವರವಾದ ಮಾಹಿತಿಯನ್ನು ಚುನಾವಣಾ ಸಾಕ್ಷರತಾ ಕ್ಲಬ್ ಸದಸ್ಯರಿಗೆ ನೀಡಿದರು.
ಯಾವ ರೀತಿಯಲ್ಲಿ ವೋಟರ್ ಹೆಲ್ಪ್ ಲೈನ್ ಆ್ಯಪ್ ಮತ್ತು ಚುನಾವಣಾ ಆಯೋಗದ ಪೋರ್ಟಲ್‌ಗಳನ್ನು ಮನೆಯಲ್ಲಿದ್ದೇ ಬಳಸಿಕೊಳ್ಳಬಹುದೆಂಬ ಮಾಹಿತಿ ನೀಡಿದರು. ಕ್ಲಬ್ ಸಂಚಾಲಕರಾದ ರಾಜಕೀಯ ಶಾಸ್ತ್ರ ಸಹಾಯಕ ಪ್ರಾಧ್ಯಾಪಕರಾದ ಪ್ರಶಾಂತ್ ನೀಲಾವರ ಸ್ವೀಪ್‌ನಲ್ಲಿ ಕಾಲೇಜಿನ ಚುನಾವಣಾ ಸಾಕ್ಷರತಾ ಕ್ಲಬ್ ಮತ್ತು ಸದಸ್ಯರ ಜವಾಬ್ದಾರಿಗಳನ್ನು ತಿಳಿಸಿದರು. ಪ್ರಾಂಶುಪಾಲರಾದ ನಿತ್ಯಾನಂದ ವಿ ಗಾಂವ್ಕರ್ ಶುಭ ಹಾರೈಸಿದರು.