ಉಡುಪಿ: ಬೆಳ್ತಂಗಡಿ ಶಾಸಕ ಪ್ರಬಲ ಹಿಂದುತ್ವವಾದಿ ಹರೀಶ್ ಪೂಂಜಾ ರವರ ಮೇಲೆ ತಲ್ವಾರ್ ದಾಳಿ ನಡೆಸಿ ಜೀವ ಬೆದರಿಕೆಯೊಡ್ಡಿದ್ದ ಮತಾಂಧ ಜಿಹಾದಿ ಶಕ್ತಿಗಳಿಗೆ ಅವರದೇ ಭಾಷೆಯಲ್ಲಿ ಉತ್ತರ ನೀಡಲು ಹಿಂದೂ ಕಾರ್ಯಕರ್ತರು ಸಿದ್ದರಿದ್ದೇವೆ ಎಂದು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್ಪಾಲ್ ಸುವರ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಮಾಜದಲ್ಲಿ ಆಂತರಿಕ ಭದ್ರತೆಗೆ ಧಕ್ಕೆ ತರಲು ಯತ್ನಿಸುತ್ತಿದ್ದ ಪಿಎಫ್ಐ, ಸಿಎಫ್ಐ ಸಂಘಟನೆಗಳ ಟೂಲ್ ಕಿಟ್ ಭಾಗವಾಗಿದ್ದ ಹಿಜಾಬ್ ವಿವಾದ ಸಂದರ್ಭದಲ್ಲಿ ಮತಾಂಧ ಶಕ್ತಿಗಳ ವಿರುದ್ಧ ಕಿಡಿಕಾರಿದ್ದ ಶಾಸಕ ಹರೀಶ್ ಪೂಂಜಾರವರ ಮೇಲೆ ದಾಳಿಗೆ ಯತ್ನ ನಡೆಸುವ ಮೂಲಕ ಕರಾವಳಿ ಜಿಲ್ಲೆಯಲ್ಲಿ ಆತಂಕದ ವಾತಾವರಣ ನಿರ್ಮಿಸಲು ಜಿಹಾದಿ ಶಕ್ತಿಗಳು ಮುಂದಾಗಿದ್ದಾರೆ.
ಹಿಂದೂ ಪರ ರಾಷ್ಟ್ರೀಯವಾದಿ ನಾಯಕರ ಮೇಲೆ ನಿರಂತರ ದಾಳಿ, ಜೀವ ಬೆದರಿಕೆ ಹಾಕಿ ಮಾನಸಿಕ ಸ್ಥೈರ್ಯ ಕುಗ್ಗಿಸಲು ಜಿಹಾದಿ ಶಕ್ತಿಗಳು ಮುಂದಾಗಿದ್ದು, ಕೇಂದ್ರ ಸರಕಾರ ಪಿಎಫ್ಐ ಸಹಿತ 8 ಸಂಘಟನೆಗಳನ್ನು ನಿಷೇಧಿಸಿದ ಬಳಿಕ ಈ ಐಸಿಸ್ ಮನಸ್ಥಿತಿಯ ಮತಾಂಧ ಶಕ್ತಿಗಳು ತೆರೆಮರೆಯಲ್ಲಿ ಇಂತಹ ದುಷ್ಕೃತ್ಯದಲ್ಲಿ ತೊಡಗಿಸಿಕೊಂಡಿದೆ.
ರಾಷ್ಟ್ರೀಯವಾದಿ ಚಿಂತನೆಗಳ ಮೂಲಕ ರಾಜಕೀಯವಾಗಿ ಬೆಳೆದು ಬಂದು ಸದಾ ಜನಪರ ಹೋರಾಟದ ಮೂಲಕ ಶಾಸಕರಾಗಿ ಆಯ್ಕೆಯಾದ ಹರೀಶ್ ಪೂಂಜಾರೊಂದಿಗೆ ಸಮಸ್ತ ಹಿಂದೂ ಸಮಾಜ ಜೊತೆಯಾಗಿ ನಿಲ್ಲಲಿದೆ.
ಹಿಂದುತ್ವದ ವಿಚಾರದಲ್ಲಿ ಎಂದಿಗೂ ರಾಜೀಯಾಗದ ಖಡಕ್ ನಿಲುವು ಹೊಂದಿರುವ ಶಾಸಕ ಹರೀಶ್ ಪೂಂಜಾ, ಪ್ರವೀಣ್ ನೆಟ್ಟಾರು ಹತ್ಯೆ ಸಂದರ್ಭದಲ್ಲೂ ಮತಾಂಧ ಶಕ್ತಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ ಹರೀಶ್ ಪೂಂಜಾರವರ ನಿಲುವು ದೇಶ ವಿರೋಧಿ ಸಂಘಟನೆಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ರಾಜ್ಯ ಹಾಗೂ ಕೇಂದ್ರ ಸರಕಾರ ಶಾಸಕ ಹರೀಶ್ ಪೂಂಜಾ ಮೇಲೆ ತಲ್ವಾರ್ ದಾಳಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಉನ್ನತ ಮಟ್ಟದ ತನಿಖೆ ನಡೆಸಿ ಕೂಡಲೇ ಜಿಹಾದಿ ಶಕ್ತಿಗಳನ್ನು ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು.
ಶಾಸಕರಿಗೆ ಸೂಕ್ತ ಭದ್ರತೆ ಒದಗಿಸಿ, ನಿಷೇಧಿತ ಮತೀಯವಾದಿ ಸಂಘಟನೆಗಳ ಕಾರ್ಯಚಟವಟಿಕೆಗಳ ಬಗ್ಗೆ ತೀವ್ರ ನಿಗಾ ವಹಿಸಿ ತೆರೆಮರೆಯಲ್ಲಿ ಸಕ್ರಿಯವಾಗಿರುವ ಜಾಲವನ್ನು ಬಂಧಿಸಿ ಹೆಡೆಮುರಿ ಕಟ್ಟಿ ತಕ್ಕ ಶಾಸ್ತಿ ಮಾಡಬೇಕಿದೆ ಹಾಗೂ ನಿಷೇಧಿತ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದ ಪದಾಧಿಕಾರಿಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿ ಚಲನವಲನಗಳ ಬಗ್ಗೆ ನಿಗಾ ವಹಿಸಲು ಗೃಹ ಇಲಾಖೆ ಮುಂದಾಗುವಂತೆ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.